ತಮಿಳುನಾಡು (ಪುದುಚೇರಿ):ಪುದುಚೇರಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಪುದುಚೆರಿಗೆ ಆಗಮಿಸಿದ್ದು, ತಮ್ಮ ಅಭ್ಯರ್ಥಿಗಳ ಪರವಾಗಿ ಭರ್ಜರಿ ರೋಡ್ ಶೋ ನಡೆಸುತ್ತಿದ್ದಾರೆ.
ಇಲ್ಲಿನ ಪುದುಚೇರಿ ವಿಮಾನ ನಿಲ್ದಾಣದಿಂದ ಕರುವಾಡಿಕಪ್ಪಂನ ಸೀತಾನಂದ ಸ್ವಾಮಿಗಲ್ ದೇವಸ್ಥಾನಕ್ಕೆ ತೆರಳಿದ ಗೃಹ ಸಚಿವರು ಅಲ್ಲಿಂದ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ತೆರದ ವಾಹನದಲ್ಲಿ ಗೃಹ ಸಚಿವರು ಎನ್‌ಡಿಎ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಅಮಿತ್ ಷಾ ಅವರು ಎರಡನೇ ಬಾರಿಗೆ ಕೇಂದ್ರಾಡಳಿತ ಪ್ರದೇಶ ಪುದುಚೇರಿಗೆ ಭೇಟಿ ನೀಡದಂತಾಗಿದೆ. ಈ ಮೊದಲು ಫೆಬ್ರವರಿಯಲ್ಲಿ ಕಾರೈಕಲ್‌ಗೆ ಬಂದಾಗ ಭೇಟಿ ಮಾಡಿದ್ದರು.