ಕರ್ನಾಟಕ

karnataka

ETV Bharat / bharat

ಅಮೇಥಿಗೆ ಸ್ಮೃತಿ ಇರಾನಿ ದಿಢೀರ್​ ಭೇಟಿ; ಕೊರೊನಾ ಹೋರಾಟದ ಸಿದ್ಧತೆ ಪರಿಶೀಲನೆ - ಜಗದೀಶ್‌ಪುರದ ಮೊಹೋನಾ ಪಾಸ್ಚಿಮ್

ಕೊರೊನಾ ನಿಭಾಯಿಸುವ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆಯಲು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ತಮ್ಮ ಸಂಸದೀಯ ಕ್ಷೇತ್ರವಾದ ಅಮೇಥಿಗೆ ಭೇಟಿ ನೀಡಿದ್ದಾರೆ.

D
D

By

Published : May 28, 2021, 7:08 PM IST

ಅಮೆಥಿ (ಯುಪಿ): ಕೊರೊನಾ ವೈರಸ್ ನಿಭಾಯಿಸುವ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಲು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ತಮ್ಮ ಸಂಸದೀಯ ಕ್ಷೇತ್ರವಾದ ಅಮೇಥಿಗೆ ಭೇಟಿ ನೀಡಿದ್ದಾರೆ.

ಕೊರೊನಾದಿಂದ ಮೃತಪಟ್ಟ ನಾಲ್ಕು ಜನರ ಕುಟುಂಬಗಳನ್ನು ಭೇಟಿಯಾಗಲು ಜಗದೀಶ್‌ಪುರದ ರಘು ಶುಕುಲ್ ಗ್ರಾಮವನ್ನು ತಲುಪಿದಾಗ ಸ್ಥಳೀಯರು ಆಶ್ಚರ್ಯಚಕಿತರಾಗಿದ್ದಾರೆ.

ನಂತರ ಅವರು ಜಗದೀಶ್‌ಪುರದ ಮೊಹೋನಾ ಪಸ್ಚಿಮ್ ಗ್ರಾಮಕ್ಕೆ ತೆರಳಿ, ಅಲ್ಲಿ ಕೊರೊನಾದಿಂದ ನಿಧನರಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ವಿಜಯ್ ಕುಮಾರ್ ಶುಕ್ಲಾ ಅವರ ಕುಟುಂಬ ಸದಸ್ಯರನ್ನು ಭೇಟಿಯಾದರು.

ನಂತರ ಜಗದೀಶ್‌ಪುರ ಸಮುದಾಯ ಆರೋಗ್ಯ ಕೇಂದ್ರವನ್ನು ಪರಿಶೀಲಿಸಿದ ಅವರು, ರೋಗಿಗಳಿಗೆ ಒದಗಿಸಲಾದ ವೈದ್ಯಕೀಯ ಸೌಲಭ್ಯಗಳ ಬಗ್ಗೆ ವಿಚಾರಿಸಿದರು ಮತ್ತು ರೋಗಿಗಳಿಗೆ ಯಾವುದೇ ಅನಾನುಕೂಲತೆ ಉಂಟಾಗದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ABOUT THE AUTHOR

...view details