ಕರ್ನಾಟಕ

karnataka

ETV Bharat / bharat

ಅಸ್ಸೋಂನ ಕಾಮಾಕ್ಯ ದೇಗುಲಕ್ಕೆ ರಾಹುಲ್​ ಗಾಂಧಿ ಭೇಟಿ, ವಿಶೇಷ ಪೂಜೆ ಸಲ್ಲಿಕೆ - ಅಸ್ಸೋಂ

ಇಂದು ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ ಅಸ್ಸೋಂಗೆ ಭೇಟಿ ನೀಡಿದ್ದು, ಇಲ್ಲಿ ಪ್ರಸಿದ್ಧ ಕಾಮಾಕ್ಯ ದೇವಾಲಯಕ್ಕೆ ತೆರಳಿ ನೀಡಿ ಪೂಜೆ ಸಲ್ಲಿಸಿದರು.

Rahul Gandhi
ರಾಹುಲ್​ ಗಾಂಧಿ

By

Published : Mar 31, 2021, 1:57 PM IST

ಗುವಾಹಟಿ:ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಇಂದು ಗುವಾಹಟಿಯ ಪ್ರಸಿದ್ಧ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ದೇವಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾವು ಐದು ಭರವಸೆಗಳನ್ನು ನೀಡಿದ್ದೇವೆ. ಬಿಜೆಪಿಗಿಂತ ಭಿನ್ನವಾಗಿ ನಮ್ಮ ಪಕ್ಷವು ಚುನಾವಣೆಯ ಸಮಯದಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಉಳಿಸಿಕೊಳ್ಳುತ್ತದೆ" ಎಂದರು.

ಪಂಜಾಬ್, ಛತ್ತೀಸ್​ಗಡ ಮತ್ತು ಕರ್ನಾಟಕದಲ್ಲಿ ತಮ್ಮ ಪಕ್ಷವು ಕೃಷಿ ಸಾಲವನ್ನು ಮನ್ನಾ ಮಾಡುವುದಾಗಿ ಭರವಸೆ ನೀಡಿ ಅಧಿಕಾರ ವಹಿಸಿಕೊಂಡ ನಂತರ ಅದನ್ನು ಮಾಡಿದೆ ಎಂದು ಕಾಂಗ್ರೆಸ್ ನಾಯಕ ಹೇಳಿದರು.

"ಅಸ್ಸೋಂನಲ್ಲಿ ಚಹಾ ತೋಟ ಕಾರ್ಮಿಕರ ದೈನಂದಿನ ವೇತನವನ್ನು 365 ರೂ.ಗಳಿಗೆ ಹೆಚ್ಚಿಸುವ ಭರವಸೆ ನೀಡಿದ್ದೇವೆ" ಎಂದು ಅವರು ಐದು ಭರವಸೆಗಳಲ್ಲಿ ಒಂದನ್ನು ಉಲ್ಲೇಖಿಸಿದ್ದಾರೆ.

ಚೈಗಾಂವ್ ಮತ್ತು ಬಾರ್ಖೇತ್ರಿಯಲ್ಲಿ ಚುನಾವಣಾ ರ‍್ಯಾಲಿಗಳಿಗೆ ತೆರಳುವ ಮೊದಲು ಗಾಂಧಿ ನೀಲಾಚಲ್ ಬೆಟ್ಟದ ಮೇಲಿರುವ ಶಕ್ತಿಪೀಠದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಭಾರಿ ಮಳೆ ಮತ್ತು ಅಲ್ಲಿನ ಹವಾಮಾನದಿಂದಾಗಿ ಗಾಂಧಿ ಮಂಗಳವಾರ ಸಿಲ್ಚಾರ್, ಹಫ್ಲಾಂಗ್ ಮತ್ತು ಬೊಕಾಜನ್‌ನಲ್ಲಿ ನಿಗದಿತ ರ‍್ಯಾಲಿಗಳಿಗೆ ತೆರಳಲು ಸಾಧ್ಯವಾಗಲಿಲ್ಲ.

ಅಸ್ಸಾಂನಲ್ಲಿ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ತರಲು ಅವಕಾಶ ನೀಡುವುದಿಲ್ಲ. ಐದು ಲಕ್ಷ ಯುವಕರಿಗೆ ಉದ್ಯೋಗ ನೀಡುವುದು. ಎಲ್ಲ ಮನೆಗಳಿಗೆ ತಿಂಗಳಿಗೆ 200 ಯುನಿಟ್ ಉಚಿತ ವಿದ್ಯುತ್ ಒದಗಿಸುವುದು. ಮಾಸಿಕ ನೆರವು ನೀಡುವುದಾಗಿ ಕಾಂಗ್ರೆಸ್ ತನ್ನ 'ಗ್ಯಾರಂಟಿ'ಗಳಲ್ಲಿ ಭರವಸೆ ನೀಡಿದೆ. ಚಹಾ ತೋಟ ಕಾರ್ಮಿಕರ ಕನಿಷ್ಠ ದೈನಂದಿನ ವೇತನವನ್ನು ಹೆಚ್ಚಿಸುವುದರ ಜೊತೆಗೆ ಪ್ರತಿ ಗೃಹಿಣಿಯರಿಗೆ 2,000 ರೂ. ನೀಡುವುದಾಗಿ ತಿಳಿಸಿದೆ.

39 ಕ್ಷೇತ್ರಗಳಿಗೆ ಗುರುವಾರ ಎರಡನೇ ಹಂತದಲ್ಲಿ ಮತ್ತು ಏಪ್ರಿಲ್ 6 ರಂದು ಅಂತಿಮ ಹಂತದಲ್ಲಿ 40 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ABOUT THE AUTHOR

...view details