ಕರ್ನಾಟಕ

karnataka

ETV Bharat / bharat

IndiGo flight: ಇಂಡಿಗೋ ವಿಮಾನದ ತುರ್ತು ನಿರ್ಗಮನದ ಕವರ್​ ತೆರೆದ ವ್ಯಕ್ತಿ ವಿರುದ್ಧ ಎಫ್​ಐಆರ್

ಹೈದರಾಬಾದ್​​- ನವದೆಹಲಿ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕನೋರ್ವ ತುರ್ತು ನಿರ್ಗಮನದ ಕವರ್​ ತೆರೆದಿರುವ ಘಟನೆ ನಡೆದಿದೆ.

unruly-passenger-alert-man-opens-emergency-exit-cover-during-indigo-flight
ಇಂಡಿಗೋ ವಿಮಾನದ ತುರ್ತು ನಿರ್ಗಮನದ ಕವರ್​ ತೆರೆದ ವ್ಯಕ್ತಿ ವಿರುದ್ಧ ಎಫ್​ಐಆರ್

By

Published : Jul 15, 2023, 10:02 AM IST

ನವದೆಹಲಿ : ಹೈದರಾಬಾದ್​​- ನವದೆಹಲಿ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೋರ್ವರು ಟೇಕ್​ ಆಫ್​​ ಸಂದರ್ಭದಲ್ಲಿ ತುರ್ತು ನಿರ್ಗಮನದ ಕವರ್​ ತೆರೆದಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತುರ್ತು ನಿರ್ಗಮನದ ಕವರ್​ ತೆರೆದ ವ್ಯಕ್ತಿಯನ್ನು ದೆಹಲಿಯ ಶಹ್​ದಾರಾದ ದಿಲ್​ಶಾದ್​ ಗಾರ್ಡನ್​ ನಿವಾಸಿ ಫುರುಕೋನ್​ ಹುಸೇನ್​ ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಈ ವ್ಯಕ್ತಿ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.​

ಎಫ್​ಐಆರ್​ ಮಾಹಿತಿ ಪ್ರಕಾರ, ಕಳೆದ ಜುಲೈ 8 ರಂದು ಇಂಡಿಗೋ ಫ್ಲೈಟ್ 6E-5605 ನಲ್ಲಿ ಈ ಘಟನೆ ನಡೆದಿದೆ. ವಿಮಾನ ಸಿಬ್ಬಂದಿ ಸಲೋನಿ ಸಿಂಗ್ ಹಾಗೂ ಪೈಲಟ್-ಇನ್-ಕಮಾಂಡ್ ಮಂಜಿತ್ ಸಿಂಗ್ ಅವರು ಈ ಬಗ್ಗೆ ದೂರು ನೀಡಿದ್ದಾರೆ. ದೂರಿನಲ್ಲಿ ಫುರುಕೋನ್​​ ಹುಸೇನ್ ಅವರು ಆಸನ ಸಂಖ್ಯೆ 18 ಎ (ತುರ್ತು ನಿರ್ಗಮನ) ನಲ್ಲಿ ಕುಳಿತಿದ್ದರು. ವಿಮಾನವು ಟೇಕ್​ ಆಫ್​ ಆಗುವ ಸಂದರ್ಭದಲ್ಲಿ 'ತುರ್ತು ನಿರ್ಗಮನ' ಕವರನ್ನು ಎಳೆದಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಈ ಬಗ್ಗೆ ತಿಳಿದ ತಕ್ಷಣ ವಿಮಾನ ಸಿಬ್ಬಂದಿಯು ಇತರ ಪ್ರಯಾಣಿಕರ ಅನುಕೂಲಕ್ಕೆ ಅನುಗುಣವಾಗಿ ಹುಸೇನ್​ನನ್ನು ಮತ್ತೊಂದು ಆಸನಕ್ಕೆ ಸ್ಥಳಾಂತರಿಸಿದರು. ವಿಮಾನಯಾನದ ನಿಯಮಗಳ ಬಗ್ಗೆ ಪ್ರಯಾಣಿಕರಿಗೆ ಮೊದಲೇ ಸ್ಪಷ್ಟವಾಗಿ ತಿಳಿಸಲಾಗಿತ್ತು ಎಂದು ಎಫ್ಐಆರ್​ನಲ್ಲಿ ಉಲ್ಲೇಖಿಸಲಾಗಿದೆ. ಐಜಿಐ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಹುಸೇನ್ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 336 ಮತ್ತು ಏರ್‌ಕ್ರಾಫ್ಟ್ ನಿಯಮಗಳ 22ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಏರ್​ ಇಂಡಿಯಾ ವಿಮಾನದಲ್ಲಿ ಸಿಬ್ಬಂದಿಗೆ ನಿಂದನೆ :ಕಳೆದ ಕೆಲವು ದಿನಗಳ ಹಿಂದೆ ಟೊರೊಂಟೊದಿಂದ ಟೇಕ್​ ಆಫ್​ ಆಗಿದ್ದ ಏರ್ ಇಂಡಿಯಾ ವಿಮಾನದಲ್ಲಿ ಸಿಬ್ಬಂದಿಯನ್ನು ನಿಂದಿಸಿದ್ದಕ್ಕೆ ಮತ್ತು ಶೌಚಾಲಯದ ಬಾಗಿಲು ಒಡೆದಿದ್ದಕ್ಕೆ ನೇಪಾಳದ ಪ್ರಜೆ ವಿರುದ್ಧ ಪ್ರಕರಣ ದಾಖಲಾಗಿತ್ತು. ಏರ್​ ಇಂಡಿಯಾ A-188 ವಿಮಾನದಲ್ಲಿ ಘಟನೆ ನಡೆದಿತ್ತು. ಆರೋಪಿಯನ್ನು ನೇಪಾಳ ಮೂಲದ ಮಹೇಶ್​ ಸಿಂಗ್​ ಪಂಡಿ ಎಂದು ಗುರುತಿಸಲಾಗಿತ್ತು.

