ಕರ್ನಾಟಕ

karnataka

ETV Bharat / bharat

ಎಟಿಎಸ್ ಭರ್ಜರಿ ಕಾರ್ಯಾಚರಣೆ.. ಉಗ್ರರ ಜೊತೆ ನಂಟು ಆರೋಪ, ಎಂಟು ಶಂಕಿತರ ಬಂಧನ

ಯುಪಿ ಎಟಿಎಸ್ 8 ಶಂಕಿತ ಭಯೋತ್ಪಾದಕರನ್ನು ಬಂಧಿಸಿದೆ. ಬಂಧಿತರು ಅಲ್-ಖೈದಾ ಮತ್ತು ಬಾಂಗ್ಲಾದೇಶದ ಭಯೋತ್ಪಾದಕ ಸಂಘಟನೆಯಾದ ಜಮಾತ್-ಉಲ್-ಮುಜಾಹಿದ್ದೀನ್, ಅಲ್-ಖೈದಾ ಅಂಗಸಂಸ್ಥೆಯೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆ ಪುರಾವೆಗಳು ಸಿಕ್ಕಿವೆ ಎನ್ನಲಾಗ್ತಿದೆ.

UP ATS arrests  suspects with links to terror outfits  ATS arrests 8 suspects with links to terror  ಎಟಿಎಸ್ ಭರ್ಜರಿ ಕಾರ್ಯಾಚರಣೆ  ಉಗ್ರರ ಜೊತೆ ನಂಟು ಆರೋಪ  ಅಲ್ ಖೈದಾ ಅಂಗಸಂಸ್ಥೆಯೊಂದಿಗೆ ಸಂಪರ್ಕ  ಮದರಸಾಗಳ ನೆರವಿನಿಂದ ಭಯೋತ್ಪಾದಕ ಜಾಲ  ಶಂಕಿತ ಉಗ್ರರಿಂದ ಎಲ್ಲಾ ಅನುಮಾನಾಸ್ಪದ ದಾಖಲೆಗಳು ಪತ್ತೆ  ಭಯೋತ್ಪಾದಕ ನಿಧಿಗೆ ಸಂಬಂಧಿಸಿದಂತೆ ವಹಿವಾಟು  ಎಟಿಎಸ್‌ನ ವಿವಿಧ ತಂಡಗಳು ಕ್ರಮ
ಎಟಿಎಸ್ ಭರ್ಜರಿ ಕಾರ್ಯಾಚರಣೆ

By

Published : Oct 11, 2022, 8:31 AM IST

Updated : Oct 11, 2022, 9:43 AM IST

ಲಖನೌ/ಸಹಾರನ್‌ಪುರ:ಮದರಸಾಗಳ ನೆರವಿನಿಂದ ಭಯೋತ್ಪಾದಕ ಜಾಲ ಸೃಷ್ಟಿಸಿದ್ದ 8 ಮಂದಿ ಶಂಕಿತ ಭಯೋತ್ಪಾದಕರನ್ನು ಸೋಮವಾರ ಉತ್ತರ ಪ್ರದೇಶ ಭಯೋತ್ಪಾದಕ ನಿಗ್ರಹ ದಳ(ಎಟಿಎಸ್) ಬಂಧಿಸಿದೆ. ಈ ಶಂಕಿತ ಉಗ್ರರನ್ನು ಉತ್ತರ ಪ್ರದೇಶದ ಹರಿದ್ವಾರ, ಮೀರತ್ ಮತ್ತು ನೇಪಾಳ ಗಡಿಯಲ್ಲಿ ಬಂಧಿಸಲಾಗಿದೆ. ಶಂಕಿತ ಉಗ್ರರ ಬಳಿ ಎಲ್ಲಾ ಅನುಮಾನಾಸ್ಪದ ದಾಖಲೆಗಳು ಪತ್ತೆಯಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಆರೋಪಿಗಳ ಖಾತೆಗಳಿಂದ ಭಯೋತ್ಪಾದಕ ನಿಧಿಗೆ ಸಂಬಂಧಿಸಿದಂತೆ ವಹಿವಾಟು ನಡೆಸಲಾಗಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಬಂಧಿತರು ಬಾಂಗ್ಲಾದೇಶದ ಜಮಾತ್-ಉಲ್-ಮುಜಾಹಿದ್ದೀನ್ ಸಂಘಟನೆಗೆ ಸೇರಿದವರಾಗಿದ್ದು, ಇದು ಅಲ್-ಖೈದಾ ಅಂಗಸಂಸ್ಥೆಯಾಗಿದೆ.

