ಕರ್ನಾಟಕ

karnataka

ETV Bharat / bharat

ಕಾರು-ಟ್ರಕ್​ ನಡುವೆ ಭೀಕರ ಅಪಘಾತ: ಒಂದೇ ಕುಟುಂಬದ 6 ಮಂದಿ ದುರ್ಮರಣ - ಉತ್ತರಪ್ರದೇಶದಲ್ಲಿ ಟ್ರಕ್ ಮತ್ತು ಕಾರು ಅಪಘಾತ

ಹೆದ್ದಾರಿಯಲ್ಲಿ ನಿಂತಿದ್ದ ಕಂಟೈನರ್‌ಗೆ ಕಾರು ಡಿಕ್ಕಿಯಾಗಿ ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ನಡೆದಿದೆ.

UP: 6 of a family killed as car rams into stationary truck
ಕಾರು-ಟ್ರಕ್​ ನಡುವೆ ಭೀಕರ ಅಪಘಾತ: ಒಂದೇ ಕುಟುಂಬದ ಆರು ಮಂದಿ ದುರ್ಮರಣ

By

Published : Feb 16, 2022, 11:35 AM IST

Updated : Feb 16, 2022, 11:49 AM IST

ಬಾರಾಬಂಕಿ(ಉತ್ತರ ಪ್ರದೇಶ): ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಆರು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ದಾರುಣ ಘಟನೆ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ಬುಧವಾರ ಮುಂಜಾನೆ ಸಂಭವಿಸಿದೆ.

ರಾಮಸ್ನೇಹಿ ಘಾಟ್ ಕೊತ್ವಾಲಿ ಪ್ರದೇಶದ ನಾರಾಯಣಪುರ ಗ್ರಾಮದ ಬಳಿ ಸರಿಸುಮಾರು ಮುಂಜಾನೆ 3 ಗಂಟೆಗೆ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಕಾರೊಂದು ಹೆದ್ದಾರಿಯಲ್ಲಿ ನಿಂತಿದ್ದ ಕಂಟೈನರ್‌ಗೆ ಡಿಕ್ಕಿಯಾಗಿ ದುರಂತಕ್ಕೆ ಕಾರಣವಾಗಿದೆ.

ಪೊಲೀಸರ ಪ್ರಕಾರ, ಕಾರಿನಲ್ಲಿದ್ದ ಕುಟುಂಬವು ಗುಜರಾತ್‌ನ ಅಹಮದಾಬಾದ್‌ನ ನಿವಾಸಿಗಳು ಎಂದು ಗೊತ್ತಾಗಿದ್ದು, ಕುಟುಂಬ ಎಲ್ಲಿಗೆ ತೆರಳುತ್ತಿತ್ತು ಎಂಬ ಮಾಹಿತಿ ಸಿಕ್ಕಿಲ್ಲ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗವು ಕಂಟೈನರ್ ಒಳಗೆ ತಳ್ಳಲ್ಪಟ್ಟಿದ್ದು ಪೊಲೀಸರು ತೆರವು ಕಾರ್ಯಾಚರಣೆ ನಡೆಸಿದರು.

ಇದನ್ನೂ ಓದಿ:ನಿಂತಿದ್ದ ಟ್ರ್ಯಾಕ್ಟರ್​ಗೆ ವ್ಯಾನ್ ಡಿಕ್ಕಿ: ನಾಲ್ವರ ದುರ್ಮರಣ

Last Updated : Feb 16, 2022, 11:49 AM IST

ABOUT THE AUTHOR

...view details