ನವದೆಹಲಿ:ದೇಶದ ಸುಮಾರು 11.2 ಲಕ್ಷಕ್ಕೂ ಹೆಚ್ಚು ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇಂದು ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
'ಪಿಎಂ ಪೋಷಣ್' ಯೋಜನೆ ಮುಂದಿನ 5 ವರ್ಷಗಳವರೆಗೆ ಚಾಲನೆಯಲ್ಲಿ ಇರಲಿದೆ. ಇದಕ್ಕಾಗಿ 1.31 ಕೋಟಿ ಲಕ್ಷ ಕೋಟಿ ರೂ. ವ್ಯಯಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ಇದನ್ನೂ ಓದಿ:ಪಂಜಾಬ್‌ನಲ್ಲಿ 1,200 ಕೋಟಿ ರೂ ಬಾಕಿ ವಿದ್ಯುತ್ ಬಿಲ್ ಮನ್ನಾ ಮಾಡಿದ ಹೊಸ ಸರ್ಕಾರ
ಪಿಎಂ ಪೋಷಣ್ ಈಗಾಗಲೇ ಚಾಲನೆಯಲ್ಲಿರುವ ಮಧ್ಯಾಹ್ನದ ಊಟದ ಯೋಜನೆಯ ಭಾಗವಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರಗಳ ಸಹಭಾಗಿತ್ವ ಇರಲಿದೆ. ಹೆಚ್ಚಿನ ಅನುದಾನವನ್ನು ಕೇಂದ್ರ ಸರ್ಕಾರ ಒದಗಿಸಲಿದೆ. ಉಳಿದಂತೆ ರಫ್ತುದಾರರು ಹಾಗೂ ಬ್ಯಾಂಕ್ಗಳಿಗೆ ಬೆಂಬಲ ನೀಡಲು ಮುಂದಿನ 5 ವರ್ಷಗಳಲ್ಲಿ ಇಸಿಜಿಸಿ ಲಿಮಿಟೆಡ್ನಲ್ಲಿ 4,400 ಕೋಟಿ ರೂ. ಹೂಡಿಕೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಇದರಿಂದ 59 ಲಕ್ಷ ಹೊಸ ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ವಿವರಿಸಿದರು.
ಇದೇ ವೇಳೆ, ಮಧ್ಯಪ್ರದೇಶದ ನಿಮಾಚ್-ರತ್ಲಂ ರೈಲ್ವೆ ಮಾರ್ಗಕ್ಕಾಗಿ ಒಟ್ಟು ಅಂದಾಜು 1,095.88 ಕೋಟಿ ರೂ. ಮತ್ತು ರಾಜಸ್ಥಾನದ ರಾಜ್‌ಕೋಟ್-ಕನಲಸ್ ರೈಲ್ವೇ ಮಾರ್ಗಕ್ಕಾಗಿ ಅಂದಾಜು 1,080.58 ಕೋಟಿ ರೂ. ವೆಚ್ಚ ಮಾಡಲು ಕ್ಯಾಬಿನೆಟ್ ಅನುಮೋದನೆ ನೀಡಿದೆ.