ಕರ್ನಾಟಕ

karnataka

ETV Bharat / bharat

ನಿವಾಸಗಳ ಮೇಲೆ ರಾಷ್ಟ್ರಧ್ವಜ ಹಾರಿಸಿ ಅಭಿಯಾನದಲ್ಲಿ ಭಾಗಿಯಾಗಲು ಅಮಿತ್​ ಶಾ ಕರೆ - Amit Shah wife Sonal Shah hoist tricolour at their residence

ಹರ್​ ಘರ್ ತಿರಂಗ ಅಭಿಯಾನದಡಿ ಕೇಂದ್ರ ಸಚಿವ ಅಮಿತ್​ ಶಾ ಅವರು ತಮ್ಮ ನಿವಾಸದ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿ, ಎಲ್ಲರೂ ಅಭಿಯಾನದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

union home minister amit shah hoist the tricolour
ಅಮಿತ್​ ಶಾ ಕರೆ

By

Published : Aug 13, 2022, 11:16 AM IST

ನವದೆಹಲಿ:ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪತ್ನಿ ಸೋನಾಲ್ ಶಾ ಅವರ ಜೊತೆಗೂಡಿ ಹರ್​ ಘರ್​ ತಿರಂಗಾ ಅಭಿಯಾನದ ಅಂಗವಾಗಿ ತಮ್ಮ ನಿವಾಸದ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದರು.

ಬಳಿಕ ಧ್ವಜಾರೋಹಣದ ಚಿತ್ರಗಳನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡು, ತಿರಂಗ ನಮ್ಮ ಹೆಮ್ಮೆ. ಇದು ಪ್ರತಿಯೊಬ್ಬ ಭಾರತೀಯರನ್ನು ಒಂದುಗೂಡಿಸುತ್ತದೆ. ಪ್ರೇರೇಪಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ಹರ್​ ಘರ್​ ತಿರಂಗ ಕರೆಯ ಮೇರೆಗೆ ನಮ್ಮ ನಿವಾಸದ ಮೇಲೆ ರಾಷ್ಟ್ರಧ್ವಜ ಹಾರಿಸಲಾಯಿತು. ಮಾತೃಭೂಮಿಗಾಗಿ ಪ್ರಾಣ ತ್ಯಾಗ ಮಾಡಿದ ನಮ್ಮ ವೀರರಿಗೆ ಶ್ರದ್ಧಾಂಜಲಿ ಎಂದು ಬರೆದುಕೊಂಡಿದ್ದಾರೆ.

ಇನ್ನೊಂದು ಟ್ವೀಟ್​ ಮಾಡಿ, ಆಗಸ್ಟ್ 13 ರಿಂದ 15 ರವರೆಗೆ ನಿಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಿ, ಪ್ರತಿಯೊಬ್ಬರ ಹೃದಯದಲ್ಲಿ ದೇಶಭಕ್ತಿಯ ಮನೋಭಾವ ಜಾಗೃತಿಗೊಳಿಸಿ ಎಂದು ಮನವಿ ಮಾಡಿದ್ದಾರೆ. ಜೊತೆಗೆ ಈ ಅಭಿಯಾನದ ಭಾಗವಾಗಿ ಎಂದು ದೇಶವಾಸಿಗಳಿಗೆ ಕರೆಕೊಟ್ಟರು.

ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದ ಬಳಿಕ ಅದರ ಜೊತೆಗಿನ ಫೋಟೋಗಳನ್ನು http://hargartiranga.com ನಲ್ಲಿ ಅಪ್ಲೋಡ್​​ ಮಾಡಿ ಮತ್ತು ಹೀಗೆ ಮಾಡಲು ಎಲ್ಲರನ್ನೂ ಪ್ರೇರೇಪಿಸಿ ಎಂದು ಕೋರಿದ್ದಾರೆ.

ಉಪ್ರದಲ್ಲಿ ಸಿಎಂ ಯೋಗಿ ಚಾಲನೆ:ಇನ್ನು ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಹರ್​ ಘರ್​ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿದರು. ತಮ್ಮ ನಿವಾಸದ ಮುಂದೆ ಶಾಲಾ ಮಕ್ಕಳೊಂದಿಗೆ ಕೂಡಿ ತಿರಂಗಾವನ್ನು ಹಿಡಿದು ಸಂಭ್ರಮಿಸಿದರು.

ಓದಿ:ಮನೆ ಮನೆ ತಿರಂಗಾ ಅಭಿಯಾನ.. ಸಿಎಂ ಸೇರಿ ಬಿಜೆಪಿ ನಾಯಕರಿಂದ ಮನೆ ಮುಂದೆ ಧ್ವಜಾರೋಹಣ

ABOUT THE AUTHOR

...view details