ಪಾಟ್ನಾ(ಬಿಹಾರ): ಪ್ರೀತಿಯ ಬಲೆಗೆ ಬಿದ್ದವರಿಗೆ ಎಲ್ಲವೂ ಸುಂದರವಾಗಿ ಕಾಣಿಸಲು ಶುರುವಾಗ್ತದೆ. ಇದರ ಮಧ್ಯೆ ಸಂಬಂಧ ಸೇರಿದಂತೆ ಎಲ್ಲವನ್ನೂ ಮರೆತು ಬಿಡುತ್ತಾರೆ. ಸದ್ಯ ಅಂತಹದೊಂದು ಘಟನೆ ಬಿಹಾರದ ಜಮುಯಿಯಲ್ಲಿ ನಡೆದಿದ್ದು, ಅದರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಭಾರತೀಯ ಸಮಾಜದಲ್ಲಿ ಚಿಕ್ಕಮ್ಮನಿಗೆ ತಾಯಿಯಷ್ಟೇ ಪ್ರಾಮುಖ್ಯತೆ ನೀಡಲಾಗುತ್ತಿದ್ದು, ಅದೇ ಸ್ಥಾನದಲ್ಲಿ ನೋಡಲಾಗುತ್ತದೆ. ಆದರೆ, ಈ ಸಂಬಂಧವನ್ನ ಬ್ರೇಕ್ ಮಾಡಿರುವ ಯುವಕನೊಬ್ಬ ಸಂಬಂಧದಲ್ಲಿ ಚಿಕ್ಕಮ್ಮನಾಗಬೇಕಾಗಿದ್ದ ಯುವತಿ ಜೊತೆ ವಿವಾಹ ಮಾಡಿಕೊಂಡಿದ್ದಾನೆ. ಲಖಿಸರೈ ಯುವಕ ಜಮುಯಿಯ ಹುಡುಗಿಯನ್ನ ಪ್ರೀತಿಸುತ್ತಿದ್ದನು. ಆದರೆ, ಈ ಹುಡುಗಿ ಸಂಬಂಧದಲ್ಲಿ ಚಿಕ್ಕಮ್ಮ(ತಾಯಿಯ ತಂಗಿ) ಆಗಬೇಕಿತ್ತು.