ಎಟಿಎಸ್‌ನ ವಿವಿಧ ತಂಡಗಳು ಕಾರ್ಯಾಚರಣೆ ಕೈಗೊಂಡಾಗ ಸಹರಾನ್‌ಪುರದ ಮೊಹಮ್ಮದ್ ಅಲಿಮ್, ಮೊಹಮ್ಮದ್ ಮುಕ್ತಾರ್, ಕಾಮಿಲ್ ಮತ್ತು ಲುಕ್ಮಾನ್, ಅಲಿನೂರ್ ಮತ್ತು ಹರಿದ್ವಾರದ ಮುದಸ್ಸಿರ್, ದಿಯೋಬಂದ್‌ನ ಕಾಮಿಲ್, ಶಹಜಾದ್ ಮತ್ತು ಶಾಮ್ಲಿಯಿಂದ ನವಾಜಿಶ್ ಮತ್ತು ಜಾರ್ಖಂಡ್‌ನ ಲುಕ್ಮಾನ್​ ಸೇರಿದಂತೆ ಎಂಟು ಶಂಕಿತರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಎಲ್ಲಾ ಅಲ್ ಖೈದಾ ಮತ್ತು ಜಮಾತ್ ಮುಜಾಹಿದ್ದೀನ್‌ಗೆ ಭಯೋತ್ಪಾದಕರ ಜಾಲವನ್ನು ಸಿದ್ಧಪಡಿಸಲು ಕೆಲಸ ಮಾಡುತ್ತಿದ್ದರು. ಭಯೋತ್ಪಾದಕರ ಜಾಲವನ್ನು ಸೃಷ್ಟಿಸುವುದು ಅಥವಾ ಮದರಸಾಗಳನ್ನು ಗುರಿಯಾಗಿಸುವುದು ಇವರ ಕಾಯಕವಾಗಿತ್ತು ಎಂದು ತನಿಖೆ ಮೂಲಕ ತಿಳಿದು ಬಂದಿದೆ.

ಈ ಎಲ್ಲಾ ಶಂಕಿತರು ಭಯೋತ್ಪಾದಕರ ವಿರುದ್ಧ ಕೆಲಸ ಮಾಡುವ ಪೊಲೀಸರು ಮತ್ತು ಏಜೆನ್ಸಿಗಳನ್ನು ತಪ್ಪಿಸಲು ವಿಶೇಷ ಅಪ್ಲಿಕೇಶನ್‌ಗಳನ್ನು ಬಳಸಿದ್ದಾರೆ. ಪರಸ್ಪರ ಮಾತನಾಡಲು ಆರೋಪಿಗಳು ಈ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದರು. ಅಷ್ಟೇ ಅಲ್ಲ ಈ ಶಂಕಿತರು ಫೋನ್‌ನಲ್ಲಿ ಪರಸ್ಪರ ಮಾತನಾಡುತ್ತಿರಲಿಲ್ಲ.

ಭಯೋತ್ಪಾದಕ ಚಟುವಟಿಕೆಗಳಿಂದಾಗಿ ಸಹರಾನ್‌ಪುರವು ಆಗಾಗ್ಗೆ ಚರ್ಚೆಯಲ್ಲಿದೆ. ಕೆಲವೊಮ್ಮೆ ಸಹರಾನ್‌ಪುರ ನಗರದಿಂದ ಮತ್ತು ಕೆಲವೊಮ್ಮೆ ಫತ್ವಾಗಳ ನಗರವಾದ ದಿಯೋಬಂದ್‌ನಿಂದ ಐಎಸ್‌ಐ, ಅಲ್ ಖೈದಾ, ಇಂಡಿಯನ್ ಮುಜಾಹಿದ್ದೀನ್ ಸೇರಿದಂತೆ ಹಲವು ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದಾರೆ ಎನ್ನಲಾದ ಶಂಕಿತರು ಸಿಕ್ಕಿಬಿದ್ದಿದ್ದಾರೆ.

