ಲಖನೌ: ರಾಜ್ಯ ವಿಧಾನಸಭೆಯಲ್ಲಿ ಕಲ್ಯಾಣ್ ಸಿಂಗ್ ಮಾಡಿದ ಭಾಷಣಗಳ ಸಂಕಲನವನ್ನು ರಾಜ್ಯ ವಿಧಾನಸಭೆ ಬಿಡುಗಡೆ ಮಾಡಲು ನಿರ್ಧಾರ ಮಾಡಿದೆ. ಈ ಬಗ್ಗೆ ಉತ್ತರಪ್ರದೇಶ ವಿಧಾನಸಭಾ ಸ್ಪೀಕರ್ ಹೃದಯನ್ ನರೇನ್ ದೀಕ್ಷಿತ್ ಹೇಳಿದ್ದಾರೆ.
ಕಲ್ಯಾಣ್ ಸಿಂಗ್ ಭಾಷಣಗಳ ಸಂಕಲನವನ್ನು ಬಿಡುಗಡೆ ಮಾಡಲು ಯುಪಿ ಸರ್ಕಾರ ನಿರ್ಧಾರ - ರಾಜ್ಯ ವಿಧಾನಸಭೆ
ಒಂದು ವಾರದೊಳಗೆ ಸಂಕಲನವನ್ನು ಬಿಡುಗಡೆ ಮಾಡಲಾಗುವುದು. ಕಲ್ಯಾಣ್ ಸಿಂಗ್ 1967ರಿಂದ ಹತ್ತು ಬಾರಿ ರಾಜ್ಯ ವಿಧಾನಸಭೆಗೆ ಆಯ್ಕೆಯಾದರು ಮತ್ತು ಅವರ ಭಾಷಣ ಕೌಶಲ್ಯವನ್ನು ಅವರ ಕಠಿಣ ವಿಮರ್ಶಕರು ಕೂಡ ಮೆಚ್ಚಿದ್ದಾರೆ ಎಂದು ಹೇಳಿದರು..
ಕಲ್ಯಾಣ್ ಸಿಂಗ್ ಭಾಷಣಗಳ ಸಂಕಲನವನ್ನು ಬಿಡುಗಡೆ ಮಾಡಲು ಯುಪಿ ಸರ್ಕಾರ ನಿರ್ಧಾರ
ಒಂದು ವಾರದೊಳಗೆ ಸಂಕಲನವನ್ನು ಬಿಡುಗಡೆ ಮಾಡಲಾಗುವುದು. ಕಲ್ಯಾಣ್ ಸಿಂಗ್ 1967ರಿಂದ ಹತ್ತು ಬಾರಿ ರಾಜ್ಯ ವಿಧಾನಸಭೆಗೆ ಆಯ್ಕೆಯಾದರು ಮತ್ತು ಅವರ ಭಾಷಣ ಕೌಶಲ್ಯವನ್ನು ಅವರ ಕಠಿಣ ವಿಮರ್ಶಕರು ಕೂಡ ಮೆಚ್ಚಿದ್ದಾರೆ ಎಂದು ಹೇಳಿದರು.
ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ (89) ಸೆಪ್ಸಿಸ್ ಮತ್ತು ಬಹು ಅಂಗಾಂಗ ವೈಫಲ್ಯದಿಂದ ಶನಿವಾರ ನಿಧನರಾದರು. ಸಿಂಗ್ ಅವರನ್ನು ಜುಲೈ 4 ರಂದು ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಎಸ್‌ಜಿಪಿಜಿಐ) ಐಸಿಯುಗೆ ದಾಖಲಿಸಲಾಗಿತ್ತು.