ಕರ್ನಾಟಕ

karnataka

ETV Bharat / bharat

ಬಹದ್ದೂರರ 118ನೇ ಜನ್ಮದಿನ: ಶಾಸ್ತ್ರಿಗಳ ಬಗ್ಗೆ ತಿಳಿದುಕೊಳ್ಳಲೇಬೇಕಾದ ವಿಚಾರಗಳು ಇವು... - ಲಾಲ್​ ಬಹದ್ದೂರ್ ಶಾಸ್ತ್ರಿ ಮತ್ತು ಹಸಿರು ಹುಲ್ಲು

ಸರಳತೆಯ ಮೂರ್ತಿಯಂತಿದ್ದ ದೇಶದ ಎರಡನೇ ಪ್ರಧಾನಿ, ಲಾಲ್​ ಬಹದ್ದೂರ ಶಾಸ್ತ್ರಿ ಅವರ 118ನೇ ಜನ್ಮ ದಿನಾಚರಣೆ ಇಂದು. ಅವರ ಕುರಿತಾಗಿ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಕುತೂಹಲಕಾರಿ ಸಂಗತಿಗಳು ಇಲ್ಲಿವೆ.

untouched-moments-on-the-118th-birth-anniversary-of-lal-bahadur-shastri
ಬಾಪೂಜಿ ಅವರ 118ನೇ ಜನ್ಮದಿನ: ಶಾಸ್ತ್ರಿಗಳ ಬಗ್ಗೆ ತಿಳಿದುಕೊಳ್ಳಲೇಬೇಕಾದ ವಿಚಾರಗಳು ಇವು...

By

Published : Oct 2, 2021, 9:09 AM IST

Updated : Oct 2, 2021, 9:18 AM IST

ನವದೆಹಲಿ:ಇಂದು ಗಾಂಧಿ ಜಯಂತಿ ಮಾತ್ರವಲ್ಲದೇ, ದೇಶದ ಎರಡನೇ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನವನ್ನು ಕೂಡಾ ಆಚರಿಸಲಾಗುತ್ತದೆ. 1904 ಅಕ್ಟೋಬರ್ 2ರಂದು ಜನಿಸಿರುವ ಲಾಲ್​ ಬಹದ್ದೂರ್ ಶಾಸ್ತ್ರಿಯ ಸರಳತೆ ಮತ್ತು ಧೈರ್ಯ ಎಲ್ಲರಿಗೂ ಆದರ್ಶವಾಗಿದೆ.

ಶಾಸ್ತ್ರಿಯವರ 118 ಜನ್ಮದಿನಾಚರಣೆಯ ಸಂದರ್ಭದಲ್ಲಿ, ಅವರ ಬಗ್ಗೆ ಕೆಲವು ವಿಶೇಷ ಸಂಗತಿಗಳನ್ನು ತಿಳಿದುಕೊಳ್ಳೋಣ

1. ಶಾಸ್ತ್ರಿ, ಶಾಲೆ ಮತ್ತು ಈಜು!

ಶಾಸ್ತ್ರಿಯವರು ಬಾಲ್ಯದಲ್ಲಿ ತುಂಟತನದಿಂದ ಕೂಡಿದ್ದರು. ತಾವೂ ತಮ್ಮ ಸ್ನೇಹಿತರೊಂದಿಗೆ ಗಂಗಾನದಿಯಲ್ಲಿ ಈಜಲು ತೆರಳುತ್ತಿದ್ದರು. ಶಾಲೆಗೆ ತೆರಳಲು ಗಂಗಾ ನದಿಯನ್ನು ದಾಟಬೇಕಿತ್ತು. ಅವರ ಬಳಿ ಹಣವಿಲ್ಲದ ಕಾರಣದಿಂದ ನದಿಯಲ್ಲಿ ಈಜುತ್ತಾ ಶಾಲೆಗೆ ಸೇರುತ್ತಿದ್ದರು. ಈಜುವ ವೇಳೆ ತಮ್ಮ ಬ್ಯಾಗ್ ಅನ್ನು ತಲೆಗೆ ಕಟ್ಟಿಕೊಂಡಿರುತ್ತಿದ್ದರು. ಒಮ್ಮೆ ನದಿಯಲ್ಲಿ ಮುಳುಗುತ್ತಿದ್ದ ತನ್ನ ಸ್ನೇಹಿತನನ್ನು ಶಾಸ್ತ್ರಿ ರಕ್ಷಿಸಿದ್ದರು.

