ಕರ್ನಾಟಕ

karnataka

ETV Bharat / bharat

ಕೇಂದ್ರ ಗೃಹ ಸಚಿವ ಅಮಿತ್ ಶಾ ಚೆನ್ನೈ ಭೇಟಿ: ಪೊಲೀಸ್​​ ಬಿಗಿ ಭದ್ರತೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮಿಳುನಾಡಿಗೆ ಇಂದು ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆ ಭಾರಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

Union minister Amit shah
ಕೇಂದ್ರ ಗೃಹ ಸಚಿವ ಅಮಿತ್ ಶಾ

By

Published : Nov 21, 2020, 11:07 AM IST

ಚೆನ್ನೈ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮಿಳುನಾಡಿಗೆ ಇಂದು ಭೇಟಿ ನೀಡಲಿದ್ದಾರೆ. 2 ದಿನಗಳ ಕಾಲ ಇಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಮಧ್ಯಾಹ್ನ 1;40ಕ್ಕೆ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ.

ಅಮಿತ್ ಶಾ ಭೇಟಿ ಹಿನ್ನೆಲೆ ಭಾರಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಅವರನ್ನು ಸ್ವಾಗತಿಸಲು ಹಳೆಯ ವಿಮಾನ ನಿಲ್ದಾಣವನ್ನು ಅಲಂಕರಿಸಲಾಗಿದೆ. ತರಕಾರಿಗಳು, ಹಣ್ಣುಗಳು ಮತ್ತು ಹೂವುಗಳು, ತೆಂಗಿನಕಾಯಿ, ತಾಳೆ ಎಲೆಗಳು, ಅಲಂಕಾರಿಕ ವಸ್ತುಗಳು, ಬಾಳೆ ಮರಗಳು, ಕಬ್ಬಿನ ಗಿಡಗಳಿಂದ ವಿಮಾನ ನಿಲ್ದಾಣವನ್ನು ಅಲಂಕರಿಸಲಾಗಿದ್ದು, ಅದ್ಧೂರಿ ಸ್ವಾಗತ ಕಾದಿದೆ.

ಸಚಿವ ಅಮಿತ್ ಶಾ ಚೆನ್ನೈ ಭೇಟಿ ಹಿನ್ನೆಲೆ ಸಿದ್ಧತೆ

ತಮಿಳುನಾಡು ಮುಖ್ಯಮಂತ್ರಿ ಮತ್ತು ಇತರ ಸಚಿವರು ಸೇರಿದಂತೆ ಬಿಜೆಪಿ ಮುಖಂಡರು ಮಧ್ಯಾಹ್ನ ಇಂದು ಮಧ್ಯಾಹ್ನ 1.40ಕ್ಕೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಅಮಿತ್ ಶಾ ಅವರನ್ನು ಸ್ವಾಗತಿಸಲಿದ್ದಾರೆ.

ಚೆನ್ನೈ ತಲುಪಿದ ನಂತರ ಅಮಿತ್ ಶಾ ಎಂಆರ್‌ಸಿ ನಗರದ ಖಾಸಗಿ ಸ್ಟಾರ್ ಹೋಟೆಲ್​​ನಲ್ಲಿ ಕೆಲ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ನಂತರ ಸಂಜೆ 4 ಗಂಟೆಗೆ ಚೆನ್ನೈನ ಕಲೈನಾರ್ ಅರಂಗಂನಲ್ಲಿ ನಡೆಯಲಿರುವ ರಾಜ್ಯ ಸರ್ಕಾರದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ನಂತರ ತಿರುವಳ್ಳೂರು ಜಿಲ್ಲೆಯ ಥರ್ವೊಯ್-ಕಂಡಿಗೈ ಜಲಾಶಯ ಯೋಜನೆ ಮತ್ತು ಮೆಟ್ರೋ ರೂಲಿನ ವಿಸ್ತರಣೆ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ, ನಿಗಾ ಇಡಲಾಗಿದೆ.

ಅಮಿತ್ ಶಾ ಅವರು ಸೂಪರ್ ಸ್ಟಾರ್ ನಟ ರಜನಿಕಾಂತ್ ಅವರನ್ನು ಮಧ್ಯಾಹ್ನ 2.30 ಕ್ಕೆ ಪೋಸ್ ಗಾರ್ಡನ್‌ನಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾಗಲು ಯೋಜಿಸಿದ್ದಾರೆ ಎನ್ನುವ ಮಾಹಿತಿ ಬಿಜೆಪಿ ಪಕ್ಷದ ಸದಸ್ಯರಿಂದ ತಿಳಿದು ಬಂದಿದೆ. ಆದರೆ ಈ ವಿಚಾರವನ್ನು ಅಧಿಕೃತವಾಗಿ ಘೋಷಿಸಿಲ್ಲ.

ABOUT THE AUTHOR

...view details