ನವದೆಹಲಿ :ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು 2022-23ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲವು ವರ್ಷಗಳಿಂದ ಚರ್ಚೆಯಲ್ಲಿರುವ 5ಜಿ ಸೇವೆಯನ್ನು ಎರಡು ವರ್ಷದೊಳಗಾಗಿ ಆರಂಭಿಸುವುದಾಗಿ ಸಚಿವರು ತಿಳಿಸಿದ್ದಾರೆ.
ತಂತ್ರಜ್ಞಾನ ಕ್ಷೇತ್ರಕ್ಕೆ ಬಜೆಟ್ ಕೊಡುಗೆ ಈ ಕೆಳಕಂಡಂತಿದೆ..
- 5G ಮೊಬೈಲ್ ಸೇವೆಗಳನ್ನು ಸಕ್ರಿಯಗೊಳಿಸಲು ಸ್ಪೆಕ್ಟ್ರಮ್ ಹಂಚಿಕೆ ಹರಾಜು ಪ್ರಕ್ರಿಯೆಯನ್ನು 2022-23ರೊಳಗೆ ಕೈಗೊಳ್ಳಲಾಗುವುದು
- ಹೊಸ ತಂತ್ರಜ್ಞಾನಗಳೊಂದಿಗೆ ಚಿಪ್ ಒಳಗೊಂಡ ಇ-ಪಾಸ್‌ಪೋರ್ಟ್ ಮುಂದಿನ ವರ್ಷದಿಂದ ಜಾರಿ
- ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳಿಗೆ ಒತ್ತು. ನಗರ ಪ್ರದೇಶಗಳಲ್ಲಿ ಬ್ಯಾಟರಿ ಬದಲಾವಣೆ ಕೇಂದ್ರ ಸ್ಥಾಪನೆ
- ಎಲೆಕ್ಟ್ರಿಕ್ ವಾಹನ ಬ್ಯಾಟರಿ ಬದಲಾವಣೆ ಯೋಜನೆ ಜಾರಿ- ಚಾರ್ಜ್ ಆಗಿರುವ ಬ್ಯಾಟರಿ ಬದಲಾವಣೆಗೆ ಸ್ಟೇಷನ್ ಓಪನ್ ಮಾಡಲಾಗುವುದು. ಬ್ಯಾಟರಿ ಸ್ವ್ಯಾಪಿಂಗ್‌ಗೆ ನೀತಿ ಜಾರಿ ಮಾಡಾಗುತ್ತದೆ ಎಂದು ತಿಳಿಸಿದ ಸಚಿವೆ, ನಗರಾಭಿವೃದ್ಧಿಗೆ ಉನ್ನತ ಮಟ್ಟದ ಸಮಿತಿ ರಚನೆ ಮಾಡಲಾಗುವುದು ಎಂದು ತಿಳಿಸಿದರು.
- ಜಮೀನು ನೋಂದಣಿಗೆ ಡಿಜಿಟಲೀಕರಣ ವ್ಯವಸ್ಥೆ. ಇದಕ್ಕಾಗಿ ‘ವನ್ ನೇಷನ್ ವನ್ ರಿಜಿಸ್ಟ್ರೇಷನ್’ ವ್ಯವಸ್ಥೆ ಸ್ಥಾಪನೆ