ಸಂಭಾಲ್ (ಉತ್ತರಪ್ರದೇಶ): ಮೊದಲ ಹೆಂಡತಿ ಇದ್ದರೂ ಒಬ್ಬ ವ್ಯಕ್ತಿ ಇನ್ನೊಬ್ಬಳನ್ನು ವರಿಸುತ್ತಿದ್ದ ವೇಳೆ ಮೊದಲಿನ ಹೆಂಡತಿ ಗಲಾಟೆ ಮಾಡಿ ಮದುವೆಗೆ ತಡೆಯೊಡ್ಡಿದ್ದಾಳೆ. ಪೊಲೀಸರು ಸ್ಥಳಕ್ಕಾಗಮಿಸಿ, ಆರೋಪಿ ಪತಿಯನ್ನು ಠಾಣೆಗೆ ತಂದು ವಿಚಾರಿಸಿ, ಬಳಿಕ ಪಂಚಾಯ್ತಿ ನಡೆಸಿದರು. ಈ ಗಲಾಟೆಯನ್ನು ಶಾಂತಗೊಳಿಸಲು ಪಂಚಾಯ್ತಿ ಮಾಡಿ ಎರಡನೇ ಹೆಂಡತಿಗೆ ವಿಚ್ಛೇದನ ನೀಡಿ, ಆತನ ಕಿರಿಯ ಸಹೋದರನೊಂದಿಗೆ ಮದುವೆ ಮಾಡಿಸಿರುವ ಪ್ರಕರಣ ಉತ್ತರಪ್ರದೇಶದ ಅಸ್ಮೋಲಿ ಪೊಲೀಸ್ ಠಾಣೆ ವ್ಯಾಪ್ತಿ ಜರುಗಿದೆ.
ಈ ಘಟನೆ ಸಂಭಾಲ್ ಜಿಲ್ಲೆಯ ಅಸ್ಮೋಲಿ ಪೊಲೀಸ್ ಠಾಣೆ ವ್ಯಾಪ್ತಿಯ ದಬೋಯ್ ಖುರ್ದ್ ಗ್ರಾಮದಲ್ಲಿ ನಡೆದಿದೆ. ಮದುವೆ ವೇಳೆ ಪತ್ನಿ ಅಲ್ಲಿಗೆ ಬಂದು ಗಲಾಟೆ ಮಾಡಿದ್ದು, ಗಂಡ ಹೆಂಡತಿ ಜತೆಗೆ ವಾಗ್ವಾದ ತಾರಕಕ್ಕೇರಿದೆ. ಮೊದಲ ಹೆಂಡತಿ ಇದ್ದರೂ ನೀನು ಹೇಗೆ ಮದುವೆ ಮಾಡಿಕೊಳ್ತಿಯಾ ಎಂದು ಮೊದಲ ಹೆಂಡತಿ ವಾದಿಸಿದ್ದಾಳೆ. ಈ ಗಲಾಟೆ ಅಪಾಯದ ಮಟ್ಟಕ್ಕೆ ತಲುಪುತ್ತಿದ್ದಂತೆ ಪೊಲೀಸರು ಆಗಮಿಸಿ, ಇದಕ್ಕೆ ಅಂತ್ಯ ಹಾಡಿದರು.
ಠಾಣೆ ಮೆಟ್ಟಲೇರಿದ ಮದುವೆ ಪ್ರಕರಣ:ಅಮ್ರೋಹಾ ಜಿಲ್ಲೆಯ ಬದೌರಾ ಗ್ರಾಮದ ವರನು ತನ್ನ ಮದುವೆಯ ಮೆರವಣಿಗೆಯೊಂದಿಗೆ ಸಂಭಾಲ್ ಜಿಲ್ಲೆಯ ಅಸ್ಮೋಲ್ ಪೊಲೀಸ್ ಠಾಣೆ ವ್ಯಾಪ್ತಿಯ ದಬೋಯ್ ಖುರ್ದ್ ಗ್ರಾಮಕ್ಕೆ ಮದುಮಗನಾಗಿ ಆಗಮಿಸಿದ್ದನು. ಮದುವೆ ಮೆರವಣಿಗೆಗೆ ಆಗಮಿಸಿದ ವರನಿಗೆ ವಧುವಿನ ಕಡೆಯಿಂದ ಅದ್ಧೂರಿ ಸ್ವಾಗತದೊಂದಿಗೆ ಮದುವೆಗೆ ಸಿದ್ಧತೆ ನಡೆದಿತ್ತು. ಈ ವೇಳೆ ಮೊದಲಿನ ಹೆಂಡತಿ ಬಂದು ವರನನ್ನು ತಡೆದು ಇವನು ನನ್ನ ಪತಿ ಎಂದು ಗಲಾಟೆ ಆರಂಭಿಸಿದ್ದಾಳೆ. ವರ ವಂಚನೆ ಮಾಡಿ ಎರಡನೇ ಮದುವೆಯಾಗುತ್ತಿದ್ದಾನೆ ಎಂದು ಗಲಾಟೆ ಮಾಡುತ್ತಿದ್ದ ಮೊದಲ ಹೆಂಡತಿ ಈ ಕುರಿತು ವಧುವಿನ ಕಡೆಯವರಿಗೆ ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಎರಡನೇ ಮದುವೆ ಆಗುತ್ತಿರುವ ಆರೋಪಿಯನ್ನು ಠಾಣೆಗೆ ಕರೆತಂದಿದ್ದಾರೆ. ಆರೋಪಿ ಮೊದಲಿನ ಪತ್ನಿ ಇದ್ದರೂ ಎರಡನೇ ಮದುವೆ ಆಗುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ. ನಂತರ ಅಲ್ಲೇ ಪಂಚಾಯ್ತಿ ನಡೆಸಿದ್ದಾರೆ. ಈ ವೇಳೆ ಪಂಚಾಯ್ತಿ ಸಮ್ಮುಖದಲ್ಲಿ ಒಂದು ತೀರ್ಮಾನಕ್ಕೆ ಬರಲಾಯಿತು. ಆರೋಪಿ ಮದುವೆ ಆಗಿದ್ದ ಎರಡನೇ ಪತ್ನಿಗೆ ವಿಚ್ಛೇದನ ನೀಡಿ, ತನ್ನ ಕಿರಿಯ ಸಹೋದರನ ಜತೆಗೆ ಮದುವೆ ಮಾಡಿಸುವುದಾಗಿ ಒಪ್ಪಿಕೊಂಡಿದ್ದಾನೆ. ಇದಾದ ನಂತರ ಪಂಚಾಯ್ತಿ ಸಮ್ಮುಖದಲ್ಲಿ ಆರೋಪಿ ಅಣ್ಣ ಮದುವೆ ಆಗಿದ್ದ ಎರಡನೇ ಪತ್ನಿಯನ್ನು ಆತನ ಕಿರಿಯ ಸಹೋದರನೊಂದಿಗೆ ವಿವಾಹ ಮಾಡಿಸಲಾಯಿತು. ನಂತರ ಮೊದಲಿನ ಹೆಂಡತಿ ಹಾಗೂ ಆರೋಪಿ ಗಂಡನ ನಡುವಿನ ಜಗಳ ಶಾಂತವಾಗಿದೆ.
ಮದುವೆ ಆಗಿ ಗಂಟೆಯಲ್ಲೇ ವಿಚ್ಛೇದನ: ಅಸ್ಮೋಲಿ ಪೊಲೀಸ್ ಠಾಣೆ ಪ್ರಭಾರಿ ಸಂಜಯ್ ಕುಮಾರ್ ಈ ಕುರಿತು ಮಾತನಾಡಿ, ಅಮ್ರೋಹಾ ಜಿಲ್ಲೆಯ ಬದೌರಾ ಗ್ರಾಮದ ಗ್ರಾಮದ ವ್ಯಕ್ತಿಯು 4 ವರ್ಷಗಳ ಹಿಂದೆ ವಿವಾಹವಾಗಿದ್ದರು. ಆರೋಪಿಯ ಮೊದಲ ಪತ್ನಿ ನಡುವೆ ಜಗಳವಿದ್ದುದ್ದರಿಂದ ದೂರವಾಗಿದ್ದರು. ಗಂಡನ ಬಿಟ್ಟು ಮೊದಲು ಹೆಂಡತಿ ದೀರ್ಘಕಾಲ ದೂರ ವಾಸಿಸಿದ್ದರಿಂದ ಆರೋಪಿ ಬೋಯ್ ಖುರ್ದ್ ಗ್ರಾಮದಲ್ಲಿ ಇನ್ನೊಬ್ಬ ಹುಡುಗಿಯೊಂದಿಗೆ ಮದುವೆ ಮಾಡಿಕೊಳ್ಳುತ್ತಿದ್ದನು. ಈ ವೇಳೆ ಮೊದಲಿನ ಹೆಂಡತಿ ಬಂದು ಗಲಾಟೆ ಶುರು ಮಾಡಿದ್ದಳು ಎಂದು ಹೇಳಿದರು.
ಈ ಜಗಳ ಬಗೆಹರಿಸಲು ಮದುವೆ ಸ್ಥಳಕ್ಕೆ ಹೋಗಿ ಆರೋಪಿಯನ್ನು ಬಂಧಿಸಿ ಠಾಣೆಗೆ ತರಲಾಯಿತು. ಅವನ ಮೊದಲ ಹೆಂಡತಿ ಅಲ್ಲಿಗೆ ಬಂದಳು. ಆರೋಪಿಯು ಒಂದು ಗಂಟೆಯ ನಂತರ ತನ್ನ ಎರಡನೇ ಹೆಂಡತಿಗೆ ವಿಚ್ಛೇದನ ನೀಡಿದನು. ನಂತರ ನಂತರ ಆಕೆಯನ್ನು ತನ್ನ ಕಿರಿಯ ಸಹೋದರನೊಂದಿಗೆ ವಿವಾಹವಾದರು. ಪಂಚಾಯ್ತಿಯವರು ಎರಡೂ ಕಡೆ ಈ ವಿಷಯವನ್ನು ತಮ್ಮ ತಮ್ಮಲ್ಲೇ ಇತ್ಯರ್ಥ ಮಾಡಿಕೊಂಡಿದ್ದು, ಈ ಸಂಬಂಧ ಪೊಲೀಸರಿಗೆ ಯಾವುದೇ ಲಿಖಿತ ದೂರು ನೀಡಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂಓದಿ:ಉತ್ತರ ಪ್ರದೇಶದಲ್ಲಿ ದೆಹಲಿ ಮಾದರಿಯ ಮತ್ತೊಂದು ಘಟನೆ: ಸ್ಕೂಟಿಗೆ ಗುದ್ದಿ 3 ಕಿಮೀ ಎಳೆದೊಯ್ದ ಲಾರಿ, ಮಹಿಳೆ ದುರ್ಮರಣ