ಕರ್ನಾಟಕ

karnataka

ETV Bharat / bharat

ತೈಲ ಬೆಲೆ ನಿಯಂತ್ರಣ ಸರ್ಕಾರಕ್ಕೆ ಸವಾಲು: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​​

ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ತೈಲ ಬೆಲೆ ಕುರಿತಂತೆ ಮಂಗಳವಾರ ರಾಜ್ಯಸಭೆಯಲ್ಲಿ ನಿರ್ಮಲಾ ಸೀತಾರಾಮನ್​​ ಪ್ರತಿಕ್ರಿಯೆ ಕೊಟ್ಟರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​​
Finance Minister Nirmala Sitharaman

By

Published : Mar 29, 2022, 6:14 PM IST

ನವದೆಹಲಿ: ಹಿಂದೆಂದೂ ಕಂಡರಿಯದ ರೀತಿಯಲ್ಲಿ ತೈಲ ಬೆಲೆ ಏರಿಕೆಯಾಗುತ್ತಿದ್ದು, ಇದರ ನಿಯಂತ್ರಣ ಕೇಂದ್ರ ಸರ್ಕಾರಕ್ಕೆ ಸವಾಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​​ ಹೇಳಿದ್ದಾರೆ. ಈ ಕುರಿತಂತೆ ರಾಜ್ಯಸಭೆಯಲ್ಲಿ ಮಾತನಾಡಿದ ಅವರು, 2010-11ರಿಂದ 2022-23ನೇ ಸಾಲಿನಲ್ಲಿ ರಸ್ತೆ ತೆರಿಗೆ ಸಂಗ್ರಹ, ಪೆಟ್ರೋಲ್​ ಮತ್ತು ಡೀಸೆಲ್​ ಸೆಸ್​ ಮೂಲಕ 11.32 ಲಕ್ಷ ಕೋಟಿ ರೂ. ಸಂಗ್ರಹಿಸಲಾಗಿದ್ದು, 11.37 ಲಕ್ಷ ಕೋಟಿಯನ್ನು ಬಳಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಅಲ್ಲದೇ, 2017-18ರಿಂದ 2022-23ನೇ ಸಾಲಿನಲ್ಲಿ ಜಿಎಸ್​ಟಿ ಪರಿಹಾರ ಸಂಗ್ರಹದ 5.63 ಲಕ್ಷ ಕೋಟಿ ರೂ.ಗೆ ವಿರುದ್ಧವಾಗಿ 6.01 ಲಕ್ಷ ಕೋಟಿ ರೂ. ವಿನಿಯೋಗಿಸಿದ್ದೇವೆ. ಅದೇ ರೀತಿಯಾಗಿ 2013-14ರಿಂದ 2022-23ನೇ ಸಾಲಿನಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ 3.77 ಲಕ್ಷ ಕೋಟಿ ರೂ. ಸೆಸ್​ಗೆ ವಿರುದ್ಧವಾಗಿ 3.94 ಲಕ್ಷ ಕೋಟಿ ರೂ. ಬಳಕೆ ಮಾಡಿದ್ದೇವೆ ಎಂದರು.

ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರದ ತೆರಿಗೆಯಲ್ಲಿ 8.35 ಲಕ್ಷ ಕೋಟಿ ರೂ.ಗಳನ್ನು ರಾಜ್ಯಗಳಿಗೆ ಹಂಚಿಕೆ ಮಾಡುತ್ತಿದ್ದೇವೆ. 2020ರ ಆರ್ಥಿಕ ವರ್ಷದ ಪರಿಷ್ಕೃತ ಅಂದಾಜಿಗಿಂತಲೂ ಇದು ಅಧಿಕ ಎಂದು ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:'ದೇಶದ ಆರ್ಥಿಕತೆ ಹೇಗೆ ನಿಭಾಯಿಸಬೇಕೆಂದು ಗೊತ್ತಿದೆ': ಅಂಕಿ-ಅಂಶಸಹಿತ ಪ್ರತಿಪಕ್ಷಗಳಿಗೆ ನಿರ್ಮಲಾ ತಿರುಗೇಟು

ABOUT THE AUTHOR

...view details