ಕರ್ನಾಟಕ

karnataka

ETV Bharat / bharat

ಕೃಷ್ಣಂರಾಜು ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ಕೇಂದ್ರ ಸಚಿವ ರಾಜನಾಥ್ ಸಿಂಗ್ - ಈಟಿವಿ ಭಾರತ್​ ಕನ್ನಡ

ಇತ್ತೀಚೆಗೆ ನಿಧನರಾದ ತೆಲುಗು ಚಿತ್ರರಂಗದ ಪ್ರಖ್ಯಾತ ನಟ 'ರೆಬಲ್ ಸ್ಟಾರ್' ಕೃಷ್ಣಂರಾಜು ಅವರ ಮನೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ನೀಡಿ ಸಂತಾಪ ವ್ಯಕ್ತಪಡಿಸಿದರು.

Etv BharatUnion Minister Rajnath Singh
Etv Bharatಕೃಷ್ಣಂರಾಜು ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ಕೇಂದ್ರ ಸಚಿವ ರಾಜನಾಥ್ ಸಿಂಗ್

By

Published : Sep 16, 2022, 5:57 PM IST

Updated : Sep 16, 2022, 6:21 PM IST

ಹೈದರಾಬಾದ್: ಇತ್ತೀಚೆಗೆ ನಿಧನರಾದ ತೆಲುಗು ಹಿರಿಯ ನಟ ಮತ್ತು ಮಾಜಿ ಕೇಂದ್ರ ಸಚಿವ ಕೃಷ್ಣಂ ರಾಜು ಅವರ ಕುಟುಂಬ ಸದಸ್ಯರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭೇಟಿ ಮಾಡಿದ್ದಾರೆ. ನಂತರ ಜೆಆರ್‌ಸಿ ಸಮಾವೇಶದಲ್ಲಿ ನಡೆದ ಕೃಷ್ಣಂ ರಾಜು ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ರಾಜನಾಥ್ ಅವರು ಕೃಷ್ಣಂ ರಾಜು ಸಹೋದರನ ಮಗ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರೊಂದಿಗೆ ವಿಶೇಷ ಮಾತುಕತೆ ನಡೆಸಿದರು.

ಇದಕ್ಕೂ ಮುನ್ನ ಬೇಗಂಪೇಟೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಜನಾಥ್ ಸಿಂಗ್ ಅವರನ್ನು ರಾಜ್ಯ ಬಿಜೆಪಿ ನಾಯಕರು ಅದ್ಧೂರಿಯಾಗಿ ಸ್ವಾಗತಿಸಿದರು. ವಿಮಾನ ನಿಲ್ದಾಣದಿಂದ ರಾಜನಾಥ್ ಸಿಂಗ್ ನೇರವಾಗಿ ಕೃಷ್ಣಂ ರಾಜು ನಿವಾಸಕ್ಕೆ ಭೇಟಿ ನೀಡಿದರು. ನಾಳೆ ತೆಲಂಗಾಣ ವಿಮೋಚನಾ ದಿನಾಚರಣೆ ಆಗಮಿಸಲಿರುವ ಅಮಿತ್​ ಶಾ ಅವರು ಪ್ರಭಾಸ್​ ಅವರನ್ನು ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸೆಪ್ಟೆಂಬರ್ 11 ರಂದು ಕೃಷ್ಣಂ ರಾಜು (83) ಅವರು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಿಧನರಾದರು. ಕೃಷ್ಣಂ ರಾಜು ಅವರು ಎರಡು ಬಾರಿ ಲೋಕಸಭೆ ಸದಸ್ಯರಾಗಿದ್ದರು. ಮತ್ತು ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. 'ರೆಬೆಲ್ ಸ್ಟಾರ್' ಎಂದು ಕರೆಯಲ್ಪಡುವ ರಾಜು 180 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ಅವರು 1966 ರಲ್ಲಿ ತೆಲುಗು ಚಲನಚಿತ್ರ 'ಚಿಲಕಾ ಗೋರಿಂಕಾ' ಮೂಲಕ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರ ಕೆಲವು ಪ್ರಸಿದ್ಧ ಚಲನಚಿತ್ರಗಳು 'ಭಕ್ತ ಕಣ್ಣಪ್ಪ', 'ಕಟಕಟಾಲ ರುದ್ರಯ್ಯ', 'ಬೊಬ್ಬಿಲಿ ಬ್ರಹ್ಮಣ್ಣ' ಮತ್ತು 'ತಂಡ್ರ ಪಾಪರಾಯುಡು'. ಅವರ ಕೊನೆಯ ಚಿತ್ರ ಪ್ರಭಾಸ್ ಅಭಿನಯದ 'ರಾಧೆ ಶ್ಯಾಮ್'.

ಇದನ್ನೂ ಓದಿ :ಟಾಲಿವುಡ್​​ ರೆಬಲ್ ಸ್ಟಾರ್, ನಟ ಪ್ರಭಾಸ್​ ಚಿಕ್ಕಪ್ಪ ಕೃಷ್ಣಂರಾಜು ನಿಧನ

Last Updated : Sep 16, 2022, 6:21 PM IST

ABOUT THE AUTHOR

...view details