ಕರ್ನಾಟಕ

karnataka

By

Published : Aug 12, 2021, 12:04 PM IST

Updated : Aug 12, 2021, 1:15 PM IST

ETV Bharat / bharat

ಸಂಸತ್​ ಭವನದಿಂದ ವಿಜಯ್ ಚೌಕ್​ವರೆಗೆ ಪ್ರತಿಪಕ್ಷ ನಾಯಕರಿಂದ ಕಾಲ್ನಡಿಗೆ: ಕೇಂದ್ರದ ವಿರುದ್ಧ ಆಕ್ರೋಶ

ಕೇಂದ್ರ ಸರ್ಕಾರದ ಕ್ರಮಗಳನ್ನು ಖಂಡಿಸಿ ಕಾಂಗ್ರೆಸ್​, ಶಿವಸೇನೆ ಸೇರಿದಂತೆ ಪ್ರಮುಖ ಪ್ರತಿಪಕ್ಷಗಳ ಒಕ್ಕೂಟದ ನಾಯಕರು ದೆಹಲಿಯಲ್ಲಿ ಕಾಲ್ನಡಿಗೆಯಲ್ಲಿ ಸಾಗಿದರು.

United Opposition march towards Vijay Chowk from Parliament
ಪ್ರತಿಪಕ್ಷ ನಾಯಕರಿಂದ ಕಾಲ್ನಡಿಗೆ

ನವದೆಹಲಿ:ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಪ್ರತಿಪಕ್ಷದ ನಾಯಕರು ಸಂಸತ್ ಭವನದಿಂದ ವಿಜಯ್ ಚೌಕ್​ವರೆಗೆ ಕಾಲ್ನಡಿಗೆಯಲ್ಲಿ ತೆರಳಿದರು.

ಈ ವೇಳೆ ಮಾತನಾಡಿದ ರಾಹುಲ್ ಗಾಂಧಿ, 'ಸಂಸತ್ತಿನಲ್ಲಿ ಮಾತನಾಡಲು ನಮಗೆ ಅವಕಾಶವಿಲ್ಲದ ಕಾರಣ ಇಂದು ನಾವು ನಿಮ್ಮೊಂದಿಗೆ (ಮಾಧ್ಯಮಗಳು) ಮಾತನಾಡಲು ಇಲ್ಲಿಗೆ ಬರಬೇಕಾಯಿತು. ಸಂಸತ್ತಿನ ಅಧಿವೇಶನ ಮುಗಿದಿದೆ, ದೇಶದ ಶೇ. 60 ಜನರು ಸಂಸತ್​ ಅಧಿವೇಶನದಲ್ಲಿ ಇಲ್ಲದಿರುವುದು ಕಳವಳಕಾರಿಯಾಗಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ದೇಶದ ಶೇ.60 ರಷ್ಟು ಜನರ ಧ್ವನಿಯನ್ನು ಹತ್ತಿಕ್ಕಲಾಗಿದೆ, ಅವಮಾನಿಸಲಾಗಿದೆ. ನಿನ್ನೆ ರಾಜ್ಯಸಭೆಯಲ್ಲಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.

ಕಾಲ್ನಡಿಗೆ ಜಾಥಾದ ವೇಳೆ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ಶಿವಸೇನೆಯ ಸಂಜಯ್ ರಾವತ್ ಮಾತನಾಡಿ, ಸಂಸತ್ತಿನಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಪ್ರತಿಪಕ್ಷಗಳಿಗೆ ಅವಕಾಶ ಸಿಗಲಿಲ್ಲ. ಮಹಿಳಾ ಸಂಸದರ ವಿರುದ್ಧ ನಿನ್ನೆ ನಡೆದ ಘಟನೆ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ನಾವು ಪಾಕಿಸ್ತಾನದ ಗಡಿಯಲ್ಲಿ ನಿಂತಂತೆ ಭಾಸವಾಗುತ್ತಿದೆ ಎಂದರು.

Last Updated : Aug 12, 2021, 1:15 PM IST

ABOUT THE AUTHOR

...view details