ನವದೆಹಲಿ:ಪಂಚರಾಜ್ಯಗಳ ಚುನಾವಣೆ, ಕೋವಿಡ್ ಮೂರನೇ ಅಲೆ ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಇಂದು 2022-23ನೇ ಸಾಲಿನ ಬಜೆಟ್ ಮಂಡನೆಯಾಗಿದೆ. ಕೇಂದ್ರದಲ್ಲಿ ಮೋದಿ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಮಂಡನೆಯಾಗುತ್ತಿರುವ 10ನೇ ಬಜೆಟ್ ಇದಾಗಿದೆ. ಜನಸಾಮಾನ್ಯರಿಗೆ ಇದರಲ್ಲಿ ಏನೆಲ್ಲಾ ಸಿಕ್ಕಿದೆ ಎಂಬುದರ ಮಾಹಿತಿ ಇಲ್ಲಿದೆ.
ಬಜೆಟ್ನಲ್ಲಿ ಜನಸಾಮಾನ್ಯರಿಗೆ ದಕ್ಕಿದ್ದಿಷ್ಟು..
- ಆದಾಯ ತೆರಿಗೆ ದರ ಅಥವಾ ಸ್ಲ್ಯಾಬ್ಗಳಲ್ಲಿ ಆಗದ ಬದಲಾವಣೆ, ಆದಾಯ ತೆರಿಗೆ ರಿಟರ್ನ್ಸ್ ಸುಧಾರಿಸಿಕೊಳ್ಳಲು ಮತ್ತೊಂದು ಅವಕಾಶ ಜೊತೆಗೆ ಆದಾಯ ತೆರಿಗೆ ಪಾವತಿದಾರರು ತಮ್ಮ ನವೀಕರಿಸಿದ ITR ಮೌಲ್ಯಮಾಪನ ಮಾಡಲು ಎರಡು ವರ್ಷ ಕಾಲಾವಕಾಶ
- ಮೊಬೈಲ್ ಫೋನ್ ಚಾರ್ಜರ್, ವಿದೇಶದಿಂದ ಬರುವ ಯಂತ್ರಗಳು, ಛತ್ರಿ, ಬಟ್ಟೆಗಳು ಮತ್ತಷ್ಟು ಅಗ್ಗ, ಪಾಲಿಶ್ ಮಾಡಿದ ವಜ್ರದ ಬೆಲೆಯಲ್ಲಿ ಇಳಿಕೆ
- ಬಜೆಟ್ನಲ್ಲಿ ಡಿಜಿಟಲ್ ವಿಶ್ವವಿದ್ಯಾಲಯ ಸ್ಥಾಪನೆಗೆ ನಿರ್ಧಾರ. ಇದರಿಂದ ಆನ್ಲೈನ್ ಶಿಕ್ಷಣಕ್ಕೆ ಸಹಾಯ, ಅನೇಕ ಕಾರಣಗಳಿಂದ ಕಾಲೇಜ್ಗೆ ಹೋಗದ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಲು ಅವಕಾಶ
- ಕೇಂದ್ರ ಸರ್ಕಾರದ ಬಜೆಟ್ನಲ್ಲಿ ಘೋಷಣೆಯಾಗಿರುವ ಬಂಡವಾಳ ವೆಚ್ಚ, 400 ಹೊಸ ವಂದೇ ಭಾರತ ರೈಲುಗಳು, 2023ರಲ್ಲೇ 5G ಸೇವೆ ಜನಸಾಮಾನ್ಯರಿಗೆ ಹೆಚ್ಚಿನ ಅನುಕೂಲ ಮಾಡಲಿವೆ.