ಭೋಜ್‌ಪುರ :ಕೇಂದ್ರ ಸಚಿವ ಆರ್‌ಕೆ ಸಿಂಗ್ ಸೋಮವಾರ ಅರ್ರಾ ನ್ಯಾಯಾಲಯಕ್ಕೆ ಶರಣಾಗಿ ಐದು ಸಾವಿರ ಮೊತ್ತದ ಜಾಮೀನು ಪಡೆದು ಹೊರ ಬಂದಿದ್ದಾರೆ. 2014ರ ಲೋಕಸಭೆ ಚುನಾವಣೆ ವೇಳೆ ಸೆಕ್ಷನ್ 144 ಉಲ್ಲಂಘಿಸಿದ್ದಕ್ಕಾಗಿ ಅವರ ವಿರುದ್ಧ ಸೆಕ್ಷನ್ 188ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಸೆಕ್ಷನ್ 144 ಉಲ್ಲಂಘನೆ ಪ್ರಕರಣ : ಕೋರ್ಟ್ಗೆ ಶರಣಾಗಿ ಜಾಮೀನು ಪಡೆದ ಕೇಂದ್ರ ಸಚಿವ - ಆರ್‌ಕೆ ಸಿಂಗ್ಗೆ ಜಾಮೀನು ಮಂಜೂರು ಮಾಡಿದ ಬಿಹಾರ ನ್ಯಾಯಾಲಯ
2014ರ ಲೋಕಸಭೆ ಚುನಾವಣೆ ವೇಳೆ ಸೆಕ್ಷನ್ 144 ಉಲ್ಲಂಘನೆ ಪ್ರಕರಣದಲ್ಲಿ ಕೇಂದ್ರ ಸಚಿವ ಆರ್.ಕೆ ಸಿಂಗ್ಗೆ ಜಾಮೀನು ಮಂಜೂರಾಗಿದೆ..
ಕೋರ್ಟ್ಗೆ ಶರಣಾಗಿ ಜಾಮೀನು ಪಡೆದ ಕೇಂದ್ರ ಸಚಿವ
ಓದಿ:ಚೀನಾ, ಪಾಕಿಸ್ತಾನದಿಂದ ಭಾರತಕ್ಕೆ ವಿದ್ಯುತ್ ಉಪಕರಣಗಳ ಆಮದು ಸ್ಥಗಿತ: ಆರ್.ಕೆ.ಸಿಂಗ್
ಏಪ್ರಿಲ್ 4ರಂದು ವಕೀಲ ಅಭಿಮನ್ಯು ಸಿಂಗ್ ಮರಣದ ನಂತರ ಜಾಮೀನು ರದ್ದು ಆಗಿತ್ತು. ಇದಾದ ಬಳಿಕ ನ್ಯಾಯಾಲಯಕ್ಕೆ ಶರಣಾಗಿ ಜಾಮೀನು ನೀಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆ ನ್ಯಾಯಾಲಯ ಅವರಿಗೆ ಜಾಮೀನು ಮಂಜೂರು ಮಾಡಿದೆ. ಈ ಹಿಂದೆ ಈ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರ ಬಂದಿದ್ದರು.