ಕರ್ನಾಟಕ

karnataka

ETV Bharat / bharat

ಸೇನೆಯಿಂದ ಸ್ವಯಂಪ್ರೇರಿತ ನಿವೃತ್ತಿ ಪಡೆದ ಸೈನಿಕನಿಂದ ಪಾಕ್‌ ಪರ ಬೇಹುಗಾರಿಕೆ! - ಸೈನಿಕನ ಬಂಧನ

ಬಹದ್ದೂರ್​ಘರ್​ ಪ್ರದೇಶದ ಬಿಹುನಿ ಗ್ರಾಮದ ಸೌರವ್ ಶರ್ಮಾ ಬಂಧಿತ ಸೈನಿಕ. ಈತನಿಂದ ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸಿದ ಕೆಲವು ದಾಖಲೆಗಳು ದೊರೆತಿವೆ.

up-ats-arrested-army-soldier-on-charge-of-spying-for-pakistan-in-lucknow
ಸೈನಿಕನ ಬಂಧನ

By

Published : Jan 8, 2021, 8:28 PM IST

ಲಕ್ನೋ: ಬೇಹುಗಾರಿಕೆ ಕೆಲಸ ಮಾಡುತ್ತಿದ್ದ ಆರೋಪದ ಮೇಲೆ ಉತ್ತರ ಪ್ರದೇಶ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ಹಾಪುಡದಲ್ಲಿ ಸೈನಿಕನೋರ್ವನನ್ನು ಬಂಧಿಸಿದೆ.

ಆರೋಪಿ ಸೈನಿಕ 6 ತಿಂಗಳ ಹಿಂದೆ ಸ್ವಯಂಪ್ರೇರಿತ ನಿವೃತ್ತಿ ಪಡೆದಿದ್ದ. ಈತ ಪಾಕಿಸ್ತಾನ ಪರವಾಗಿ ಭಾರತದಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಪೊಲೀಸರ ತಂಡ ಬಂಧಿತ ಸೇನಾ ಸಿಬ್ಬಂದಿಯ ವಿಚಾರಣೆ ನಡೆಸುತ್ತಿದೆ.

ಬಹದ್ದೂರ್​ಘರ್​ ಪ್ರದೇಶದ ಬಿಹುನಿ ಗ್ರಾಮದ ಸೌರವ್ ಶರ್ಮಾ ಬಂಧಿತ ಸೈನಿಕ. ಈತನಿಂದ ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸಿದ ಕೆಲವು ದಾಖಲೆಗಳು ದೊರೆತಿವೆ.

ಇದೇ ತಂಡ 2 ದಿನಗಳ ಹಿಂದೆ ದಾಳಿ ನಡೆಸಿ ಮ್ಯಾನ್ಮಾರ್ ನಿವಾಸಿಯನ್ನು ಬಂಧಿಸಿತ್ತು. ಈತನ ಬಳಿ ಅನೇಕ ನಕಲಿ ದಾಖಲೆಗಳು, ಎರಡು ಪಾಸ್‌ಪೋರ್ಟ್‌ಗಳು ಮತ್ತು ಐದು ಬ್ಯಾಂಕ್ ಖಾತೆಗಳು ಪತ್ತೆಯಾಗಿದ್ದವು. ಇವೆಲ್ಲವನ್ನು ಆತನಿಂದ ವಶಪಡಿಸಿಕೊಳ್ಳಲಾಗಿದೆ.

ABOUT THE AUTHOR

...view details