ಕರ್ನಾಟಕ

karnataka

ETV Bharat / bharat

ಚುನಾವಣೆಯಲ್ಲಿ ಬಳಸದ ಮತಯಂತ್ರ ಮತ ಎಣಿಕೆ ಕೇಂದ್ರದಲ್ಲಿ ಪತ್ತೆ - ಕೇರಳ ವಿಧಾನಸಭಾ ಚುನಾವಣಾ ಫಲಿತಾಂಶ

ಎಣಿಕೆ ಕೇಂದ್ರದಲ್ಲಿ ಚುನಾವಣೆಯಲ್ಲಿ ಬಳಸದ ಮತ ಯಂತ್ರ ಇರುವುದು ತಿಳಿದ ಕೂಡಲೇ ಜಿಲ್ಲಾ ಚುನಾವಣಾಧಿಕಾರಿ ಮೇಘನಿಧಿ ದಹಲ್ ಅವರು ಮತಗಟ್ಟೆ ಅಧಿಕಾರಿಗಳ ಜತೆ ಅಲ್ಲಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

EVM
EVM

By

Published : May 2, 2021, 12:23 PM IST

ಗುವಾಹಟಿ:ಚುನಾವಣೆಯಲ್ಲಿ ಬಳಸದ ಮತಯಂತ್ರ ಮತ ಎಣಿಕೆ ಕೇಂದ್ರದಲ್ಲಿ ಪತ್ತೆಯಾದ ವಿದ್ಯಮಾನ ಅಸ್ಸಾಂನ ಹೈಲಾಕಂಡಿ ಜಿಲ್ಲೆಯಲ್ಲಿ ನಡೆದಿದೆ.

ಎಣಿಕೆ ಕೇಂದ್ರಲ್ಲಿ ಚುನಾವಣೆಯಲ್ಲಿ ಬಳಸದ ಮತ ಯಂತ್ರ ಇರುವುದು ತಿಳಿದ ಕೂಡಲೇ ಜಿಲ್ಲಾ ಚುನಾವಣಾಧಿಕಾರಿ ಮೇಘನಿಧಿ ದಹಲ್ ಅವರು ಮತಗಟ್ಟೆ ಅಧಿಕಾರಿಗಳ ಜತೆ ಅಲ್ಲಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಾಥಮಿಕ ತನಿಖೆ ವೇಳೆ, ಮತ ಎಣಿಕೆ ಕೇಂದ್ರದಲ್ಲಿ ಪತ್ತೆಯಾಗಿರುವುದು ಚುನಾವಣೆ ದಿನ ಕಾದಿರಿಸಿದ್ದ ಮತಯಂತ್ರ ಎಂಬುದು ತಿಳಿದುಬಂದಿದೆ. ಚುನಾವಣೆಯ ದಿನ ಪ್ರಮಾದವಶಾತ್ ಅದನ್ನು ಎಣಿಕೆ ಕೇಂದ್ರಕ್ಕೆ ಸಾಗಿಸಲಾಗಿತ್ತು.

ಮತಯಂತ್ರವನ್ನು ಅಭ್ಯರ್ಥಿಗಳ ಎದುರು ತೆರೆದು ತೋರಿಸಲಾಗಿದ್ದು, ದುರ್ಬಳಕೆ ಆಗಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಲಾಗಿದೆ. ಬಳಕೆಯಾಗದ ಮತಯಂತ್ರವನ್ನು ತಕ್ಷಣವೇ ಮತಯಂತ್ರಗಳನ್ನು ಕಾಯ್ದಿರಿಸುವ ಕೊಠಡಿಗೆ ಒಯ್ಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ABOUT THE AUTHOR

...view details