ಕರ್ನಾಟಕ

karnataka

ETV Bharat / bharat

ಅಗಲಿದ ಪತ್ನಿಗಾಗಿ ಪ್ರೇಮ ಸೌಧ ಕಟ್ಟಿದ ವ್ಯಕ್ತಿ: ಮೂರ್ತಿ ಸ್ಥಾಪಿಸಿ ದಿನನಿತ್ಯ ಪೂಜೆ

Husband built temple in memory of wife: ಉತ್ತರ ಪ್ರದೇಶದ ಫತೇಪುರ್​ನಲ್ಲಿ ಅಗಲಿದ ಪತ್ನಿಯ ನೆನಪಿಗಾಗಿ ವ್ಯಕ್ತಿಯೋರ್ವ ದೇವಾಲಯ ಕಟ್ಟಿಸಿದ್ದಾನೆ. ಪತ್ನಿಯ ಮೂರ್ತಿ ಸ್ಥಾಪಿಸಿ ದಿನನಿತ್ಯ ಪೂಜೆ ಮಾಡುತ್ತಿದ್ದಾನೆ.

unique-love-husband-built-temple-in-memory-of-wife-establish-idol-and-worship-morning-and-evening
ಅಗಲಿದ ಪತ್ನಿಗಾಗಿ ಪ್ರೇಮ ಸೌಧ ಕಟ್ಟಿದ ವ್ಯಕ್ತಿ : ಮೂರ್ತಿ ಸ್ಥಾಪಿಸಿ ದಿನನಿತ್ಯ ಪೂಜೆ

By

Published : Aug 7, 2023, 11:00 PM IST

ಅಗಲಿದ ಪತ್ನಿಗಾಗಿ ಪ್ರೇಮ ಸೌಧ ಕಟ್ಟಿದ ವ್ಯಕ್ತಿ : ಮೂರ್ತಿ ಸ್ಥಾಪಿಸಿ ದಿನನಿತ್ಯ ಪೂಜೆ

ಫತೇಪುರ್ (ಉತ್ತರ ಪ್ರದೇಶ): ಪತ್ನಿಯ ನೆನಪಿಗಾಗಿ ವ್ಯಕ್ತಿಯೋರ್ವರು ದೇಗುಲವನ್ನೇ ನಿರ್ಮಿಸಿದ್ದಾರೆ. ಅಗಲಿದ ಪತ್ನಿಯ ಸವಿನೆನಪಿಗಾಗಿ ಪತಿ ಉತ್ತರಪ್ರದೇಶ ಫತೇಪುರದಲ್ಲಿರುವ ತಮ್ಮ ಜಮೀನಿನಲ್ಲಿ ಪ್ರೇಮಸೌಧ ಕಟ್ಟಿದ್ದಾರೆ.

ರಾಮ್​ ಸೇವಕ್​ ರೈದಾಸ್​ ಅಮೀನ್​ ಎಂಬವರು ಇಲ್ಲಿನ ಪಧಾರ ಗ್ರಾಮದ ಬಕೆವರ್​ ಎಂಬಲ್ಲಿ ಪತ್ನಿಯ ನೆನಪಿಗಾಗಿ ದೇವಾಲಯ ಕಟ್ಟಿಸಿದವರು. ರಾಮ್​ ಸೇವಕ್​ 1977ರ ಮೇ 18ರಂದು ರೂಪಾ ಎಂಬವರನ್ನು ಮದುವೆಯಾಗಿದ್ದರು. ಇವರಿಗೆ ಐವರು ಮಕ್ಕಳು. ಮೂರು ಗಂಡು, 2 ಹೆಣ್ಣು. ರಾಮ್​ ಸೇವಕ್​ ಮತ್ತು ರೂಪಾ ಆದರ್ಶ ದಂಪತಿಗಳಾಗಿದ್ದರು.

