ಗ್ವಾಲಿಯರ್ (ಮಧ್ಯಪ್ರದೇಶ): ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅಭಿನಂದನಾ ಸಮಾರಂಭವೊಂದರಲ್ಲಿ ಮಹಿಳಾ ಪೌರ ಕಾರ್ಮಿಕರೊಬ್ಬರ ಪಾದ ಸ್ಪರ್ಶಿಸಿ ಆಶೀರ್ವಾದ ಪಡೆದರು. ಇದೇ ವೇಳೆ ಆ ಮಹಿಳೆಯನ್ನು ಅಪ್ಪಿಕೊಂಡು ಕೃತಜ್ಞತೆ ಸಲ್ಲಿಸಿದರು. ವೇದಿಕೆಯಿಂದ ಕೆಳಗಿಳಿದ ಸಚಿವರು, ಮತ್ತೊಬ್ಬ ಮಹಿಳಾ ಪೌರ ಕಾರ್ಮಿಕೆಯ ಕೈ ಹಿಡಿದು ವೇದಿಕೆಗೆ ಕರೆತಂದರು.
ಈ ಸಂದರ್ಭದಲ್ಲಿ ದೀಪ ಬೆಳಗಿಸಿ ಕಾರ್ಯಕ್ರಮ ಆರಂಭಿಸುವಂತೆ ಹೇಳಿ ನಂತರ ಆಕೆಯನ್ನು ವೇದಿಕೆಯ ತಮ್ಮ ಪಕ್ಕದ ಆಸನದಲ್ಲಿ ಕೂರಿಸಿದರು. ಕಾರ್ಯಕ್ರಮದಲ್ಲಿ ಸ್ವಚ್ಛತಾ ಕಾರ್ಮಿಕರಿಗೆ ಗ್ಲೌಸ್, ಶೂ, ಕ್ಯಾಪ್, ಜಾಕೆಟ್‌ಗಳು, ಸುರಕ್ಷತಾ ಸಾಧನಗಳು ಸೇರಿದಂತೆ ಆರೋಗ್ಯ ಕಾರ್ಡುಗಳನ್ನು ವಿತರಿಸಲಾಯಿತು. ಬಳಿಕ ಪೌರ ಕಾರ್ಮಿಕ ಸೇವೆಯನ್ನು ಶ್ಲಾಘಿಸಿದರು.