ಸರ್ಗುಜಾ (ಛತ್ತೀಸ್‌ಗಢ):ಮಾವು ಹಣ್ಣಾದ ಮೇಲೆ ತಿಂದರೆ ಅದರ ಸ್ವಾದವೇ ಬೇರೆ. ಕಾಯಿಯಾಗಿದ್ದಾಗ ಒಗರು ಮತ್ತು ಹುಳಿಯಾಗಿರುವ ಕಾರಣ ಅದನ್ನು ತಿನ್ನುವ ಮನಸ್ಸು ಬರುವುದಿಲ್ಲ. ಆದರೆ, ಛತ್ತೀಸ್ಗಢದ ಮಾವಿನ ತಳಿಯೊಂದು ಹಣ್ಣಾದ ಮೇಲೆ ಅದನ್ನು ತಿನ್ನಲು ಬರುವುದಿಲ್ಲವಂತೆ. ಕಾರಣ ಹಣ್ಣಿನ ತುಂಬಾ ಹುಳುಗಳು ಮುತ್ತಿಕೊಂಡಿರುತ್ತವಂತೆ. ಅಲ್ಲದೇ, ಇದು ಸೌತೆಕಾಯಿಯ ರುಚಿ ನೀಡುತ್ತಿದೆ ಎಂಬುದು ವಿಶೇಷ.
ಛತ್ತೀಸ್ಗಢದ ಸರ್ಗುಜಾ ಜಿಲ್ಲೆಯ ಶಂಕರ್ ಗುಪ್ತಾ ಎಂಬುವರ ಮಾಲೀಕತ್ವದ ಮಾವಿನ ತೋಟದಲ್ಲಿ ಈ ವಿಧದ ಮಾವು ಬೆಳೆಯಲಾಗಿದೆ. ಇದು ಸೌತೆಕಾಯಿ ರುಚಿ ಹೋಲುತ್ತದಂತೆ. ಹಾಗಾಗಿ ಈ ಮಾವು ಆಕರ್ಷಣೆಯ ಕೇಂದ್ರವಾಗಿದೆ. ಇದನ್ನು ತಿಂದರೆ ಸಲಾಡ್ ತಿಂದ ರುಚಿ ನೀಡುತ್ತದಂತೆ. ಇದನ್ನು ಕಾಯಿ ಇದ್ದಾಗಲೇ ತಿನ್ನಬೇಕು. ಹಣ್ಣಾದ ಮೇಲೆ ಇದು ನಿಷ್ಪ್ರಯೋಜಕ. ಕಾರಣ ಹುಳುಗಳು ಮಾವನ್ನು ತಿಂದು ಹಾಕುತ್ತವಂತೆ.
ಇದನ್ನು ಪರಿಶೀಲಿಸಲು 'ಈಟಿವಿ ಭಾರತ' ತಂಡ ಈ ಮಾವಿನ ತಳಿಯನ್ನು ಬೆಳೆಯಲಾಗುವ ತೋಟಕ್ಕೆ ತೆರಳಿ ಪರಿಶೀಲನೆ ನಡೆಸಿದೆ. ಈ ಮಾವಿನ ತಳಿ ತಿಂದ ನಂತರ ಅದು ರುಚಿ ನೀಡದಿರುವುದು ಕಂಡು ಬಂದಿದೆ.