ಕರ್ನಾಟಕ

karnataka

ETV Bharat / bharat

2020ರ ಅಂತಾರಾಷ್ಟ್ರೀಯ ಸಾರ್ವತ್ರಿಕ ಆರೋಗ್ಯ ವ್ಯಾಪ್ತಿ ದಿನ

2020ರ ಯುಹೆಚ್‌ಸಿ ದಿನದ ಸಾರವೇನೆಂದರೆ ‘ಸರ್ವರಿಗೂ ಆರೋಗ್ಯ: ಸರ್ವರ ರಕ್ಷಣೆ. ಕೊರೊನಾ ಬಿಕ್ಕಟ್ಟನ್ನು ಕೊನೆಗೊಳಿಸಲು ಹಾಗೂ ಸುರಕ್ಷಿತ ಮತ್ತು ಆರೋಗ್ಯಕರ ಭವಿಷ್ಯವನ್ನು ನಿರ್ಮಿಸಲು ನಮ್ಮೆಲ್ಲರನ್ನೂ ರಕ್ಷಿಸುವ ಆರೋಗ್ಯ ವ್ಯವಸ್ಥೆಗಳಲ್ಲಿ ಈಗ ನಾವು ಹೂಡಿಕೆ ಮಾಡಬೇಕು'.

universal-health-coverage-day
2020ರ ಅಂತರರಾಷ್ಟ್ರೀಯ ಸಾರ್ವತ್ರಿಕ ಆರೋಗ್ಯ ವ್ಯಾಪ್ತಿ ದಿನಾಚರಣೆ...

By

Published : Dec 12, 2020, 7:22 PM IST

ಅಂತಾರಾಷ್ಟ್ರೀಯ ಸಾರ್ವತ್ರಿಕ ಆರೋಗ್ಯ ವ್ಯಾಪ್ತಿ ದಿನವನ್ನು(ಯುನಿವರ್ಸಲ್ ಹೆಲ್ತ್ ಕವರೇಜ್ ಅಥವಾ ಯುಹೆಚ್‌ಸಿ ದಿನ) ಜಾಗತಿಕವಾಗಿ ಡಿಸೆಂಬರ್ 12 ರಂದು ಆಚರಿಸಲಾಗುತ್ತದೆ. ದಿನವು ಬಲವಾದ ಮತ್ತು ಸ್ಥಿತಿಸ್ಥಾಪಕ ಆರೋಗ್ಯ ವ್ಯವಸ್ಥೆಗಳ ಅಗತ್ಯತೆ ಮತ್ತು ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿ ಹೊಂದಿದೆ.

2020ರ ಯುಹೆಚ್​ಸಿ ದಿನದ ಸಾರ:

2020ರ ಯುಹೆಚ್‌ಸಿ ದಿನದ ಸಾರವೇನೆಂದರೆ ‘ಸರ್ವರಿಗೂ ಆರೋಗ್ಯ: ಸರ್ವರ ರಕ್ಷಣೆ. ಕೊರೊನಾ ಬಿಕ್ಕಟ್ಟನ್ನು ಕೊನೆಗೊಳಿಸಲು ಹಾಗೂ ಸುರಕ್ಷಿತ ಮತ್ತು ಆರೋಗ್ಯಕರ ಭವಿಷ್ಯವನ್ನು ನಿರ್ಮಿಸಲು ನಮ್ಮೆಲ್ಲರನ್ನೂ ರಕ್ಷಿಸುವ ಆರೋಗ್ಯ ವ್ಯವಸ್ಥೆಗಳಲ್ಲಿ ಈಗ ನಾವು ಹೂಡಿಕೆ ಮಾಡಬೇಕು'.

ಸಾರ್ವತ್ರಿಕ ಆರೋಗ್ಯ ವ್ಯಾಪ್ತಿಯನ್ನು ಸಾಧಿಸುವುದು ಹೇಗೆ?:

