ರಾಯ್ಪುರ್ (ಚತ್ತೀಸ್ಗಢ): ಇತ್ತೀಚಿಗೆ ವೇಗವಾಗಿ ಸೈಬರ್ ಪ್ರಕರಣಗಳು ಹೆಚ್ಚುತ್ತಿದ್ದು, ಹೈಟೆಕ್ ರೀತಿಯಲ್ಲಿ ವಂಚನೆ ಎಸಗುತ್ತಿದ್ದಾರೆ. ಎಟಿಎಂ ವಂಚನೆ, ಒಟಿಪಿ ವಂಚನೆ, ಜಾಹೀರಾತುಗಳ ವಂಚನೆ ಪ್ರಕರಣಗಳು ದಾಖಲಾಗುತ್ತಿವೆ. ಇದಕ್ಕೆಲ್ಲ ಮೂಲ ಎಂಬಂತೆ ನಕಲಿ ಖಾತೆಗಳು ಸೃಷ್ಟಿಯಾಗುತ್ತವೆ. ಸೋಷಿಯಲ್ ಮೀಡಿಯಾದಲ್ಲಿ ನಕಲಿ ಖಾತೆಗಳ ಮೂಲಕವೇ ಬಹುಪಾಲು ವಂಚನೆ ನಡೆಯುತ್ತವೆ. ಹೀಗಾಗಿ ನಿಮಗೆ ಗೊತ್ತಿಲ್ಲದವರ ಬಳಿ ವ್ಯವಹರಿಸುವುದಕ್ಕಿಂತಲೂ ಅವರಿಂದ ದೂರ ಇರುವುದೇ ಒಳಿತು ಎಂದು ಸೈಬರ್ ತಜ್ಞೆ ಮೊನಾಲಿ ಗುಹೈನ್ ಹೇಳುತ್ತಾರೆ.
ಸಾಮಾಜಿಕ ಜಾಲತಾಣಗಳು ಉತ್ತಮ ಸ್ನೇಹಿತರ ಸಂಪಾದನೆಗಾಗಿ ರೂಪಿಸಲ್ಪಟ್ಟಿವೆ. ಆದರೆ, ಸೈಬರ್ ಕಳ್ಳರು ಜನರ ವೈಯಕ್ತಿಕ ಡೇಟಾ, ಫೋಟೋಗಳು ಮತ್ತು ವಿಡಿಯೋಗಳನ್ನು ಕದಿಯಲು ಇದನ್ನ ಬಳಕೆ ಮಾಡುತ್ತಾರೆ. ಇಂದಿನ ಯುವಕರು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ. ಅಲ್ಲದೆ 5 ಸಾವಿರದಿಂದ 6 ಸಾವಿರದವರೆಗೂ ಗೆಳೆಯರನ್ನು ಹೊಂದಿರುತ್ತಾರೆ. ಆದರೆ, ಇವರಲ್ಲಿ ಬಹುಪಾಲು ಮಂದಿಗೆ ವೈಯಕ್ತಿಕವಾಗಿ ಅವರೆಲ್ಲಾ ಯಾರೆಂಬುದೇ ತಿಳಿದಿರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ಸದಸ್ಯರಲ್ಲಿ ಯಾರಾದರೂ ಒಬ್ಬ ಇಂತಹ ಕೃತ್ಯ ಮಾಡುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.
ಇಂಥವರಲ್ಲಿ ವೈಯಕ್ತಿಕವಾಗಿ ನಿಮಗೆ ತಿಳಿಯದ ಅಥವಾ ಮುಖಪರಿಚಯವೇ ಇಲ್ಲದ ಯಾರೊಬ್ಬರನ್ನೂ ನಿಮ್ಮ ಖಾತೆಗೆ ಸೇರಿಸಿಕೊಳ್ಳಬೇಡಿ ಎಂದು ಸೈಬರ್ ತಜ್ಞೆ ಮೊನಾಲಿ ಗುಹೈನ್ ಹೇಳುತ್ತಾರೆ. ಒಂದು ವೇಳೆ ಸೇರಿಸಿದರೆ ಅಂಥವರ ಪ್ರೊಫೈಲ್ ಒಮ್ಮೆ ಪರಿಶೀಲಿಸಿ ಎಂದಿದ್ದಾರೆ.
ಖಾತೆ ನಕಲಿ ಎಂದು ಕಂಡುಹಿಡಿಯುವುದು ಹೇಗೆ..?
- ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಚಟುವಟಿಕೆ ಇರುವುದಿಲ್ಲ.
- ಖಾತೆಯಲ್ಲಿ ಹೆಚ್ಚಿನ ಪೋಸ್ಟ್ಗಳು ಮಾಡಲಾಗಿರುವುದಿಲ್ಲ.
- ಅವರ ಖಾತೆಗೆ ಯಾವುದೇ ಉತ್ತರ ಹಾಗೂ ಕಮೆಂಟ್ ಮಾಡದಿರುವುದು ಸೂಕ್ತ
- ಖಾತೆಯಲ್ಲಿರುವ ಮಾಹಿತಿ ನಕಲಿ ಎಂಬ ಸಂದೇಹ ಬಂದರೆ
- ಖಾತೆಯ ಮೇಲೆ ವ್ಯಕ್ತಿಯ ಫೋಟೋ ಇಲ್ಲದಿದ್ದರೆ ಅಂತಹ ಪ್ರೊಫೈಲ್ ಮೇಲೆ ನಿಗಾ ಇಡಿ
ನಕಲಿ ಖಾತೆ ಶಂಕೆ ಇದ್ದರೆ ತಕ್ಷಣ ಅನ್ಫ್ರೆಂಡ್ ಮಾಡಿ
ಇಂತಹ ಅನುಮಾನ ಹುಟ್ಟಿಸುವ ಪ್ರೊಫೈಲ್ಗಳು ನಿಮ್ಮ ಖಾತೆಯೊಳಗೂ ನುಸುಳಿರುವ ಶಂಕೆ ಇದ್ದರೆ ತಕ್ಷಣ ಎಚ್ಚೆತ್ತುಕೊಳ್ಳಿ. ಆದಷ್ಟು ಬೇಗ ಅಂತಹ ಖಾತೆಗಳನ್ನು ಅನ್ಫ್ರೆಂಡ್ ಮಾಡುವುದು ಉತ್ತಮ. ಒಂದು ವೇಳೆ ಇಂತಹ ಶಂಕಿತ ಪ್ರೊಫೈಲ್ಗಳಿದ್ದರೆ, ಅವು ನಿಧಾನವಾಗಿ ನಿಮ್ಮ ಮಾಹಿತಿ, ಫೋಟೋ ಬಳಕೆ ಮಾಡಬಹುದು. ಅಥವಾ ನಿಮ್ಮ ಅರಿವಿಲ್ಲದೆ ನಿಮ್ಮ ಅಕೌಂಟ್ ಬಳಕೆಯ ಮೇಲೆ ಅವರೇ ಹಿಡಿತ ಸಾಧಿಸುವ ಸಾಧ್ಯತೆಯೂ ಇರಲಿದೆ ಎನ್ನುತ್ತಾರೆ ಸೈಬರ್ ತಜ್ಞೆ ಮೊನಾಲಿ ಗುಹೈನ್.
ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಖಾಸಗಿ ಸೆಟ್ಟಿಂಗ್ ಮುಖ್ಯ