ನವದೆಹಲಿ :ಕೋವಿಡ್ ಚಿಕಿತ್ಸೆಯ ಭಾಗವಾಗಿ ಬಳಸಲಾಗುವ ಐವರಿಕ್ಟಿನ್, ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಫೆವಿಪಿರವಿರ್ ಮುಂತಾದ ಔಷಧಗಳು ವಯಸ್ಕರಿಗೆ ಮಾತ್ರ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಕೊರೊನಾ ಸೋಂಕಿತ ಮಕ್ಕಳಲ್ಲಿ ಬಳಸಲು ಇದನ್ನು ಶಿಫಾರಸು ಮಾಡಿಲ್ಲ ಎಂದು ಹೇಳಿದೆ. ಈ ಬಗ್ಗೆ ಮಾರ್ಗಸೂಚಿಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. ಡಾಕ್ಸಿಸೈಕ್ಲಿನ್ ಮತ್ತು ಅಜಿಥ್ರೊಮೈಸಿನ್ ನಂತಹ ಪ್ರತಿಜೀವಕಗಳಿಗೂ ಮೇಲಿನ ಔಷಧಿಗಳನ್ನು ಬಳಸಬಹುದು. ಆದರೆ, ಈ ಔಷಧಿಗಳು ಮತ್ತು ಪ್ರತಿಜೀವಕಗಳನ್ನು ಈವರೆಗೆ ಮಕ್ಕಳಲ್ಲಿ ಬಳಸಲಾಗಿಲ್ಲ ಎಂದು ಹೇಳಿದೆ.
ಕೊರೊನಾ ವೈರಸ್ ತೀವ್ರತೆ ಅಧಿಕವಾಗಿರುವ ಮಕ್ಕಳಿಗೆ ಚಿಕಿತ್ಸೆ ನೀಡುವ ಸಂಬಂಧ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಸೌಲಭ್ಯಗಳನ್ನು ಸುಧಾರಿಸಲು ಕೇಂದ್ರ ಆರೋಗ್ಯ ಸಚಿವಾಲಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಕೋವಿಡ್ ಲಸಿಕೆ ಮಕ್ಕಳಿಗೆ ಲಭ್ಯವಾದರೆ, ಆರೋಗ್ಯ ಸಮಸ್ಯೆಗಳಿರುವವರಿಗೆ ಆದ್ಯತೆಯ ದೃಷ್ಟಿಯಿಂದ ವ್ಯಾಕ್ಸಿನ್ ನೀಡುವುದಾಗಿ ತಿಳಿಸಿದೆ.
ಮಾರ್ಗದರ್ಶನಗಳು...
1. ಎರಡನೇ ಹಂತವೆಂದರೆ ಗರಿಷ್ಠ ಸಂಖ್ಯೆಯ ನೋಂದಾಯಿತ ಪ್ರಕರಣಗಳ ಆಧಾರದ ಮೇಲೆ ಪ್ರತಿ ಜಿಲ್ಲೆಯ ಮಕ್ಕಳಿಗೆ ಹೆಚ್ಚುವರಿ ಹಾಸಿಗೆಗಳ ಸೌಲಭ್ಯವನ್ನು ಅಂದಾಜು ಮಾಡುವುದು. ಇದರಿಂದ ಮಕ್ಕಳ ಕೋವಿಡ್ ಪ್ರಕರಣಗಳು ಮತ್ತು ಆಸ್ಪತ್ರೆಗೆ ಬರುವ ಪ್ರಕರಣಗಳ ವಿವರಗಳನ್ನು ತಿಳಿದುಕೊಳ್ಳಬಹುದು.
2. ಅಸ್ತಿತ್ವದಲ್ಲಿರುವ ಕೋವಿಡ್ ಆರೈಕೆ ಕೇಂದ್ರಗಳು ತೀವ್ರವಾದ ಕೋವಿಡ್‌ನಿಂದ ಬಳಲುತ್ತಿರುವ ಮಕ್ಕಳಿಗೆ ಚಿಕಿತ್ಸೆ ನೀಡಲು ಸೌಲಭ್ಯಗಳನ್ನು ಸುಧಾರಿಸಬೇಕಾಗಿದೆ. ಮಕ್ಕಳಿಗೆ ವಿಶೇಷವಾಗಿ ಅಗತ್ಯವಿರುವ ಸಲಕರಣೆಗಳು ಮತ್ತು ಮೂಲಸೌಕರ್ಯಗಳನ್ನು ಒದಗಿಸಬೇಕು.
3. ಸುಶಿಕ್ಷಿತ ಮಾನವ ಸಂಪನ್ಮೂಲವನ್ನು (ವೈದ್ಯರು,ದಾದಿಯರು) ಸಿದ್ಧಪಡಿಸಿಕೊಳ್ಳಬೇಕು. ಮಕ್ಕಳ ಆರೈಕೆಗಾಗಿ ವೈದ್ಯಕೀಯ ಅಧಿಕಾರಿಗಳು ಸಾಮರ್ಥ್ಯ ವೃದ್ಧಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು.