ವಾರಣಾಸಿ(ಉತ್ತರಪ್ರದೇಶ):ಹಿಂದಿ ಎಲ್ಲ ಭಾರತೀಯ ಭಾಷೆಗಳ ಸ್ನೇಹಿತ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ(Union Home Minister Amit Shah) ಅಭಿಪ್ರಾಯಪಟ್ಟಿದ್ದಾರೆ.
ವಾರಣಾಸಿಯಲ್ಲಿ ಅಖಿಲ ಭಾರತೀಯ ರಾಜಭಾಷಾ (Akhil Bhartiya Rajbhasha Sammelan) ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಶಾ, ತನ್ನ ಭಾಷೆ ರಕ್ಷಣೆ ಮಾಡಲು ಸಾಧ್ಯವಾಗದ ದೇಶ ಅಲ್ಲಿನ ಸಂಸ್ಕೃತಿ ಹಾಗೂ ಚಿಂತನೆ ಪ್ರಕ್ರಿಯೆ ಸಂರಕ್ಷಣೆ ಮಾಡಲು ಸಾಧ್ಯವಿಲ್ಲ ಎಂದರು.
ಪ್ರತಿಯೊಬ್ಬ ಭಾರತೀಯರು ಭಾರತದ ಎಲ್ಲ ಭಾಷೆಗಳನ್ನ ಉಳಿಸುವುದರ ಜೊತೆಗೆ ಬೆಳೆಸುವುದು ಅಗತ್ಯವಾಗಿದೆ ಎಂದಿರುವ ಅಮಿತ್ ಶಾ, ಭಾರತದ ಸಮೃದ್ಧಿ ನಮ್ಮ ದೇಶದ ಭಾಷೆಗಳ ಏಳಿಗೆಯಲ್ಲಿದೆ ಎಂದರು.
ಇಂಗ್ಲಿಷ್ ಮಾತನಾಡಲು ಬಾರದ ಕೆಲ ಮಕ್ಕಳ ಮನಸ್ಸಿನಲ್ಲಿ ಕೀಳರಿಮೆ ಭಾವನೆ ಇದೆ. ಆದರೆ, ಬರುವ ದಿನಗಳಲ್ಲಿ ಮಾತೃಭಾಷೆ ಮಾತನಾಡಲು ಬಾರದವರು ಕೀಳರಿಮೆ ಹೊಂದುವ ಕಾಲ ದೂರವಿಲ್ಲ ಎಂದಿದ್ದಾರೆ.
ನಾನು ಗುಜರಾತಿ ಭಾಷೆಗಿಂತಲೂ ಹೆಚ್ಚಾಗಿ ಹಿಂದಿ(Hindi language) ಭಾಷೆಯನ್ನ ಪ್ರೀತಿಸುತ್ತೇನೆ. ನಾವೆಲ್ಲರೂ ಅಧಿಕೃತವಾಗಿ ಹಿಂದಿ ಭಾಷೆ ಬಲಪಡಿಸಬೇಕಾಗಿದೆ ಎಂದು ತಿಳಿಸಿದರು.
ಜನರು ತಮ್ಮ ಮಾತೃಭಾಷೆ ಮಾತನಾಡಲು ಹೆಮ್ಮೆ ಪಡುವಂತಹ ವಾತಾವರಣ ನಿರ್ಮಾಣ ಮಾಡಬೇಕಾದ ಅಗತ್ಯವಿದೆ ಎಂದಿರುವ ಗೃಹ ಸಚಿವರು, ಹಿಂದಿ ಭಾಷೆಯ ಸುತ್ತಲೂ ಸಾಕಷ್ಟು ವಿವಾದ ಸೃಷ್ಟಿಸುವ ಕೆಲಸ ನಡೆದಿತ್ತು. ಆದರೆ, ಇದೀಗ ಅದೆಲ್ಲವೂ ಮುಗಿದು ಹೋದ ಅಧ್ಯಾಯ ಎಂದರು.
ಭಾರತೀಯ ಭಾಷೆಗಳ ಸಂಭಾಷಣೆ ಮತ್ತು ಬೆಳವಣಿಗೆ ರಾಷ್ಟ್ರೀಯ ಶಿಕ್ಷಣ ನೀತಿ(National Education Policy) ಕೇಂದ್ರ ಸ್ತಂಭವಾಗಿದೆ. ಇಂಜಿನಿಯರಿಂಗ್ & ವೈದ್ಯಕೀಯ ಕೋರ್ಸ್ ಪಠ್ಯ ಕ್ರಮ ಇದೀಗ ಎಂಟು ಭಾರತೀಯ ಭಾಷೆಗೆ ಅನುವಾದ ಮಾಡಲಾಗಿದೆ.
ಕೇಂದ್ರ ಗೃಹ ಸಚಿವಾಲಯದಲ್ಲಿ ಯಾವುದೇ ಕಡತ ಇಂಗ್ಲಿಷ್ನಲ್ಲಿ ಬರೆಯುತ್ತಿಲ್ಲ ಎಂದು ಹೇಳಲು ನನಗೆ ಹೆಮ್ಮೆ ಇದೆ. ಅಧಿಕೃತವಾಗಿ ಹಿಂದಿ ಭಾಷೆ ಅಳವಡಿಕೆ ಮಾಡಲಾಗಿದೆ ಎಂದರು.
ಇದನ್ನೂ ಓದಿರಿ:Khel Ratna: ನೀರಜ್ ಚೋಪ್ರಾ, ರವಿ ಕುಮಾರ್ ಸೇರಿ ಕ್ರೀಡಾಪಟುಗಳಿಗೆ ಖೇಲ್ ರತ್ನ... ಪ್ರಶಸ್ತಿ ನೀಡಿದ ರಾಷ್ಟ್ರಪತಿ
ಸ್ವಾತಂತ್ರ್ಯ ಪಡೆದು 10 ವರ್ಷ ಪೂರೈಕೆ ಮಾಡುವ ವೇಳೆಗೆ ದೇಶೀಯ ಭಾಷೆ ಎಷ್ಟು ಪ್ರಬಲವಾಗಬೇಕೆಂದರೆ ನಾವು ಯಾವುದೇ ವಿದೇಶಿ ಭಾಷೆಯ ಸಹಾಯ ತೆಗೆದುಕೊಳ್ಳುವ ಅಗತ್ಯವಿರುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು ಎಂದು ತಿಳಿಸಿದರು.
ಸ್ವರಾಜ್, ಸ್ವದೇಶಿ, ಸ್ವಭಾಷಾ ಸ್ವಾತಂತ್ರ್ಯದ ಮೂರು ಸ್ತಂಭಗಳಾಗಿವೆ. ಅವುಗಳ ಹಿಂದೆ ನಾವು ಹೋಗಬೇಕು ಎಂದರು. ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಮೇಕ್ ಇನ್ ಇಂಡಿಯಾ ಮೂಲಕ ಸ್ವದೇಶಿ ಮಂತ್ರ ಪಠಿಸಿದ್ದು, ಇದೀಗ ನಾವೆಲ್ಲರೂ ಅದಕ್ಕಾಗಿ ಕೈಜೋಡಿಸುವ ಅಗತ್ಯವಿದೆ ಎಂದರು.