ನವದೆಹಲಿ: ಸ್ಥಳೀಯವಾಗಿ ನಿರ್ಮಿಸಲಾದ ಅತ್ಯಂತ ಯಶಸ್ವಿ ಶಸ್ತ್ರಾಸ್ತ್ರ ಕ್ಷಿಪಣಿಯಲ್ಲಿ ಒಂದಾಗಿದ್ದ ‘ಆಕಾಶ್ ಮಿಸೈಲ್’ ರಫ್ತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಈ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿರುವ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್, ಭಾರತೀಯ ಸೇನೆಯಲ್ಲಿ ನಿಯೋಜನೆಗೊಂಡಿರುವ ಆಕಾಶ್ ಕ್ಷಿಪಣಿಗಳಿಗಿಂತ ರಫ್ತಾಗಲಿರುವ ಆವೃತ್ತಿ ಭಿನ್ನವಾಗಿರಲಿದೆ ಎಂದಿದ್ದಾರೆ.
ಆತ್ಮನಿರ್ಭರ ಭಾರತ ಎಂಬ ಘೋಷಣೆಯಲ್ಲಿ ಭಾರತದಲ್ಲಿ ವಿವಿಧ ರೀತಿಯ ರಕ್ಷಣಾ ಉಪಕರಣಗಳು ಮತ್ತು ಕ್ಷಿಪಣಿಗಳನ್ನು ತಯಾರಿಸುವ ಸಾಮರ್ಥ್ಯ ವೃದ್ಧಿಯಾಗಿದೆ ಎಂದಿದ್ದಾರೆ. ಅಲ್ಲದೆ ನರೇಂದ್ರ ಮೋದಿಜಿ ಅವರು ಇಂದು ಆಕಾಶ್ ಕ್ಷಿಪಣಿ ರಫ್ತಿಗೆ ಅನುಮೋದನೆ ನೀಡಿದ್ದು ಮತ್ತು ಶೀಘ್ರ ಅನುಮೋದನೆಗಾಗಿ ಸಮಿತಿಯನ್ನು ರಚಿಸಲಾಗಿದೆ. ಆಕಾಶ್ ದೇಶಿ ನಿರ್ಮಿತ ಕ್ಷಿಪಣಿಯಾಗಿದ್ದು, ಶೇ 96ರಷ್ಟು ದೇಶೀಯವಾಗಿ ಅಭಿವೃದ್ಧಿ ಪಡಿಸಲಾಗಿದೆ. ಆಕಾಶ್ 25 ಕಿಲೊ ಮೀಟರ್ ವ್ಯಾಪ್ತಿಯ ವಾಯು ಕ್ಷಿಪಣಿಯಾಗಿದೆ ಎಂದಿದ್ದಾರೆ.