2. ಸರ್ಕಾರಕ್ಕೆ ಹಣ ಜಮೆ ಮಾಡಿದ್ದರು.!

ಸರ್ಕಾರದಿಂದ ಸೌಲಭ್ಯ ಬರುವುದಾದರೂ ತನಗೇ ಬರಲಿ, ತನ್ನ ಮಕ್ಕಳಿಗೂ ಇರಲಿ ಎಂಬುವ ಈ ಕಾಲದಲ್ಲಿ ಲಾಲ್​ ಬಹದ್ದೂರ್ ಶಾಸ್ತ್ರಿ ಅವರ ಗುಣ ಎಲ್ಲರಿಗೂ ಆದರ್ಶಪ್ರಾಯ. ಒಮ್ಮೆ ಸರ್ಕಾರಿ ಕಾರನ್ನು ಅವರ ಮಗ ಸುನಿಲ್ ಶಾಸ್ತ್ರಿ ಬಳಸಿದರು ಎಂಬ ಕಾರಣಕ್ಕೆ ಕಾರು ಎಷ್ಟು ಕಿಲೋಮೀಟರ್ ಚಲಿಸಿದೆ ಎಂಬುದನ್ನು ಲೆಕ್ಕ ಹಾಕಿ ಅಷ್ಟೂ ಹಣವನ್ನು ಸರ್ಕಾರಿ ಖಾತೆಗೆ ಜಮಾ ಮಾಡಿದ್ದರು ಲಾಲ್​ ಬಹದ್ದೂರ್ ಶಾಸ್ತ್ರಿ. ಇದನ್ನು ಶಾಸ್ತ್ರಿಯವರ ಪುತ್ರ ಸುನಿಲ್ ಶಾಸ್ತ್ರಿ ತಾವು ಬರೆದ 'ಲಾಲ್ ಬಹದ್ದೂರ್ ಶಾಸ್ತ್ರಿ, ಮೇರೆ ಬಾಬೂಜಿ' ಎಂಬ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ಲಾಲ್ ಬಹದ್ದೂರ್ ಶಾಸ್ತ್ರಿ

3. ಸೀರೆ ಉಡುಗೊರೆ ಬೇಡ ಎಂದಿದ್ದರು!

ಶಾಸ್ತ್ರಿ ಅವರು ಮಾತ್ರ ಅವರ ಪತ್ನಿ ಲಲಿತಾ ಶಾಸ್ತ್ರಿ ಕೂಡಾ ತುಂಬಾ ಸರಳ ವ್ಯಕ್ತಿತ್ವದವರಾಗಿದ್ದರು. ಲಾಲ್​ ಬಹದ್ದೂರ್ ಶಾಸ್ತ್ರಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಶಾಸ್ತ್ರಿ ಮತ್ತು ಅವರ ಪತ್ನಿ ಒಮ್ಮೆ ತಾವು ಅಂಗಡಿಯೊಂದಕ್ಕೆ ಸೀರೆಗಳನ್ನು ಖರೀದಿಸಲು ತೆರಳಿದ್ದರು. ದುಬಾರಿ ಬೆಲೆಯ ಸೀರೆಗಳನ್ನು ತೋರಿಸಿದಾಗ ಅದನ್ನು ಕೊಳ್ಳಲು ನನ್ನ ಬಳಿ ಹಣವಿಲ್ಲವೆಂದು ಶಾಸ್ತ್ರಿ ಹೇಳಿದ್ದರು. ಅಂಗಡಿಯವರು ಸೀರೆಗಳನ್ನು ಉಚಿತವಾಗಿ, ಉಡುಗೊರೆಯಾಗಿ ನೀಡುತ್ತೇನೆ ಎಂದರೂ ಶಾಸ್ತ್ರಿ ಅದನ್ನು ನಿರಾಕರಿಸಿದ್ದರು.

