ಕರ್ನಾಟಕ

karnataka

ETV Bharat / bharat

SUICIDE: ನಾನು ಕೆಟ್ಟ ಮಗಳು, ಮಿಸ್​​ ಯೂ ಡ್ಯಾಡಿ, ಮಮ್ಮಿ! - M Tech ವಿದ್ಯಾರ್ಥಿನಿ

ಎಂಟೆಕ್​ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣ ರಾಜಧಾನಿ ಹೈದರಾಬಾದ್​ನಲ್ಲಿ ನಡೆದಿದೆ.

Student
Student

By

Published : Aug 24, 2021, 4:01 PM IST

Updated : Aug 24, 2021, 7:03 PM IST

ಹೈದರಾಬಾದ್​:ಇಲ್ಲಿನ ಸೆಂಟ್ರಲ್​ ಯೂನಿವರ್ಸಿಟಿಯಲ್ಲಿ ದ್ವಿತೀಯ ವರ್ಷದ M Tech ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಹಾಸ್ಟೆಲ್​ ರೂಂನಲ್ಲಿ ಯಾರೂ ಇಲ್ಲದ ವೇಳೆ 27 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಮಾಡಿಕೊಂಡಿದ್ದು, ರೂಂನಲ್ಲಿನ ಫ್ಯಾನ್​​ಗೆ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾಳೆ. ಸ್ಥಳದಲ್ಲಿ ಸೊಸೈಡ್​ ನೋಟ್​ ಸಿಕ್ಕಿದ್ದು, ಅದರಲ್ಲಿ ನಾನು ಕೆಟ್ಟ ಮಗಳು, ಮಿಸ್​ ಯೂ ಡ್ಯಾಡಿ, ಮಮ್ಮಿ ಎಂದು ಬರೆದುಕೊಂಡಿದ್ದಾಳೆ.

ಇದನ್ನೂ ಓದಿರಿ: ಮದುವೆ ಆಗುವುದಾಗಿ ನಂಬಿಸಿ ದೈಹಿಕ ಸಂಪರ್ಕ.. ನ್ಯಾಯಕ್ಕಾಗಿ ಪೊಲೀಸ್​ ಠಾಣೆ ಮೆಟ್ಟಿಲೇರಿದ ಮಹಿಳೆ

ಹೈದರಾಬಾದ್​ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಎಂಟೆಕ್​​ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಲಚ್ಚಯ್ಯ-ರಜಿತಾ ದಂಪತಿಯ ಪುತ್ರಿ ಮೌನಿಕಾ ನ್ಯಾನೋ ತಂತ್ರಜ್ಞಾನ ಓದುತ್ತಿದ್ದಳು. ಆದರೆ, ಸೋಮವಾರ ಬೆಳಗ್ಗೆ ರೂಂನಿಂದ ಹೊರ ಬರದ ಕಾರಣ ಸಹ ವಿದ್ಯಾರ್ಥಿಗಳು ಅಲ್ಲಿಗೆ ತೆರಳಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದಕ್ಕೆ ಇಲ್ಲಿಯವರೆಗೆ ಉತ್ತರ ಸಿಕ್ಕಿಲ್ಲ. ಇದಕ್ಕೆ ಸಂಬಂಧಿಸಿದಂತೆ ಗಚ್ಚಿಬೌಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Aug 24, 2021, 7:03 PM IST

ABOUT THE AUTHOR

...view details