ಗೋಪಾಲ್ಗಂಜ್(ಬಿಹಾರ):ಮನುಷ್ಯರ ನಡುವಿನ ಪ್ರೇಮ ಪ್ರಕರಣ ಸಾಮಾನ್ಯ. ಪ್ರೀತಿಗಾಗಿ ತಮ್ಮ ಪ್ರಾಣ ತ್ಯಾಗ ಮಾಡಿರುವ ಅನೇಕ ಘಟನೆಗಳು ನಮ್ಮ ಮುಂದೆ ನಡೆದು ಹೋಗಿವೆ. ಆದರೆ, ಇಲ್ಲೊಂದು ವಿಭಿನ್ನ ಪ್ರೇಮ ಪ್ರಕರಣ ಮುನ್ನೆಲೆಗೆ ಬಂದಿದ್ದು, ಇದನ್ನ ಕೇಳಿದ್ರೆ ನೀವೂ ಕೂಡ ಅಚ್ಚರಿ ಪಡುತ್ತೀರಿ. ಇದು ಹಾವುಗಳ ಪ್ರೇಮ ಕಥೆಯಾಗಿದ್ದು, ತನ್ನ ನಾಗಿನಿಗೋಸ್ಕರ ನಾಗರ ಹಾವೊಂದು ಪ್ರಾಣ ತ್ಯಾಗ ಮಾಡಿದೆ.
ನಾಗ್ ಔರ್ ನಾಗಿನ್ ಕಿ ಲವ್ ಕಹಾನಿಯನ್ನು ನೀವು ಸಿನಿಮಾಗಳಲ್ಲಿ ಸಾಕಷ್ಟು ಸಲ ನೋಡಿರಬಹುದು. ಆದರೆ, ನಿಜ ಜೀವನದಲ್ಲೂ ಇಂತಹದೊಂದು ಘಟನೆ ನಡೆದಿದೆ. ಗೋಪಾಲ್ಗಂಜ್ನ ಬೋರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿನ ಶಾಯಿ ನದಿ ಬಳಿಯ ಕೊಳದಲ್ಲಿ ಯುವಕನೋರ್ವ ಮೀನು ಹಿಡಿಯಲು ಬಲೆ ಹಾಕಿದ್ದರು. ಇದರಲ್ಲಿ ಹಾವೊಂದು ಸಿಕ್ಕಿಬಿದ್ದಿದೆ. ಅದರ ರಕ್ಷಣೆ ಮಾಡಲು ಮತ್ತೊಂದು ಹಾವು ಅಲ್ಲಿಗೆ ಆಗಮಿಸಿದೆ.