4. ಕೂಲರ್​ ಅನ್ನು ತೆಗೆಸಲಾಯಿತು..

ಶಾಸ್ತ್ರಿ ಅವರು ಸಂಪೂರ್ಣವಾಗಿ ಗಾಂಧಿವಾದಿಯಾಗಿದ್ದರು. ಒಮ್ಮೆ ಅವರ ಮನೆಯಲ್ಲಿ ಸರ್ಕಾರದ ಇಲಾಖೆಯೊಂದರಿಂದ ಕೂಲರ್ ಅನ್ನು ಅಳವಡಿಸಲಾಯಿತು. ಈ ವಿಷಯ ತಿಳಿದ ಅವರು ನಮ್ಮ ಪೂರ್ವಜರ ಮನೆಯಲ್ಲಿ ಯಾವುದೇ ಕೂಲರ್ ಇರಲಿಲ್ಲ. ಈಗ ಕೂಲರ್​ಗೆ ಅಭ್ಯಾಸವಾದರೆ, ಕೆಲವೊಮ್ಮೆ ಬಿಸಿಲಿನಲ್ಲಿ ಹೋಗಬೇಕಾದಾಗ ತೊಂದರೆಯಾಗಬಹುದು ಎಂದು ಹೇಳಿ, ಮನೆಯಲ್ಲಿ ಅಳವಡಿಸಲಾಗಿದ್ದ ಕೂಲರ್ ಅನ್ನು ತೆಗೆಸಿದ್ದರು.

ಲಾಲ್ ಬಹದ್ದೂರ್ ಶಾಸ್ತ್ರಿ

5. ಹರಿದ ಕುರ್ತಾಗಳನ್ನು ಬಿಸಾಡುತ್ತಿರಲಿಲ್ಲ

ಶಾಸ್ತ್ರಿಯವರು ತಾವು ಹರಿದ ಬಟ್ಟೆಗಳನ್ನು ಬಿಸಾಡುತ್ತಿರಲಿಲ್ಲ. ಅವುಗಳನ್ನು ಮತ್ತೆ ರುಮಾಲು ಅಥವಾ ಒರೆಸುವ ಬಟ್ಟೆ ಅಥವಾ ಕರವಸ್ತ್ರಗಳನ್ನಾಗಿ ಮಾಡಿ ಮತ್ತೆ ಅದನ್ನು ಬಳಸುತ್ತಿದ್ದರು. ಅವರ ಪತ್ನಿಯೇ ಹರಿದ ಕುರ್ತಾಗಳಿಂದ ಬೇರೆ ಬೇರೆ ಬಟ್ಟೆಗಳನ್ನು ತಯಾರಿಸಿ, ಬಳಕೆಗೆ ನೀಡುತ್ತಿದ್ದರು.

6. ಒಂದು ದಿನದ ಉಪವಾಸ

ಭಾರತ ಆಹಾರ ಕೊರತೆ ಎದುರಿಸುತ್ತಿದ್ದ ದಿನಗಳವು. ಶಾಸ್ತ್ರಿ ಪ್ರಧಾನಿಯಾಗಿದ್ದ ಕ್ಷಾಮ ಬಂದು ಜನರ ಮೇಲೆ ಎರಗಿತ್ತು. ಈ ವೇಳೆ ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಒಂದು ದಿನ ಉಪವಾಸ ಮಾಡಿದರೆ, ಹಸಿವು ಕೊನೆಗೊಳ್ಳುತ್ತದೆ ಎಂದು ಘೋಷಿಸಿದರು. ಅಷ್ಟೇ ಅಲ್ಲದೇ ತಾವೂ ಕೂಡಾ ತಮ್ಮ ಕುಟುಂಬದವರೊಂದಿಗೆ ವಾರದಲ್ಲಿ ಒಂದು ದಿನ ಉಪವಾಸ ಇರುತ್ತಿದ್ದರು.

