ಕರ್ನಾಟಕ

karnataka

ETV Bharat / bharat

ಮಹಾ ರಾಜಕೀಯದಲ್ಲಿ ಹೈಡ್ರಾಮಾ..'ಉದ್ಧವ್​ ಠಾಕ್ರೆ ಕಪಾಳಕ್ಕೆ ಬಾರಿಸುತ್ತಿದ್ದೆ' ಎಂದಿದ್ದ ಕೇಂದ್ರ ಸಚಿವ ನಾರಾಯಣ್ ರಾಣೆ ಬಂಧನ

ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ನಾರಾಯಣ್ ರಾಣೆ ಅವರನ್ನು ರತ್ನಗಿರಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

union-minister-narayan-rane-detained-by-ratnagir-i-police
ಕೇಂದ್ರ ಸಚಿವ ನಾರಾಯಣ್ ರಾಣೆ ಬಂಧನ

By

Published : Aug 24, 2021, 3:59 PM IST

Updated : Aug 24, 2021, 11:00 PM IST

ರತ್ನಗಿರಿ (ಮಹಾರಾಷ್ಟ್ರ):ಮಹಾರಾಷ್ಟ್ರ ಮುಖ್ಯಮಂತ್ರಿ 'ಉದ್ಧವ್ ಠಾಕ್ರೆ ಅವರ ಕಪಾಳಕ್ಕೆ ಹೊಡೆಯುತ್ತಿದ್ದೆ' ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ಕೇಂದ್ರ ಸಚಿವ ನಾರಾಯಣ್ ರಾಣೆ ಅವರನ್ನು ರತ್ನಗಿರಿ ಪೊಲೀಸರು ಬಂಧಿಸಿದ್ದಾರೆ.

ಬಿಜೆಪಿ ಆಯೋಜಿಸಿದ್ದ 'ಜನ ಆಶೀರ್ವಾದ್ ಯಾತ್ರೆ'ಯ ಭಾಗವಾಗಿ ನಿನ್ನೆ ರಾಯಗಡದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಿದ್ದ ನಾರಾಯಣ್ ರಾಣೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.

"ಆಗಸ್ಟ್ 15 ರಂದು ಉದ್ಧವ್ ಠಾಕ್ರೆ ತಮ್ಮ ಭಾಷಣದ ಸಮಯದಲ್ಲಿ ಸ್ವಾತಂತ್ರ್ಯ ಸಿಕ್ಕ ವರ್ಷವನ್ನು ಮರೆತಿದ್ದರು. ಮತ್ತೊಬ್ಬರ ಸಹಾಯದ ಮೇಲೆ ವರ್ಷವನ್ನು ಹೇಳಿದ್ದರು. ನಾನು ಸ್ಥಳದಲ್ಲೇನಾದರೂ ಇದ್ದಿದ್ದರೆ ಅವರ ಕಪಾಳಕ್ಕೆ ಬಾರಿಸುತ್ತಿದ್ದೆ" ಎಂದು ನಾರಾಯಣ್ ರಾಣೆ ಹೇಳಿದ್ದರು.

ಇದನ್ನೂ ಓದಿ:ಕೇಂದ್ರ ಸಚಿವ ರಾಣೆ ಹೇಳಿಕೆಗೆ 'ಮಹಾ' ಕೋಲಾಹಲ: ಶಿವಸೇನೆ-ಬಿಜೆಪಿ ನಡುವೆ ಘರ್ಷಣೆ

ಇವರ ಹೇಳಿಕೆ ಖಂಡಿಸಿ ಇಂದು ಶಿವಸೇನೆ ಕಾರ್ಯಕರ್ತರು ರತ್ನಗಿರಿ ಸೇರಿದಂತೆ ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಬಿಜೆಪಿ ಹಾಗೂ ಶಿವಸೇನೆ ಕಾರ್ಯಕರ್ತರ ನಡುವೆ ಗಲಾಟೆ ಕೂಡ ನಡೆದಿತ್ತು.

ನಾರಾಯಣ್​ ರಾಣೆ ವಿರುದ್ಧ ನಾಸಿಕ್ ನಗರ ಶಿವಸೇನೆ ಘಟಕದ ಮುಖ್ಯಸ್ಥ ಸೈಬರ್ ಪೊಲೀಸ್ ಠಾಣೆಗೆ ಕಂಪ್ಲೇಂಟ್​ ಕೊಟ್ಟಿದ್ದರು. ಈ ದೂರಿನ ಆಧಾರದ ಮೇಲೆ ರಾಣೆ ಮೇಲೆ ಐಪಿಸಿ ಸೆಕ್ಷನ್ 500, 505 (2), 153-ಬಿ (1) (ಸಿ) ಅಡಿಯಲ್ಲಿ FIR ದಾಖಲಾಗಿತ್ತು.

