ಕರ್ನಾಟಕ

karnataka

ETV Bharat / bharat

ಮದುವೆ ಬೇಡ ಎಂದು ಮರ್ಮಾಂಗ ಕತ್ತರಿಸಿಕೊಂಡ ಯುವಕ... ಕಾರಣ?

ಮದುವೆ ಬೇಡವೆಂದು ಪೋಷಕರೊಂದಿಗೆ ಜಗಳವಾಡಿರುವ ಯುವಕನೊಬ್ಬ ಶಿಶ್ನವನ್ನೇ ಕತ್ತರಿಸಿಕೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

Youth tries suicide by cutting penis
Youth tries suicide by cutting penis

By

Published : Jun 30, 2021, 10:05 PM IST

ಸೇಲಂ(ತಮಿಳುನಾಡು):ವಿರೋಧದ ನಡುವೆ ಕೂಡ ಮಗನ ಮದುವೆಗೆ ಮುಂದಾಗಿದ್ದರಿಂದ ಆಕ್ರೋಶಗೊಂಡ ಆತ ಜನನಾಂಗ ಕತ್ತರಿಸಿಕೊಂಡು ಅತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಸೇಲಂ ಜಿಲ್ಲೆಯ ತಮ್ಮಂಪಟ್ಟಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ವೃತ್ತಿಯಲ್ಲಿ ಬಡಗಿಯಾಗಿದ್ದ ವಿಜಯರಾಘವನ್​ ಈ ಕೃತ್ಯ ಮಾಡಿಕೊಂಡಿದ್ದಾನೆ.

ವಿಜಯರಾಘವನ್ಗೆ ಪೋಷಕರು ಮದುವೆ ಮಾಡಲು ನಿರ್ಧರಿಸಿದ್ದರು. ಆದರೆ, ಇದಕ್ಕೆ ಇಷ್ಟವಿಲ್ಲದ ವಿಜಯ್​ ತನ್ನ ಹೆತ್ತವರೊಂದಿಗೆ ವಾಗ್ವಾದ ನಡೆಸಿದ್ದು, ಮದುವೆ ನಿಲ್ಲಿಸುವಂತೆ ಒತ್ತಾಯಿಸಿದ್ದನು. ಇದೇ ವಿಷಯಕ್ಕೆ ಮಂಗಳವಾರ ಪೋಷಕರು ಹಾಗೂ ಮಗನ ನಡುವೆ ವಾದ ನಡೆದಿದೆ. ಇದರಿಂದ ಆಕ್ರೋಶಗೊಂಡ ಆತ ಉಳಿಯಿಂದ ಶಿಶ್ನ ಹಾಗೂ ಕುತ್ತಿಗೆ ಕತ್ತರಿಸಿಕೊಂಡು, ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಇದನ್ನೂ ಓದಿರಿ: 3 ಲಕ್ಷಕ್ಕೂ ಅಧಿಕ ಗ್ರಾಮಗಳಲ್ಲಿ Broadband: ಕೇಂದ್ರ ಕ್ಯಾಬಿನೆಟ್​ನಲ್ಲಿ ಮಹತ್ವದ ನಿರ್ಧಾರ

ಘಟನೆ ಬಳಿಕ ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅದೇ ದಿನ ಸಂಜೆ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾನೆಂದು ತಿಳಿದು ಬಂದಿದೆ. ಘಟನೆ ಬಗ್ಗೆ ಪೊಲೀಸರ ಬಳಿ ಕೇಳಿದಾಗ ನಮ್ಮ ಬಳಿ ಅಂತಹ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.

ABOUT THE AUTHOR

...view details