7. ಹಸಿರು ಹುಲ್ಲು..!

ಶಾಸ್ತ್ರಿಯವರು ತಮ್ಮ ಮೇಜಿನ ಮೇಲೆ ಯಾವಾಗಲೂ ಹಸಿರು ಹುಲ್ಲನ್ನು ಇಟ್ಟುಕೊಂಡಿರುತ್ತಿದ್ದರು. ಹೂಗಳು ಜನರನ್ನು ಆಕರ್ಷಣೆ ಮಾಡುತ್ತವೆ ಎಂದು ಯಾರೋ ಒಬ್ಬರು ಹೇಳಿದಾಗ ' ಆ ಹೂಗಳು ಕೆಲವೇ ದಿನಗಳಲ್ಲಿ ಒಣಗಿ ಕೆಳಗೆ ಬೀಳುತ್ತದೆ. ಆದರೆ ಹಸಿರು ಹುಲ್ಲು ಹಾಗಲ್ಲ. ನಾನು ಯಾವಾಗಲೂ ಜನರ ಮನಸ್ಸಿನಲ್ಲಿ ಹಸಿರು ಹುಲ್ಲಿನಂತೆ ಇರಲು ಬಯಸುತ್ತೇನೆ ಎಂದಿದ್ದರು ಎಂದು ಸುನೀಲ್ ಶಾಸ್ತ್ರಿ ಹೇಳಿದ್ದಾರೆ.

8. ಮೌಲ್ಯ ಶಿಕ್ಷಣಕ್ಕೆ ಒತ್ತು

ಶಾಸ್ತ್ರಿ ಅವರಿಗೆ ದೇಶದಲ್ಲಿ ಶಿಕ್ಷಣ ಸುಧಾರಣೆಗಳನ್ನು ತರಬೇಕೆಂಬ ಕಾಳಜಿ ಇತ್ತು. ದೇಶದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಮೌಲ್ಯಾಧಾರಿತ ಶಿಕ್ಷಣ ಅಗತ್ಯವಿದೆ ಎಂದು ಶಾಸ್ತ್ರಿ ಆಗಾಗ ಹೇಳುತ್ತಿದ್ದರು ಎಂದು ಅವರ ಪುತ್ರ ಸುನೀಲ್ ಶಾಸ್ತ್ರಿ ಹೇಳಿದ್ದಾರೆ.

ಪ್ರಧಾನಿಯಿಂದ ನಮನ

ಇಂತಹ ಸರಳ ವ್ಯಕ್ತಿತ್ವದ ದೇಶದ ಎರಡನೇ ಪ್ರಧಾನಿ ಲಾಲ್​ ಬಹದ್ದೂರ್​ ಶಾಸ್ತ್ರಿ ಅವರ ಹುಟ್ಟುಹಬ್ಬಕ್ಕೆ ಪ್ರಧಾನಿ ಮೋದಿ ಅವರು ಶುಭಕೋರಿದ್ದಾರೆ. ವಿಜಯ್​ ಘಾಟ್​ಗೆ ತೆರಳಿ ನಮನ ಸಲ್ಲಿಕೆ ಮಾಡಿದ್ದಾರೆ.

ಪುತ್ರನಿಂದಲೂ ತಂದೆಯ ಸ್ಮರಣೆ, ನಮನ

ಈ ನಡುವೆ ಲಾಲ್​ಬಹದ್ದೂರ್ ಶಾಸ್ತ್ರಿ ಅವರ ಪುತ್ರ ಅನಿಲ್​ ಶಾಸ್ತ್ರಿ ವಿಜಯ್​ ಘಾಟ್​ಗೆ ತೆರಳಿ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಕೆ ಮಾಡಿದರು.

Last Updated : Oct 2, 2021, 9:18 AM IST

ABOUT THE AUTHOR

...view details