ರಾಣೆ ತಮ್ಮ ವಿರುದ್ಧದ ಎಫ್‌ಐಆರ್‌ ರದ್ದುಗೊಳಿಸುವಂತೆ ಬಾಂಬೆ ಹೈಕೋರ್ಟ್‌ ಮೊರೆ ಹೋಗಿದ್ದರು. ಆದರೆ ಆಗ ಕೋರ್ಟ್‌ನ ಕಾರ್ಯಕಲಾಪ ಅವಧಿ ಮುಕ್ತಾಯವಾಗಿತ್ತು. ಹೀಗಾಗಿ

ಜನ ಆಶೀರ್ವಾದ ಯಾತ್ರೆ ವೇಳೆ ಮಧ್ಯಾಹ್ನದ ಊಟ ಮಾಡುತ್ತಿದ್ದಾಗಲೇ ರತ್ನಗಿರಿ ಪೊಲೀಸರು ನಾರಾಯಣ್ ರಾಣೆ ಅವರನ್ನು ಅರೆಸ್ಟ್ ಮಾಡಿದ್ದರು.

ಕೇಂದ್ರ ಸಚಿವರ ಬಂಧನದ ಪ್ರಕ್ರಿಯೆ ಏನು?

ಕೇಂದ್ರ ಸಚಿವರ ಬಂಧನವಾಗುತ್ತಿದ್ದಂತೆ ಅನೇಕ ಬಿಜೆಪಿ ಮುಖಂಡರು ಮಹಾರಾಷ್ಟ್ರ ಸರ್ಕಾರದ ನಡೆ ಪ್ರಶ್ನೆ ಮಾಡಿದ್ದು, ಅವರ ಬಂಧನದ ವೇಳೆ ನಿಯಮಾವಳಿ ಹಾಗೂ ಶಿಷ್ಟಾಚಾರ ಗಾಳಿಗೆ ತೋರಿದೆ ಎಂದು ಹೇಳಿದೆ. ಕೇಂದ್ರ ಸಚಿವರನ್ನ ರಾಜ್ಯ ಸರ್ಕಾರ ಬಂಧನ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದೆ.

ಕೇಂದ್ರ ಸಚಿವ ಸಂಪುಟದಲ್ಲಿ ಮಂತ್ರಿಯಾಗಿರುವವರನ್ನ ದಿಢೀರ್​ ಆಗಿ ಬಂಧಿಸಲು ಸಾಧ್ಯವಿಲ್ಲ. ಸಂಸತ್​ ಕಲಾಪ ನಡೆಯುವ ಸನ್ನಿವೇಶದಲ್ಲಿ ಸಚಿವರ ವಿರುದ್ಧ ಅಪರಾಧ ಪ್ರಕರಣ ದಾಖಲಾಗಿದ್ದರೆ ಕಾನೂನು ಜಾರಿ ಸಂಸ್ಥೆ ಅವರ ಬಂಧನ ಮಾಡಬಹುದು. ಆದರೆ ಈ ವೇಳೆ ಅನೇಕ ಶಿಷ್ಟಾಚಾರ ಪಾಲನೆ ಮಾಡಬೇಕಾಗುತ್ತದೆ.

ಬಂಧನ ಮಾಡುವುದಕ್ಕೂ ಮುಂಚಿತವಾಗಿ ರಾಜ್ಯಸಭೆ ಅಧ್ಯಕ್ಷರಿಗೆ ಮಾಹಿತಿ ನೀಡಬೇಕು. ಇದೀಗ ಅವರ ಬಂಧನ ಮಾಡುವ ಬಗ್ಗೆ ಪೊಲೀಸರು ರಾಜ್ಯಸಭೆ ಅಧ್ಯಕ್ಷರಾಗಿರುವ ಎಂ. ವೆಂಕಯ್ಯ ನಾಯ್ಡು ಅವರಿಗೆ ಮಾಹಿತಿ ನೀಡಬೇಕು. ಆದರೆ ಇದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

Last Updated : Aug 24, 2021, 11:00 PM IST

ABOUT THE AUTHOR

...view details