  • ಡಬ್ಲ್ಯೂಹೆಚ್​ಓ ಪ್ರಕಾರ, ಒಂದು ಸಮುದಾಯ ಅಥವಾ ದೇಶವು ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಸಾಧಿಸಲು ಹಲವಾರು ಅಂಶಗಳು ಜಾರಿಯಲ್ಲಿರಬೇಕು. ಅವುಗಳು ಯಾವವು ಎಂದರೆ?.
  • ಜನ ಕೇಂದ್ರಿತ ಸಮಗ್ರ ಆರೈಕೆಯ ಮೂಲಕ ಆದ್ಯತೆಯ ಆರೋಗ್ಯ ಅಗತ್ಯಗಳನ್ನು ಪೂರೈಸುವ ಬಲವಾದ, ಪರಿಣಾಮಕಾರಿ, ಉತ್ತಮವಾಗಿ ನಡೆಯುವ ಆರೋಗ್ಯ ವ್ಯವಸ್ಥೆ ಬೇಕು.
  • ಕೈಗೆಟುಕುವಿಕೆ: ಆರೋಗ್ಯ ಸೇವೆಗಳಿಗೆ ಹಣಕಾಸು ಒದಗಿಸುವ ವ್ಯವಸ್ಥೆ ಅತ್ಯಗತ್ಯ. ಆಮೂಲಕ ಜನರು ಸೇವೆಯ ಲಾಭ ಪಡೆಯುವಾಗ ಆರ್ಥಿಕ ತೊಂದರೆಗಳನ್ನು ಅನುಭವಿಸುವುದಿಲ್ಲ. ಇದನ್ನು ವಿವಿಧ ರೀತಿಯಲ್ಲಿ ಸಾಧಿಸಬಹುದು.
  • ವೈದ್ಯಕೀಯ ಸಮಸ್ಯೆಗಳನ್ನು ಪತ್ತೆಹಚ್ಚಲು ಮತ್ತು ಚಿಕಿತ್ಸೆ ನೀಡಲು ಅಗತ್ಯ ಔಷಧಗಳು ಮತ್ತು ತಂತ್ರಜ್ಞಾನಗಳ ಅಳವಡಿಕೆ.
  • ರೋಗಿಗಳ ಅಗತ್ಯಗಳನ್ನು ಪೂರೈಸಲು ಸೇವೆಗಳನ್ನು ಒದಗಿಸಲು ಸುಶಿಕ್ಷಿತ, ಪ್ರೇರೇಪಿತ ಆರೋಗ್ಯ ಕಾರ್ಯಕರ್ತರ ಅಗತ್ಯತೆ.

ಯುನಿವರ್ಸಲ್ ಹೆಲ್ತ್ ಕವರೇಜ್​ ಪ್ರಯೋಜನಗಳು:

  • ನ್ಯಾಷನಲ್ ಹೆಲ್ತ್ ಪೋರ್ಟಲ್ ಆಫ್ ಇಂಡಿಯಾ(ಎನ್‌ಎಚ್‌ಪಿ) ಹೇಳಿರುವಂತೆ ಯುನಿವರ್ಸಲ್ ಹೆಲ್ತ್ ಕವರೇಜ್ ನ ಈ ಕೆಳಗಿನ ವಿಧಾನಗಳಲ್ಲಿ ಪ್ರಯೋಜನ ಪಡೆಯಬಹುದು:
  • ಜನಸಂಖ್ಯೆಯ ಸುಧಾರಿತ ಆರೋಗ್ಯ
  • ದಕ್ಷ, ಜವಾಬ್ದಾರಿಯುತ ಮತ್ತು ಪಾರದರ್ಶಕ ಆರೋಗ್ಯ ವ್ಯವಸ್ಥೆ
  • ಬಡತನದಲ್ಲಿ ಕಡಿತ
  • ಹೆಚ್ಚಿನ ಉತ್ಪಾದಕತೆ
  • ಹೆಚ್ಚಿದ ಉದ್ಯೋಗಗಳು
  • ಆರ್ಥಿಕ ರಕ್ಷಣೆ
  • ಶ್ರೇಷ್ಠವಾದ ಸಮಾನತೆ

ಭಾರತದಲ್ಲಿ ಯುಹೆಚ್‌ಸಿ ಸೂತ್ರೀಕರಣಕ್ಕೆ ಹತ್ತು ತತ್ವಗಳು ಮಾರ್ಗದರ್ಶನ ನೀಡಿವೆ:

  • ಸಾರ್ವತ್ರಿಕತೆ
  • ಸಮಾನತೆ
  • ತಾರತಮ್ಯರಹಿತ ಸೇವೆ
  • ತರ್ಕಬದ್ಧ ಮತ್ತು ಉತ್ತಮ ಗುಣಮಟ್ಟದ ಸಮಗ್ರ ಆರೈಕೆ
  • ಆರ್ಥಿಕ ರಕ್ಷಣೆ
  • ರೋಗಿಗಳ ಹಕ್ಕುಗಳ ರಕ್ಷಣೆ
  • ಸಾರ್ವಜನಿಕ ಆರೋಗ್ಯಕ್ಕಾಗಿ ಬಲವಾದ ವ್ಯವಸ್ಥೆ
  • ಹೊಣೆಗಾರಿಕೆ ಮತ್ತು ಪಾರದರ್ಶಕತೆ
  • ಸಮುದಾಯ ಭಾಗವಹಿಸುವಿಕೆ
  • ಆರೋಗ್ಯವನ್ನು ಜನರ ಜವಾಬ್ಧಾರಿಗೆ ಬಿಡುವುದು

ABOUT THE AUTHOR

...view details