ಅನಂತಪುರ (ಆಂಧ್ರಪ್ರದೇಶ):ಚೌಡೇಶ್ವರಿ ದೇವಸ್ಥಾನಕ್ಕೆ ನುಗ್ಗಿದ ಕಳ್ಳನೋರ್ವ ದೇವಿಯ ಲಕ್ಷಾಂತರ ಮೌಲ್ಯದ ಬೆಳ್ಳಿ ಆಭರಣಗಳನ್ನು ದೋಚಿರುವ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ನಡೆದಿದೆ. ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇಲ್ಲಿನ ಉರವಕೊಂಡ ಗ್ರಾಮದ ಚೌಡೇಶ್ವರಿ ದೇವಸ್ಥಾನದಲ್ಲಿ ಈ ಕಳ್ಳತನ ನಡೆದಿದೆ. ದೇಗುಲದ ಹಿಂದಿನ ಗುಡ್ಡದಿಂದ ಒಳಗೆ ನುಗ್ಗಿರುವ ಕಳ್ಳ ಬೀಗ ಒಡೆದು ಕಳವು ಮಾಡಿದ್ದಾನೆ. ನಿರಾತಂಕವಾಗಿ ಒಳ ಹೋಗಿರುವ ಖದೀಮ ಗರ್ಭಗುಡಿಯಲ್ಲಿ ದೇವಿಯ ಅಲಂಕಾರಕ್ಕೆ ಬಳಸಲಾಗಿದ್ದ ಕಿರೀಟ, ಹಸ್ತ ಹಾಗೂ ಇತರೆ ವಸ್ತುಗಳು ಸೇರಿ 12.5 ಕೆಜಿ ಬೆಳ್ಳಿ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾನೆ.