ಕರ್ನಾಟಕ

karnataka

ETV Bharat / bharat

ತರಂಗಾಂತರ ಹರಾಜಿಗೆ ನಾಲ್ಕು ವರ್ಷಗಳ ನಂತರ ಕೇಂದ್ರ ಕ್ಯಾಬಿನೆಟ್ ಅಸ್ತು.. - ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿಕೆ

ಕೇಂದ್ರ ಸರ್ಕಾರದ ಹೇಳಿಕೆಯಂತೆ 2,251.25 ಮೆಗಾಹರ್ಟ್ಜ್​​​ನ ತರಂಗಾತರವನ್ನು 3,92,332.70 ಕೋಟಿ ರೂಪಾಯಿಗೆ ಹರಾಜು ಹಾಕಲಾಗುತ್ತದೆ..

central cabinet
ಕೇಂದ್ರ ಕ್ಯಾಬಿನೆಟ್​

By

Published : Dec 16, 2020, 7:42 PM IST

ನವದೆಹಲಿ :ಟೆಲಿಕಾಂ ಸೇವೆಯಲ್ಲಿ ನೆಟ್​ವರ್ಕ್ ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ ಉದ್ಯಮಗಳಿಗೆ ತರಂಗಾಂತರಗಳನ್ನು ಹರಾಜು ಮಾಡುವ ಬಗ್ಗೆ ಟೆಲಿಕಮ್ಯುನಿಕೇಷನ್ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ಕೇಂದ್ರ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ.

ಈ ಬಗ್ಗೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಮಾಹಿತಿ ನೀಡಿದ್ದು, ಮುಂದಿನ ಸುತ್ತಿನ ಹರಾಜು ನಡೆಸಲು ಕೇಂದ್ರ ಒಪ್ಪಿಗೆ ನೀಡಿದೆ. ಕೊನೆಯ ಹರಾಜ 2016ರಲ್ಲಿ ನಡೆದಿದ್ದು, ಈವರೆಗೂ ಯಾವುದೇ ಹರಾಜು ನಡೆದಿರಲಿಲ್ಲ.

ಇದನ್ನೂ ಓದಿ:ವರ್ಷಾಂತ್ಯಕ್ಕೆ ಕಬ್ಬು ಕೃಷಿಕರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ: 3,500 ಕೋಟಿ ರೂ. ಸಬ್ಸಿಡಿ

700, 800, 900, 1800, 2100, 2300 ಮತ್ತು 2500 ಮೆಗಾಹರ್ಟ್ಜ್ ಬ್ಯಾಂಡ್​ಗಳನ್ನು ಸುಮಾರು 20 ವರ್ಷಗಳ ಅವಧಿಗೆ ಹರಾಜು ಮಾಡಲಾಗುತ್ತದೆ. ಕೇಂದ್ರ ಸರ್ಕಾರದ ಹೇಳಿಕೆಯಂತೆ 2,251.25 ಮೆಗಾಹರ್ಟ್ಜ್​​​ನ ತರಂಗಾತರವನ್ನು 3,92,332.70 ಕೋಟಿ ರೂಪಾಯಿಗೆ ಹರಾಜು ಹಾಕಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಹರಾಜಿನಲ್ಲಿ ಪಾಲ್ಗೊಳ್ಳುವವರು ಕೆಲ ನಿಯಮಗಳಿಗೆ ಬದ್ಧರಾಗಿರಬೇಕಾಗುತ್ತದೆ. ಅವಶ್ಯಕತೆಯಿದ್ದರೆ ಗರಿಷ್ಠ 16 ಇಎಂಐಗಳಲ್ಲಿ ಹರಾಜು ಪಡೆದುಕೊಂಡವರು ಹಣ ಪಾವತಿಸಬಹುದಾಗಿದೆ.

ABOUT THE AUTHOR

...view details