ಯಾವಾಗಲೂ ಒಬ್ಬರನ್ನೊಬ್ಬರು ಬಿಟ್ಟಿರುತ್ತಿರಲಿಲ್ಲ. ದಂಪತಿಯ ಅನ್ಯೋನ್ಯತೆ ಎಲ್ಲರ ಕಣ್ಣುಕುಕ್ಕುವಂತಿತ್ತು. ರೂಪಾ ಅವರೂ ಕೂಡ ಸರ್ವ ಸದ್ಗುಣ ಸಂಪನ್ನಳಾಗಿದ್ದರು. ಎಲ್ಲರಲ್ಲೂ ಪ್ರೀತಿ ಹೊಂದಿದ್ದರು. ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಸಮರ್ಥವಾಗಿ ನಿಭಾಯಿಸುತ್ತಿದ್ದರು. ಯಾವಾಗಲೂ ಗಂಡನಿಗೆ ಮತ್ತು ಕುಟುಂಬಕ್ಕೆ ನೆರಳಲಾಗಿದ್ದರಂತೆ.

ಗಂಡನನ್ನು ಎಷ್ಟು ಪೂಜಿಸುತ್ತಿದ್ದರೆದರೆ ಗಂಡ ಬರುವವರೆಗೆ ಊಟವನ್ನೂ ರೂಪಾ ಮಾಡುತ್ತಿರಲಿಲ್ಲ. ಗಂಡ ಊಟ ಮಾಡಿದ ಬಳಿಕವೇ ರೂಪಾ ಊಟ ಸೇವಿಸುತ್ತಿದ್ದರು. ಹೀಗೆ ಸಂಪೂರ್ಣ ಸುಖಿ ಜೀವನ ರಾಮ್​ ಸೇವಕ್ ಅವರದ್ದಾಗಿತ್ತು. ಆದರೆ ಇದೇ ಸಂದರ್ಭದಲ್ಲಿ ಜಗತ್ತಿಗೆ ಕೊರೊನಾ ಎಂಬ ಮಹಾಮಾರಿ ಬಂತು. ಈ ಸೋಂಕಿಗೆ ತುತ್ತಾದ ರೂಪಾ ಅವರನ್ನು ಉಳಿಸಿಕೊಳ್ಳಲು ಪ್ರಯತ್ನಪಟ್ಟರೂ ಅದು ಸಾಧ್ಯವಾಗಲಿಲ್ಲ. ಕೊರೊನಾದಿಂದಾಗಿ ರಾಮ್​ ಸೇವಕ್​ ತನ್ನ ನೆಚ್ಚಿನ ಮಡದಿಯನ್ನು ಕಳೆದುಕೊಂಡಿದ್ದರು.

ಪತ್ನಿಯ ಮೂರ್ತಿ ಸ್ಥಾಪಿಸಿ ನಿತ್ಯ ಪೂಜೆ :ಪತ್ನಿ ತೀರಿಕೊಂಡ ಬಳಿಕ ರಾಮ್​ ಸೇವಕ್​ ತುಂಬಾ ವಿಚಲಿತರಾದರು. ಯಾಕೆಂದರೆ ಇವರು ಹೆಂಡತಿಯನ್ನು ತುಂಬಾ ಪ್ರೀತಿಸುತ್ತಿದ್ದರು. ಅಂತೆಯೇ ರೂಪಾ ಕೂಡ ಗಂಡನನ್ನು ತುಂಬಾ ಪ್ರೀತಿಸುತ್ತಿದ್ದರು. ಪತ್ನಿಯ ಸಾವಿನ ನಂತರ ಅವಳನ್ನು ಅಗಲಿ ಒಂದು ಕ್ಷಣವೂ ಇರಲು ಇವರಿಗೆ ಸಾಧ್ಯವಾಗಲಿಲ್ಲ. ದಿನಾಲೂ ಅವಳ ನೆನಪಿನಲ್ಲೇ ರಾಮ್​ ಸೇವಕ್​ ಕಳೆದುಹೋದರು. ಇದರಿಂದ ಹೇಗಾದರೂ ಹೊರಬರಬೇಕೆಂದು ನಿರ್ಧರಿಸಿ ತನ್ನನ್ನು ತಾವು ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಂಡರೂ ರಾಮ್​ ಸೇವಕ್​ ಅವರಿಗೆ ತನ್ನ ಪತ್ನಿಯ ನೆನಪು ಮಾತ್ರ ಮರೆಯಾಗಲಿಲ್ಲ. ಪತ್ನಿಯನ್ನು ಮರೆಯಲು ಅದೆಷ್ಟೇ ಪ್ರಯತ್ನ ಪಟ್ಟರೂ ನೆನಪುಗಳು ಮಾತ್ರ ಸದಾ ಕಾಡುತ್ತಿದ್ದವು.

