ಕರ್ನಾಟಕ

karnataka

ETV Bharat / bharat

ಉತ್ತರಪ್ರದೇಶ ಚುನಾವಣೆ : ನಾಳೆ ಮೊದಲ ಹಂತದ ಮತದಾನ.. 623 ಅಭ್ಯರ್ಥಿಗಳ ಹಣೆಬರಹ ಪರೀಕ್ಷೆ

ಮೊದಲ ಹಂತದ ಚುನಾವಣಾ ಕಣದಲ್ಲಿ ಮಾಜಿ ಗವರ್ನರ್​ ಬೇಬಿ ರಾಣಿ ಮೌರ್ಯ, ಬಿಜೆಪಿ ಸಚಿವರಾದ ಶ್ರೀಕಾಂತ್ ಶರ್ಮಾ, ಸುರೇಶ್ ರಾಣಾ, ಸಂದೀಪ್ ಸಿಂಗ್, ಕಪಿಲ್ ದೇವ್ ಅಗರ್ವಾಲ್, ಅತುಲ್ ಗಾರ್ಗ್ ಮತ್ತು ಚೌಧುರಿ ಲಕ್ಷ್ಮಿ ನಾರಾಯಣ್ ಸೇರಿದಂತೆ ಹಲವಾರು ಘಟಾನುಘಟಿ ನಾಯಕರು ಕಣದಲ್ಲಿದ್ದು, ಮತ ಪರೀಕ್ಷೆಗೆ ಅಣಿಯಾಗಲಿದ್ದಾರೆ..

UP Assembly polls
ಉತ್ತರಪ್ರದೇಶ ಚುನಾವಣೆ

By

Published : Feb 9, 2022, 5:12 PM IST

Updated : Feb 9, 2022, 7:33 PM IST

ಹೈದರಾಬಾದ್ :ಇಡೀ ದೇಶದ ಗಮನ ಸೆಳೆದಿರುವ ಮತ್ತು ಮುಂದಿನ ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗಿರುವ ಉತ್ತರಪ್ರದೇಶ ವಿಧಾನಸಭೆಗೆ ಫೆ.10ರಂದು(ನಾಳೆ) ಮೊದಲ ಹಂತದ ಮತದಾನ ನಡೆಯಲಿದೆ.

ಉತ್ತರಪ್ರದೇಶದ 403 ಸ್ಥಾನಗಳಿಗೆ 7 ಹಂತಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದ ಮತದಾನ ನಾಳೆ ಬೆಳಗ್ಗೆ 7 ಗಂಟೆಯಿಂದ ಶುರುವಾಗಲಿದೆ. ರಾಜ್ಯದ 11 ಜಿಲ್ಲೆಗಳ 58 ಸ್ಥಾನಗಳಿಗೆ ಮತದಾನ ನಡೆಯಲಿದ್ದು, 623 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಉತ್ತರಪ್ರದೇಶ ಗೆದ್ದವರು ದೇಶ ಗೆದ್ದಂತೆಯೇ ಎಂಬ ಮಾತಿಗೆ ನಾಳೆ ನಾಂದಿ ಬೀಳಲಿದೆ. ಮತದಾನದ ವೇಳೆ ಕೋವಿಡ್​ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಚುನಾವಣೆ ಆಯೋಗ ಸರ್ವಸಿದ್ಧತೆ ಮಾಡಿಕೊಂಡಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಲಿದೆ. ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ.

ನಾಳೆ ಮೊದಲ ಹಂತದ ಮತದಾನ

ಮೊದಲ ಹಂತದ ಚುನಾವಣಾ ಕಣದಲ್ಲಿ ಮಾಜಿ ಗವರ್ನರ್​ ಬೇಬಿ ರಾಣಿ ಮೌರ್ಯ, ಬಿಜೆಪಿ ಸಚಿವರಾದ ಶ್ರೀಕಾಂತ್ ಶರ್ಮಾ, ಸುರೇಶ್ ರಾಣಾ, ಸಂದೀಪ್ ಸಿಂಗ್, ಕಪಿಲ್ ದೇವ್ ಅಗರ್ವಾಲ್, ಅತುಲ್ ಗಾರ್ಗ್ ಮತ್ತು ಚೌಧುರಿ ಲಕ್ಷ್ಮಿ ನಾರಾಯಣ್ ಸೇರಿದಂತೆ ಹಲವಾರು ಘಟಾನುಘಟಿ ನಾಯಕರು ಕಣದಲ್ಲಿದ್ದು, ಮತ ಪರೀಕ್ಷೆಗೆ ಅಣಿಯಾಗಲಿದ್ದಾರೆ.

ಉತ್ತರಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 10 ರಿಂದ 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 10ರಂದು ಮತಗಳ ಎಣಿಕೆ ಕಾರ್ಯ ನಡೆಯಲಿದೆ.

ಓದಿ:ಬೆಕ್ಕಿನ ಜೊತೆ ಬಿಳಿ ಬಣ್ಣದ ಸೀರೆಯಲ್ಲಿ ಮಿಂಚಿದ ಆಲಿಯಾ.. ಗಂಗೂಬಾಯಿ ಫೋಟೋಸ್​

Last Updated : Feb 9, 2022, 7:33 PM IST

ABOUT THE AUTHOR

...view details