ಕರ್ನಾಟಕ

karnataka

ETV Bharat / bharat

'ತಾಯಂದಿರ ದಿನದಂತೆ ಪತ್ನಿಯರ ದಿನವನ್ನೂ ಆಚರಿಸಬೇಕು': ಕೇಂದ್ರ ಸಚಿವ ಅಠಾವಳೆ

ತಾಯಂದಿರ ದಿನದ ರೀತಿ 'ಪತ್ನಿಯರ ದಿನ'ವನ್ನು ಸಹ ಆಚರಿಸಬೇಕೆಂದು ಕೇಂದ್ರ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ರಾಮದಾಸ್ ಅಠಾವಳೆ ಒತ್ತಾಯಿಸಿದ್ದಾರೆ.

ರಾಮದಾಸ್ ಅಠಾವಳೆ
ರಾಮದಾಸ್ ಅಠಾವಳೆ

By

Published : May 16, 2022, 9:14 AM IST

ಮುಂಬೈ: ಕೆಲವು ಕುತೂಹಲಕಾರಿ ಹೇಳಿಕೆ ನೀಡುವ ಮೂಲಕ ಆಗಾಗ ಸುದ್ದಿಯಲ್ಲಿರುವ ಕೇಂದ್ರ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ರಾಮದಾಸ್ ಅಠಾವಳೆ ಇದೀಗ ಅಂತಹದ್ದೇ ಹೇಳಿಕೆಯೊಂದನ್ನು ನೀಡಿದ್ದಾರೆ. ತಾಯಂದಿರ ದಿನದಂತೆ 'ಪತ್ನಿಯರ ದಿನ'ವನ್ನೂ ಆಚರಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ತಾಯಿಯು ಜನ್ಮ ನೀಡಿದರೆ, ಪತ್ನಿಯು ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ತನ್ನ ಪತಿಗೆ ಬೆಂಬಲವಾಗಿ ನಿಲ್ಲುತ್ತಾಳೆ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೊಬ್ಬ ಮಹಿಳೆ ಇರುತ್ತಾಳೆ. ಆದ್ದರಿಂದ ನಾವು ಪತ್ನಿಯರ ದಿನವನ್ನು ಆಚರಿಸಬೇಕು ಎಂದರು. ಮೇ ತಿಂಗಳ ಎರಡನೇ ಭಾನುವಾರ ಅಂತರರಾಷ್ಟ್ರೀಯ ತಾಯಂದಿರ ದಿನವನ್ನಾಗಿ ಆಚರಿಸಲಾಗುತ್ತದೆ.

ಇದನ್ನೂ ಓದಿ:ಪತಿ ಜೊತೆಗಿನ ಜಗಳದಿಂದ ಬೇಸತ್ತು 65 ಕಿ.ಮೀ ನಡೆದುಬಂದ ಗರ್ಭಿಣಿ, ಹೆಣ್ಣು ಮಗುವಿಗೆ ಜನ್ಮ

ABOUT THE AUTHOR

...view details