ಕರ್ನಾಟಕ

karnataka

ETV Bharat / bharat

ಕೇಂದ್ರ ಕಾನೂನು ಕಾರ್ಯದರ್ಶಿಗೆ ಹೈಕೋರ್ಟ್​ ನ್ಯಾಯಮೂರ್ತಿಯಾಗಿ ಬಡ್ತಿ.. ಈ ಕ್ರಮ ಇದೇ ಮೊದಲು.. - ಅನೂಪ್ ಕುಮಾರ್ ಮೆಂಡಿರಟ್ಟಾಗೆ ಬಡ್ತಿ

ಕೇಂದ್ರ ಕಾನೂನು ಕಾರ್ಯದರ್ಶಿ ಅನೂಪ್​ ಕುಮಾರ್​ ಮೆಂಡಿರಟ್ಟಾ ಅವರನ್ನು ದೆಹಲಿ ಹೈಕೋರ್ಟ್​ನ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲಾಗಿದೆ. ವಿಶೇಷವೆಂದರೆ ಇದೇ ಮೊದಲ ಬಾರಿಗೆ ಕಾನೂನು ಕಾರ್ಯದರ್ಶಿಯೊಬ್ಬರಿಗೆ ನ್ಯಾಯಮೂರ್ತಿಗಳಾಗಿ ಬಡ್ತಿ ನೀಡಲಾಗಿದೆ..

appointed
ಹೈಕೋರ್ಟ್

By

Published : Feb 25, 2022, 1:20 PM IST

ನವದೆಹಲಿ :ಕೇಂದ್ರ ಕಾನೂನು ಕಾರ್ಯದರ್ಶಿ ಅನೂಪ್​ ಕುಮಾರ್​ ಮೆಂಡಿರಟ್ಟಾ ಅವರನ್ನು ದೆಹಲಿ ಹೈಕೋರ್ಟ್​ನ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲಾಗಿದೆ. ವಿಶೇಷವೆಂದರೆ ಇದೇ ಮೊದಲ ಬಾರಿಗೆ ಕಾನೂನು ಕಾರ್ಯದರ್ಶಿಯೊಬ್ಬರನ್ನು ನ್ಯಾಯಮೂರ್ತಿಗಳಾಗಿ ಬಡ್ತಿ ನೀಡಲಾಗಿದೆ.

ಕೇಂದ್ರ ಕಾನೂನು ಸಚಿವಾಲಯದ ನ್ಯಾಯಾಂಗ ಇಲಾಖೆಯ ಪ್ರಕಾರ, ಕೇಂದ್ರ ಕಾನೂನು ಕಾರ್ಯದರ್ಶಿ ಅನೂಪ್‌ಕುಮಾರ್ ಮೆಂಡಿರಟ್ಟಾ ಅವರನ್ನು ದೆಹಲಿ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಬಡ್ತಿ ನೀಡಲಾಗಿದೆ.

ಮೆಂಡಿರಟ್ಟಾ ಅವರು 2019ರಲ್ಲಿ ದೆಹಲಿ ಕಾನೂನು ಕಾರ್ಯದರ್ಶಿಯಾದಾಗ ನ್ಯಾಯಾಂಗ ಅಧಿಕಾರಿಯಾಗಿಯೂ ಕೆಲಸ ಮಾಡಿದ್ದರು. ಅಲ್ಲದೇ, ಜಿಲ್ಲಾ ಮತ್ತು ಸೆಷನ್ಸ್​ ನ್ಯಾಯಾಧೀಶರನ್ನು ಕೇಂದ್ರ ಕಾನೂನು ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ್ದೂ ಕೂಡ ಇದೇ ಮೊದಲಾಗಿದೆ ಎಂದು ತಿಳಿಸಿದೆ.

ಮೆಂಡಿರಟ್ಟಾ ಅವರ ಜೊತೆಗೆ ಇನ್ನು ಮೂವರು ನ್ಯಾಯಾಂಗ ಅಧಿಕಾರಿಗಳಾದ ನೀನಾ ಬನ್ಸಾಲ್ ಕೃಷ್ಣ, ದಿನೇಶ್ ಕುಮಾರ್ ಶರ್ಮಾ ಮತ್ತು ಸುಧೀರ್ ಕುಮಾರ್ ಜೈನ್ ಅವರನ್ನು ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿಗಳಾಗಿ ಬಡ್ತಿ ನೀಡಲಾಗಿದೆ.

ಓದಿ:ಯುದ್ಧ ಟ್ಯಾಂಕರ್​ಗಳ ಮೇಲೆ 'Z' ಅಕ್ಷರ...ರಷ್ಯಾದ ಮೊದಲ ಟಾರ್ಗೆಟ್​ ಉಕ್ರೇನ್​ ಅಧ್ಯಕ್ಷ ಜೆಲೆನ್​ಸ್ಕಿ?

ABOUT THE AUTHOR

...view details