ಕರ್ನಾಟಕ

karnataka

ETV Bharat / bharat

200 ಚಾನೆಲ್‌ಗಳಿಗೆ 'ಒಂದು ತರಗತಿ, ಒಂದು ಟಿವಿ ಚಾನೆಲ್' ಕಾರ್ಯಕ್ರಮ ವಿಸ್ತರಣೆ.. 'ಡಿಜಿಟಲ್ ವಿಶ್ವವಿದ್ಯಾಲಯ' ಸ್ಥಾಪನೆ

ಪಿಎಂ ಇ-ವಿದ್ಯಾ ಯೋಜನೆಯಡಿ 'ಒಂದು ತರಗತಿ, ಒಂದು ಟಿವಿ ಚಾನೆಲ್' ಕಾರ್ಯಕ್ರಮವನ್ನು 12 ರಿಂದ 200 ಟಿವಿ ಚಾನೆಲ್‌ಗಳಿಗೆ ವಿಸ್ತರಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ..

Major Announcements In Education Sector
ಬಜೆಟ್​ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ

By

Published : Feb 1, 2022, 11:47 AM IST

Updated : Feb 1, 2022, 12:30 PM IST

ನವದೆಹಲಿ :2022-23ನೇ ಸಾಲಿನ ಕೇಂದ್ರ ಬಜೆಟ್​ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ​ ಮಂಡಿಸುತ್ತಿದ್ದಾರೆ. ಕೋವಿಡ್‌ನಿಂದಾಗಿ ತೀವ್ರ ಹೊಡೆತಕ್ಕೊಳಗಾದ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಕೊಡುಗೆ ನೀಡಲೇಬೇಕಾದ ಅನಿವಾರ್ಯತೆ ಇದೆ.

ವನ್​ ಟಿವಿ ವನ್​ ಚಾನೆಲ್​: ಸೀತಾರಾಮನ್​ ಅವರು, ಪಿಎಂ ಇ-ವಿದ್ಯಾ ಯೋಜನೆಯಡಿ 'ಒಂದು ತರಗತಿ, ಒಂದು ಟಿವಿ ಚಾನೆಲ್' ಕಾರ್ಯಕ್ರಮವನ್ನು 12 ರಿಂದ 200 ಟಿವಿ ಚಾನೆಲ್‌ಗಳಿಗೆ ವಿಸ್ತರಿಸಲಾಗುವುದು ಎಂದು ಘೋಷಿಸಿದ್ದಾರೆ. ಇದು ಎಲ್ಲಾ ರಾಜ್ಯಗಳು 1 ರಿಂದ 12ನೇ ತರಗತಿಗಳಿಗೆ ಪ್ರಾದೇಶಿಕ ಭಾಷೆಗಳಲ್ಲಿ ಪೂರಕ ಶಿಕ್ಷಣವನ್ನು ಒದಗಿಸಲು ಅನುವು ಮಾಡಿಕೊಡುತ್ತದೆ. ಕೊರೊನಾದಿಂದಾಗಿ ಸೂಕ್ತ ಶಿಕ್ಷಣದಿಂದ ವಂಚಿತರಾಗದೆ ಇರಲು ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗುತ್ತಿದೆ.

ಇದನ್ನೂ ಓದಿ: 2022-23ರಲ್ಲಿ ದೇಶದ ಬೆಳವಣಿಗೆ ದರ ಶೇ.9.2ರಷ್ಟು ನಿರೀಕ್ಷೆ.. ಸಚಿವೆ ನಿರ್ಮಲಾ ಸೀತಾರಾಮನ್‌

ಇತರ ಘೋಷಣೆಗಳು :

  • ಐಟಿಐಗಳಲ್ಲಿ ಕೌಶಲ್ಯಪೂರಿತ ಕೋರ್ಸ್‌ಗಳು ಆರಂಭ
  • ಯುವಕರ ಕೌಶಲ್ಯ ಮತ್ತು ಪುನರ್ ಕೌಶಲ್ಯಕ್ಕಾಗಿ 'ಡಿಜಿಟಲ್ ದೇಶ್ ಇ-ಪೋರ್ಟಲ್' ಆರಂಭ
  • ಆಧುನಿಕ ಕೃಷಿಯ ಅಗತ್ಯತೆಗಳನ್ನು ಪೂರೈಸಲು ಕೃಷಿ ವಿಶ್ವವಿದ್ಯಾಲಯಗಳ ಪಠ್ಯಕ್ರಮ ಪರಿಷ್ಕರಣೆ
  • ನಗರ ಯೋಜನಾ ಕೋರ್ಸ್‌ ಸುಧಾರಣೆಗೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ಮುಂದಾಳತ್ವ
  • ಈ ಕೋರ್ಸ್​ ಸಂಬಂಧ 5 ಶೈಕ್ಷಣಿಕ ಸಂಸ್ಥೆಗಳನ್ನು ಸೆಂಟರ್​ ಆಫ್ ಎಕ್ಸಲೆನ್ಸ್​ ಎಂದು ಮಾಡಿ, ಪ್ರತಿ ಸಂಸ್ಥೆಗಳಿಗೆ ತಲಾ 250 ಕೋಟಿ ರೂ. ದತ್ತಿ
  • 2 ಲಕ್ಷ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಲಾಗುವುದು

ಡಿಜಿಟಲ್ ವಿಶ್ವವಿದ್ಯಾಲಯ - ವಿಶ್ವ ದರ್ಜೆಯ ಗುಣಮಟ್ಟದ ಸಾರ್ವತ್ರಿಕ ಶಿಕ್ಷಣಕ್ಕಾಗಿ ದೇಶದಾದ್ಯಂತ ವಿದ್ಯಾರ್ಥಿಗಳಿಗೆ ಪ್ರವೇಶವನ್ನು ಒದಗಿಸಲು 'ಡಿಜಿಟಲ್ ವಿಶ್ವವಿದ್ಯಾಲಯ'ವನ್ನು ಸ್ಥಾಪಿಸಲಾಗುವುದು ಮತ್ತು ವೈಯಕ್ತಿಕಗೊಳಿಸಿದ ಕಲಿಕೆಯ ಅನುಭವವನ್ನು ಅವರ ಮನೆ ಬಾಗಿಲಿಗೆ ತಲುಪಿಸಲಾಗುವುದು. ಇದು ವಿವಿಧ ಭಾರತೀಯ ಭಾಷೆಗಳಲ್ಲಿ ಮತ್ತು ಕಂಪ್ಯೂಟರ್ ಮತ್ತು ಮಾಹಿತಿ ತಂತ್ರಜ್ಞಾನ (ICT) ಸ್ವರೂಪಗಳಲ್ಲಿ ಲಭ್ಯವಾಗಲಿದೆ. ವಿಶ್ವವಿದ್ಯಾನಿಲಯವನ್ನು ನೆಟ್‌ವರ್ಕ್ ಹಬ್ ಮತ್ತು ಸ್ಪೋಕ್ ಮಾದರಿಯಲ್ಲಿ ನಿರ್ಮಿಸಲಾಗುವುದು.

ಇಲ್ಲೊಮ್ಮೆ ನೋಡಿ - ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Feb 1, 2022, 12:30 PM IST

ABOUT THE AUTHOR

...view details