ಇದಕ್ಕೆ ಪರಿಹಾರ ಕಂಡುಕೊಳ್ಳಲು ರಾಮ್​ ಸೇವಕ್​ ಪತ್ನಿಯ ಸ್ಮರಣಾರ್ಥವಾಗಿ ದೇವಾಲಯವನ್ನು ನಿರ್ಮಿಸಲು ಮುಂದಾದರು. ಈ ಹಿನ್ನಲೆ ಮನೆಯಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಜಮೀನಿನಲ್ಲಿ ದೇವಸ್ಥಾನ ನಿರ್ಮಾಣ ಮಾಡಿದರು. ಅಲ್ಲಿ ಪತ್ನಿಯ ಪ್ರತಿಮೆಯನ್ನು ಸ್ಥಾಪಿಸಿ ಪೂಜೆ ಮಾಡಲು ಪ್ರಾರಂಭಿಸಿದರು. ಸದ್ಯ ಇವರು ಬೆಳಗ್ಗೆ ಮತ್ತು ಸಂಜೆ ಹೊತ್ತು ತನ್ನ ಪ್ರೀತಿಯ ಮಡದಿಯ ಪೂಜೆ ಮಾಡುತ್ತಿದ್ದಾರೆ. ರಾಮ್​ ಸೇವಕ್​ ಸದ್ಯ ಇದೇ ದೇವಾಲಯದಲ್ಲಿ ವಾಸಿಸುತ್ತಾರೆ.

ಪತ್ನಿಯ ನೆನಪಿನಲ್ಲೇ ಜೀವನ: ಪತ್ನಿಗಾಗಿ ದೇವಾಲಯ ನಿರ್ಮಾಣ ಮಾಡಿದಾಗ ಗ್ರಾಮಸ್ಥರು ಗೇಲಿ ಮಾಡಿದ್ದರು. ದೇವಸ್ಥಾನದಲ್ಲಿ ಪೂಜೆ ಮಾಡುವುದರಿಂದ ಪತ್ನಿ ಜೊತೆಗಿರುವ ಭಾವನೆ ಮೂಡುತ್ತದೆ. ಮನಸ್ಸಿಗೆ ಶಾಂತಿ ಸಿಗುತ್ತದೆ. ರೂಪಾ ಅವರ ಸ್ಮರಣಾರ್ಥ ಮಂದಿರ ನಿರ್ಮಿಸಿದ್ದು ನನಗೆ ತುಂಬಾ ಖುಷಿ ತಂದಿದೆ. ರೂಪಾ ನನಗೆ ಸರ್ವಸ್ವವಾಗಿದ್ದಳು. ನನ್ನ ಇಡೀ ಜೀವನವನ್ನು ಅವಳ ನೆನಪಿನಲ್ಲೇ ಕಳೆಯಲು ನಾನು ಬಯಸುತ್ತೇನೆ ಎಂದು ರಾಮ್​ ಸೇವಕ್​ ಹೇಳುತ್ತಾರೆ.

ಇದನ್ನೂ ಓದಿ :Anju in Pakistan: ಸ್ನೇಹಿತನನ್ನು ಭೇಟಿಯಾಗಲು ಪಾಕ್​ಗೆ ತೆರಳಿದ ಎರಡು ಮಕ್ಕಳ ತಾಯಿ.. ನನ್ನ ಕುಟುಂಬಕ್ಕೆ ತೊಂದರೆ ಕೊಡಬೇಡಿ ಎಂದ ಮಹಿಳೆ

ABOUT THE AUTHOR

...view details