ಕರ್ನಾಟಕ

karnataka

ETV Bharat / bharat

'ಇದೊಂದು ಶೂನ್ಯ ಬಜೆಟ್' ಎಂದ ರಾಹುಲ್​ ಗಾಂಧಿಗೆ ಸೀತಾರಾಮನ್ ತಿರುಗೇಟು..

Union Budget 2022 : ಬಜೆಟ್ ಮಂಡನೆಯಾಗುತ್ತಿದ್ದಂತೆ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದ ಬಜೆಟ್​ನಲ್ಲಿ ದುಡಿಯುವ, ಮಧ್ಯಮ, ಬಡ, ಯುವ ಜನಾಂಗ, ರೈತರು ಹಾಗೂ ಅತಿಸಣ್ಣ ಸಮುದಾಯಕ್ಕೆ ಯಾವುದೇ ರೀತಿಯ ಯೋಜನೆ ಘೋಷಣೆ ಮಾಡಿಲ್ಲ..

FM Nirmala Sitharaman Speech
FM Nirmala Sitharaman Speech

By

Published : Feb 1, 2022, 7:02 PM IST

ನವದೆಹಲಿ :ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಿರುವ 2022-23ನೇ ಸಾಲಿನ ಕೇಂದ್ರ ಬಜೆಟ್​ಗೆ ತರಹೇವಾರಿ ಪ್ರತಿಕ್ರಿಯೆ​ ವ್ಯಕ್ತವಾಗ್ತಿವೆ.

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಇದೊಂದು 'ಶೂನ್ಯ ಬಜೆಟ್' ಎಂದು ಆರೋಪಿಸಿದ್ದಾರೆ. ರಾಹುಲ್‌ ಗಾಂಧಿ ಹೇಳಿಕೆಗೆ ನಿರ್ಮಲಾ ಸೀತಾರಾಮನ್​ ತಿಕ್ಷ್ಣವಾದ ತಿರುಗೇಟು ನೀಡಿದ್ದಾರೆ.

ಬಜೆಟ್ ಮಂಡನೆ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ನಿರ್ಮಲಾ ಸೀತಾರಾಮನ್​​, ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.

'ಇದೊಂದು ಶೂನ್ಯ ಬಜೆಟ್' ಎಂದ ರಾಹುಲ್​ ಗಾಂಧಿಗೆ ಸೀತಾರಾಮನ್ ತಿರುಗೇಟು ನೀಡಿರುವುದು..

ಬಜೆಟ್​​ನಲ್ಲಿನ ತರ್ಕಬದ್ಧ ವಿಷಯಗಳ ಬಗ್ಗೆ ಕೇಳಲು ನಾನು ಸದಾ ಸಿದ್ಧನಿದ್ದೇನೆ. ಆದರೆ, ಮಂಡನೆಯಾಗಿರುವ ಬಜೆಟ್​ ಬಗ್ಗೆ ಓದದೇ ಟ್ವೀಟ್ ಮಾಡುವ ಪ್ರವೃತ್ತಿ ಒಳ್ಳೆಯದಲ್ಲ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್​ ಪಕ್ಷ ಬಿಜೆಟ್ ಬಗ್ಗೆ ಸರಿಯಾಗಿ ಹೋಮ್ ವರ್ಕ್​ ಮಾಡಿಲ್ಲ. ಹೀಗಾಗಿ, ಅವರಿಗೆ ಯಾವುದೇ ರೀತಿಯ ಮಾಹಿತಿ ಅರ್ಥವಾಗಿಲ್ಲ ಎಂದರು.

ಇದನ್ನೂ ಓದಿರಿ:ಕೇಂದ್ರ ಬಜೆಟ್ 2022: 400 ಹೊಸ ತಲೆಮಾರಿನ 'ವಂದೇ ಭಾರತ್​ ರೈಲು' ಸೇರಿ ರೈಲ್ವೆ ಇಲಾಖೆಗೆ ಸಿಕ್ಕಿದ್ದೇನು?

ಬಜೆಟ್ ಮಂಡನೆಯಾಗುತ್ತಿದ್ದಂತೆ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದ ಬಜೆಟ್​ನಲ್ಲಿ ದುಡಿಯುವ, ಮಧ್ಯಮ, ಬಡ, ಯುವ ಜನಾಂಗ, ರೈತರು ಹಾಗೂ ಅತಿಸಣ್ಣ ಸಮುದಾಯಕ್ಕೆ ಯಾವುದೇ ರೀತಿಯ ಯೋಜನೆ ಘೋಷಣೆ ಮಾಡಿಲ್ಲ.

ಇದೊಂದು ಶೂನ್ಯ ಬಜೆಟ್ ಎಂದಿದ್ದರು. ಇದರ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಕಾಂಗ್ರೆಸ್ ಕೂಡ ಇದೊಂದು ಶೂನ್ಯ ಬಜೆಟ್​​ ಆಗಿದ್ದು, ದುಡಿಯುವ ಹಾಗೂ ಮಧ್ಯಮ ವರ್ಗದವರಿಗೆ ಯಾವುದೇ ಪರಿಹಾರ ಘೋಷಣೆ ಮಾಡದೇ ದ್ರೋಹ ಮಾಡಲಾಗಿದೆ ಎಂದು ತಿಳಿಸಿತ್ತು.

ಈ ವಿಚಾರವಾಗಿ ಮಾತನಾಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​,​ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details