ನವದೆಹಲಿ:ರಾಜ್ಯದಲ್ಲಿ ದಿನವೊಂದಕ್ಕೆ 40 ಸಾವಿರ ಪಾಸಿಟಿವ್ ಕೇಸ್ಗಳು ದಾಖಲಾಗುತ್ತಿವೆ. ಬೆಂಗಳೂರಿನಲ್ಲಿ ಅತ್ಯಂತ ಹೆಚ್ಚು ಪಾಸಿಟಿವ್ ಕೇಸ್ಗಳು ವರದಿಯಾಗುತ್ತಿವೆ. ದಿನವೊಂದಕ್ಕೆ 200ಕ್ಕೂ ಹೆಚ್ಚು ಜನ ಕೋವಿಡ್ಗೆ ಬಲಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ರಕ್ಷಣಾ ಸಚಿವರಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕದಲ್ಲಿ ಮಿತಿ ಮೀರಿದ ಕೊರೊನಾ: ಆರ್ಮಿ ಆಸ್ಪತ್ರೆಗಳನ್ನ ಕೋವಿಡ್ ಕೇರ್ ಆಗಿಸಲು ಜೋಶಿ ಮನವಿ - ಕೋವಿಡ್ ನ್ಯೂಸ್
ಕರ್ನಾಟಕದಲ್ಲಿ ಮಿತಿ ಮೀರಿದ ಕೊರೊನಾ ಪ್ರಕರಣಗಳ ಹಿನ್ನೆಲೆಯಲ್ಲಿ ಆರ್ಮಿ ಆಸ್ಪತ್ರೆಗಳನ್ನ ಕೋವಿಡ್ ಕೇರ್ ಆಗಿಸಲು ಜೋಶಿ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಳಿ ಪತ್ರ ಬರೆದು ಮನವಿ ಮಾಡಿದ್ದಾರೆ.
Union Minister Pralhad Joshi has written to Defence Minister Rajnath Singh
ರಾಜ್ಯದಲ್ಲಿ ಇರುವ ಸೇನಾ ಆಸ್ಪತ್ರೆಗಳನ್ನು ತಾತ್ಕಾಲಿಕ ಕೋವಿಡ್ ಕೇರ್ ಸೆಂಟರ್ಗಳನ್ನಾಗಿ ಮಾಡುವಂತೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಕೋವಿಡ್ ಪರಿಹಾರ ನಿಧಿಗೆ ಸಚಿವರು, ಶಾಸಕರ ವೇತನ ದೇಣಿಗೆ ನೀಡಲು ನಿರ್ಧಾರ