ಕರ್ನಾಟಕ

karnataka

ETV Bharat / bharat

ಕೇಂದ್ರ ಬಜೆಟ್​ 2022 : ಯಾವುದು ಅಗ್ಗ, ಯಾವುದು ದುಬಾರಿ?

ಇಂದಿನ ಬಜೆಟ್​ ನೋಡಿದರೆ ಚಿನ್ನ - ವಜ್ರಾಭರಣ, ಎಲೆಕ್ಟ್ರಾನಿಕ್ ವಸ್ತುಗಳ ಮೇಲಿನ ದರ ಇಳಿಕೆಯಾಗುವ ಸಾಧ್ಯತೆಯಿದೆ. ಇತ್ತ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮೇಲಿನ ಸುಂಕವನ್ನು ಶೇಕಡಾ 20 ರಷ್ಟು ಹೆಚ್ಚಿಸಲಾಗಿದೆ..

ಕೇಂದ್ರ ಬಜೆಟ್​ 2022
ಕೇಂದ್ರ ಬಜೆಟ್​ 2022

By

Published : Feb 1, 2022, 2:07 PM IST

ನವದೆಹಲಿ :ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ ಕೇಂದ್ರ ಬಜೆಟ್​​ನಲ್ಲಿ ಕಸ್ಟಮ್ಸ್ ಸುಂಕದಲ್ಲಿ ಹಲವಾರು ಬದಲಾವಣೆಗಳನ್ನು ಘೋಷಿಸಿದ್ದಾರೆ. ಇದು ಕೆಲವು ಅಗತ್ಯ ವಸ್ತುಗಳ ಬೆಲೆಗಳನ್ನು ಪರಿಣಾಮಕಾರಿಯಾಗಿ ಏರಿಸುತ್ತದೆ ಹಾಗೂ ಕೆಲವು ವಸ್ತುಗಳ ಬೆಲೆಯನ್ನು ಇಳಿಸುತ್ತದೆ.

ಯಾವುದು ಅಗ್ಗ?

  • ಚಿನ್ನ - ವಜ್ರಾಭರಣ : ಕತ್ತರಿಸಿದ ಮತ್ತು ಪಾಲಿಶ್ ಮಾಡಿದ ವಜ್ರಗಳು, ರತ್ನಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇಕಡಾ 5ಕ್ಕೆ ಕಡಿಮೆ ಮಾಡಲಾಗಿದೆ. ಹೀಗಾಗಿ, ಚಿನ್ನ ಮತ್ತು ವಜ್ರಾಭರಣದ ಬೆಲೆ ಕಡಿಮೆ ಆಗುವ ಸಾಧ್ಯತೆ ಹೆಚ್ಚಿದೆ.
  • ಎಲೆಕ್ಟ್ರಾನಿಕ್ ವಸ್ತುಗಳು : ಮೊಬೈಲ್​ ಬಿಡಿಭಾಗಗಳ ಮೇಲಿನ ಬೆಲೆ ಕಡಿಮೆ ಮಾಡಲಾಗಿದ್ದು, ಫೋನ್ ಚಾರ್ಚರ್, ಟ್ರಾನ್ಸ್​​ಫಾರ್ಮರ್​ಗಳ ಮೇಲೆ ಅಬಕಾರಿ ಸುಂಕ ರಿಯಾಯಿತಿ ನೀಡಲಾಗಿದೆ. ಹೀಗಾಗಿ, ಎಲೆಕ್ಟ್ರಾನಿಕ್ ವಸ್ತುಗಳ ಮೇಲಿನ ದರ ಇಳಿಕೆಯಾಗುವ ಸಾಧ್ಯತೆಯಿದೆ.
  • ರಾಸಾಯನಿಕಗಳು - ಮೆಥಾನಲ್ ಮೇಲಿನ ಅಬಕಾರಿ ಸುಂಕ ಇಳಿಕೆ
  • ಬಟ್ಟೆ, ಚಪ್ಪಲಿ, ಚರ್ಮದ ಉತ್ಪನ್ನಗಳು
  • ಕೃಷಿ ಉಪಕರಗಳು
  • ವಿದೇಶಿ ಉತ್ಪನ್ನಗಳು

ಇದನ್ನೂ ಓದಿ:ಡಿಜಿಟಲ್​ ವಸ್ತುಗಳ ಆಮದಿನ ಮೇಲೆ ಶೇ.30 ಕಸ್ಟಮ್ಸ್​ ಸುಂಕ.. ಹೆಚ್ಚಲಿದೆ ಮೊಬೈಲ್​, ಟಿವಿ ಬೆಲೆ

ಯಾವುದು ದುಬಾರಿ?

  • ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮೇಲಿನ ಸುಂಕವನ್ನು ಶೇಕಡಾ 20ರಷ್ಟು ಹೆಚ್ಚಿಸಲಾಗಿದೆ. ಹೀಗಾಗಿ, ಅದರಡಿ ಉತ್ಪಾದನೆಯಾಗುವ ವಸ್ತುಗಳ ಬೆಲೆ ಹೆಚ್ಚಾಗಲಿದೆ.
  • ವರ್ಚುವಲ್ ಡಿಜಿಟಲ್ ಸಂಪತ್ತಿನ ಮೇಲೆ ಶೇ.30 ಕಸ್ಟಮ್ಸ್​ ಸುಂಕ

ಇಲ್ಲೊಮ್ಮೆ ನೋಡಿ - ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details