ನವದೆಹಲಿ:ಬಹುನಿರೀಕ್ಷಿತ ಕೇಂದ್ರ ಸಚಿವ ಸಂಪುಟ ನಾಳೆಯೇ ಪುನರ್ರಚನೆಯಾಗಲಿದ್ದು, ಯಾರ್ಯಾರು ಕೇಂದ್ರ ಸಚಿವ ಸ್ಥಾನ ಅಲಂಕರಿಸಲಿದ್ದಾರೆ ಎಂದು ಗೊತ್ತಾಗಲಿದೆ ಎಂದು ಎಎನ್ಐ ಮಾಹಿತಿ ನೀಡಿದೆ.
ನಾಳೆ ಸಂಜೆಯೇ ಕೇಂದ್ರ ಸಚಿವ ಸಂಪುಟ ಪುನರ್ರಚನೆ: ಅಧಿಕೃತ ಮೂಲಗಳ ಮಾಹಿತಿ - ಪ್ರಧಾನಿ ನರೇಂದ್ರ ಮೋದಿ
ನಾಳೆ ಸಂಜೆ ಕೇಂದ್ರ ಸಚಿವ ಸಂಪುಟ ಪುನರ್ ರಚನೆಯಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ನಾಳೆ ಸಂಜೆಯೇ ಕೇಂದ್ರ ಸಚಿವ ಸಂಪುಟ ಪುನರ್ರಚನೆ.!
ಇದಕ್ಕೂ ಮೊದಲು ಜುಲೈ 8ರಂದು ಸಂಪುಟ ಪುನರ್ ರಚನೆ ನಡೆಯುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ದಿನಾಂಕ ದಿಢೀರ್ ಬದಲಾವಣೆಯಾಗಿದ್ದು, ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿದೆ.
ಸಂಜೆ ಆರು ಗಂಟೆಗೆ ಪಟ್ಟಿ ಪ್ರಕಟವಾಗಲಿದೆ ಎಂದು ಹೇಳಲಾಗುತ್ತಿದ್ದು, ಕರ್ನಾಟಕದ ಇಬ್ಬರು ಸಂಸದರೂ, ಸಚಿವ ಸ್ಥಾನ ಅಲಂಕರಿಸುವ ಸಾಧ್ಯತೆಯ ಬಗ್ಗೆ ಉನ್ನತ ಮೂಲಗಳು ತಿಳಿಸಿವೆ.
Last Updated : Jul 6, 2021, 8:08 PM IST