ಲಖನೌ(ಉತ್ತರ ಪ್ರದೇಶ): ದೇಶದಲ್ಲಿ ಎಥೆನಾಲ್ ಉತ್ಪಾದಿಸುವ ಅತಿ ದೊಡ್ಡ ರಾಜ್ಯ ಉತ್ತರಪ್ರದೇಶ. ರಾಜ್ಯದಲ್ಲಿ ಸ್ಥಾಪಿಸಲಾದ 54 ಡಿಸ್ಟಿಲರಿಗಳಿಂದ 58 ಕೋಟಿ ಲೀಟರ್ ಎಥೆನಾಲ್ ಉತ್ಪಾದಿಸಲಾಗಿದೆ. ಸರ್ಕಾರದ ವಕ್ತಾರರ ಪ್ರಕಾರ 2020-21 ರಲ್ಲಿ ರಾಜ್ಯವು 58 ಕೋಟಿ ಲೀಟರ್ ಎಥೆನಾಲ್ ಉತ್ಪಾದಿಸುತ್ತಿದೆ. ಜತೆಗೆ ಪರಿಸರ ಉದ್ದೇಶಗಳಿಗಾಗಿ ಪೆಟ್ರೋಲ್ನೊಂದಿಗೆ ಎಥೆನಾಲ್ ಬೆರೆಸಿ ಬಳಸಲಾಗುತ್ತಿದೆ.
ಎಥೆನಾಲ್ ಮಾರಾಟದಿಂದ ಕಬ್ಬು ಕೃಷಿಕರ ಖಾತೆಗಳಿಗೆ ಹೆಚ್ಚುವರಿ 864 ಕೋಟಿ ರೂ.ಜಮಾ ಆಗಿದೆ. ಪೆಟ್ರೋಲ್ನಲ್ಲಿ ಎಥೆನಾಲ್ ಬೆರೆಸುವ ಮೂಲಕ ಉತ್ತರಪ್ರದೇಶ ಸರ್ಕಾರವು ಭಾರತದ ವಿದೇಶಿ ವಿನಿಮಯ ಸಂಗ್ರಹಕ್ಕೆ ಒಟ್ಟು 75.58 ಮಿಲಿಯನ್ ಡಾಲರ್‌ಗಳನ್ನು ಕೊಡುಗೆಯಾಗಿ ನೀಡಿದೆ. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಆರ್ಥಿಕತೆ ಉತ್ತೇಜಿಸಲು ಇದು ಸಹಕಾರಿಯಾಗಿದೆ.