ಕರ್ನಾಟಕ

karnataka

ETV Bharat / bharat

ಯುಪಿ: ಬಸ್-ಕಾರ್​ ಮುಖಾಮುಖಿ ಡಿಕ್ಕಿ , 6 ಮಂದಿ ಸಾವು - ಬುಲಂದ್‌ಶಹರ್ ದಲ್ಲಿ ಭೀಕರ ಅಪಘಾತ

ರಾಷ್ಟ್ರೀಯ ಹೆದ್ದಾರಿ 93 ರಲ್ಲಿ ಬಸ್​ ನಿಯಂತ್ರಣ ತಪ್ಪಿ ಈ ಅನಾಹುತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ದೇಹಗಳು ಕಾರಿನ ಬಿಡಿ ಬಾಗಗಳಿಗೆ ಸಿಲುಕಿಕೊಂಡಿವೆ.

UP: 6 killed in head-on collision between bus and car
ಯುಪಿ: ಬಸ್-ಕಾರ್​ ಮುಖಾಮುಖಿ ಡಿಕ್ಕಿ , 6 ಮಂದಿ ಸಾವು

By

Published : May 1, 2021, 4:14 AM IST

ಬುಲಂದ್‌ಶಹರ್ (ಉತ್ತರ ಪ್ರದೇಶ): ಕಾರಿಗೆ ಬಸ್​ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಸೇರಿದಂತೆ ಆರು ಮಂದಿ ಸಾವಿಗೀಡಾಗಿದ್ದಾರೆ. ಉತ್ತರ ಪ್ರದೇಶದ ಬುಲಂದ್‌ಶಹಾರ್‌ನ ದಿಬಾಯ್ ಪೊಲೀಸ್ ವ್ಯಾಪ್ತಿಯಲ್ಲಿನ ಸಂಬಲ್‌ಪುರ ಗ್ರಾಮದ ಬಳಿ ಶುಕ್ರವಾರ ಸಂಜೆ ಈ ಅನಾಹುತ ಸಂಭವಿಸಿದೆ.

ಮೃತ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಮೂಲಗಳ ಪ್ರಕಾರ, ದೆಹಲಿಯಿಂದ ಖಾಸಗಿ ಬಸ್ ಬರುತ್ತಿತ್ತು ಮತ್ತು ಕಾರು ಬುಲಂದ್‌ಶಹರ್ ಕಡೆಗೆ ಸಾಗುತ್ತಿತ್ತು ಎನ್ನಲಾಗಿದೆ.

ರಾಷ್ಟ್ರೀಯ ಹೆದ್ದಾರಿ 93 ರಲ್ಲಿ ಬಸ್​ ನಿಯಂತ್ರಣ ತಪ್ಪಿ ಈ ಅನಾಹುತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ದೇಹಗಳು ಕಾರಿನ ಬಿಡಿ ಬಾಗಗಳಿಗೆ ಸಿಲುಕಿಕೊಂಡಿವೆ.

ಗಾಯಗೊಂಡ ಓರ್ವ ಮಹಿಳೆಯನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಬುಲಂದ್‌ಶಹರ್ ಡಿಎಚ್‌ಎಚ್‌ಗೆ ಕಳುಹಿಸಲಾಗಿದೆ. ಅಪಘಾತದ ನಂತರ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಆತನ ವಿರುದ್ಧ ಸೆಕ್ಷನ್ 304 ಎ, 279, ಮತ್ತು 427 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ABOUT THE AUTHOR

...view details