ಫತ್ವಾಗಳ ನಗರವಾದ ದಿಯೋಬಂದ್‌ನಲ್ಲಿ ನಕಲಿ ಪಾಸ್‌ಪೋರ್ಟ್‌ಗಳು, ಆಧಾರ್ ಕಾರ್ಡ್‌ಗಳು ಮತ್ತು ಇತರ ದಾಖಲೆಗಳ ಆಧಾರದ ಮೇಲೆ ಬಾಂಗ್ಲಾದೇಶ ಮತ್ತು ಪಾಕಿಸ್ತಾನಿ ಭಯೋತ್ಪಾದಕರ ಜೊತೆ ಸಂಪರ್ಕ ಹೊಂದಿರುವ ಶಂಕಿತರು ಸಿಕ್ಕಿಬಿದ್ದಿದ್ದಾರೆ. ಈ ಕಾರಣಕ್ಕಾಗಿಯೇ ಸಿಎಂ ಯೋಗಿ ದಿಯೋಬಂದ್‌ನಲ್ಲಿ ಎಟಿಎಸ್ ಕಮಾಂಡೋ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಇದರ ಹೊರತಾಗಿಯೂ, ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಶಂಕಿತರು ಸಹರಾನ್‌ಪುರವನ್ನು ತಮ್ಮ ಕೃತ್ಯಕ್ಕೆ ಸ್ವರ್ಗವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ.

ಗುಪ್ತಚರ ಮಾಹಿತಿ ಮೇರೆಗೆ ಎಟಿಎಸ್ ಚಿಲ್ಕಾನಾ ವ್ಯಾಪ್ತಿಯ ಮನೋಹರಪುರ ಗ್ರಾಮದಿಂದ ಮೊಹಮ್ಮದ್ ಮುಖ್ತಾರ್ ಪುತ್ರ ಅಯೂಬ್ ಹಸನ್, ಪೊಲೀಸ್ ಠಾಣೆಯ ಗಗಲ್ಹೆಡಿ ವ್ಯಾಪ್ತಿಯ ಕೈಲಾಶ್‌ಪುರ ಗ್ರಾಮದಿಂದ ಮೊಹಮ್ಮದ್ ಅಲೀಂ ಮಗ ಮೊಹಮ್ಮದ್ ಸಲೀಂ, ಸೈಯದ್ ಮಜ್ರಾ ಗ್ರಾಮದಿಂದ ಲುಕ್ಮಾನ್ ಮಗ ಇಮ್ರಾನ್ ಮತ್ತು ಜಹೀರ್‌ಪುರ ಗ್ರಾಮದಿಂದ ಕಾಮಿಲ್ ಮಗನನ್ನು ಕಳುಹಿಸಿದೆ. ದಿಯೋಬಂದ್‌ ಠಾಣೆ ಪೊಲೀಸರು ಯಾಸಿನ್‌ನನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳೆಲ್ಲರಿಗೂ ಭಯೋತ್ಪಾದಕ ಸಂಘಟನೆಗಳ ಜತೆ ಸಂಪರ್ಕವಿರುವುದು ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಎಟಿಎಸ್ ತಂಡವು ಅವರಿಂದ ಹಲವು ಪ್ರಮುಖ ಸಾಕ್ಷ್ಯಗಳನ್ನು ಪಡೆದಿದೆ. ಎಟಿಎಸ್ ತಂಡ ಎಲ್ಲಾ ಶಂಕಿತರನ್ನು ರಹಸ್ಯ ಸ್ಥಳಕ್ಕೆ ಕರೆದೊಯ್ದು ಅಲ್ಲಿ ವಿಚಾರಣೆ ನಡೆಸುತ್ತಿದೆ.

ಓದಿ :ಗುಜರಾತ್​ನಲ್ಲಿ ₹350 ಕೋಟಿ ಮೌಲ್ಯದ ಡ್ರಗ್ಸ್​, ಹೈದರಾಬಾದ್​ನಲ್ಲಿ ₹4 ಕೋಟಿ ಬೆಲೆಬಾಳುವ ಚಿನ್ನ ಜಪ್ತಿ

Last Updated : Oct 11, 2022, 9:43 AM IST

ABOUT THE AUTHOR

...view details