ಈ ಸಂಬಂಧ ವಿಮಾನಯಾನ ಸಿಬ್ಬಂದಿ ಆದಿತ್ಯ ಕುಮಾರ್​ ದೂರು ದಾಖಲಿಸಿದ್ದರು. ದೂರಿನ ಪ್ರಕಾರ, ನೇಪಾಳದ ನಿವಾಸಿಯಾಗಿರುವ ಮಹೇಶ್ ಸಿಂಗ್​ ಪಂಡಿ ಏರ್​ ಇಂಡಿಯಾ ವಿಮಾನ A -188ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಮಹೇಶ್​ ಸಿಂಗ್ ಅವರು ತಾವು ಕುಳಿತಿದ್ದ ಆಸನ ಸಂಖ್ಯೆ 26E ನಿಂದ 26 Fನಲ್ಲಿ ಕುಳಿತುಕೊಂಡು, ಎಕಾನಮಿ ಕ್ಲಾಸ್​ನಲ್ಲಿದ್ದ​ ಸಿಬ್ಬಂದಿಯನ್ನು ನಿಂದಿಸಲು ಪ್ರಾರಂಭಿಸಿದ್ದ.

ಈ ಬಗ್ಗೆ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದೆವು. ಅವರು ಬಂದು ಎಚ್ಚರಿಕೆ ನೀಡಿದರು. ಊಟದ ಬಳಿಕ ವಿಮಾನದ ಶೌಚಾಲಯದಲ್ಲಿ ಹೊಗೆ ಬರುತ್ತಿರುವ ಬಗ್ಗೆ ನಮಗೆ ಎಚ್ಚರಿಕೆ ಲಭಿಸಿತು. ಈ ಬಗ್ಗೆ ನೋಡಿದಾಗ ವ್ಯಕ್ತಿಯು ಶೌಚಾಲಯದಲ್ಲಿ ಸಿಗರೇಟ್​ ಸೇದುತ್ತಿರುವುದು ಕಂಡುಬಂದಿದೆ ಎಂದು ಎಫ್​ಐಆರ್​ನಲ್ಲಿ ತಿಳಿಸಲಾಗಿತ್ತು.

ಇದನ್ನೂ ಓದಿ :ಏರ್‌ ಇಂಡಿಯಾ ವಿಮಾನ ಸಿಬ್ಬಂದಿ ಮೇಲೆ ಹಲ್ಲೆ, ಅಸಭ್ಯ ವರ್ತನೆ: ಪ್ರಯಾಣಿಕ ವಶಕ್ಕೆ

ABOUT THE AUTHOR

...view details