ಕರ್ನಾಟಕ

karnataka

ETV Bharat / bharat

ಕೇಂದ್ರ ಬಜೆಟ್​​ 2022: ಕೃಷಿ ಕ್ಷೇತ್ರದಿಂದ ರಕ್ಷಣಾ ವಲಯ.. ಯಾವ ವಲಯಕ್ಕೆ ಎಷ್ಟೊಂದು ಕೋಟಿ ಹಣ ಸಿಕ್ತು ನೋಡಿ - Budget Allocation For Ministries

Union Budget-2022: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ಇಂದು 10ನೇ ಬಜೆಟ್ ಮಂಡನೆಯಾಗಿದ್ದು, ಯಾವ ಇಲಾಖೆಗೆ ಎಷ್ಟೊಂದು ಹಣ ಸಿಕ್ಕಿದೆ ಎಂಬ ಮಾಹಿತಿ ಇಲ್ಲಿದೆ.

Union Budget 2022
Union Budget 2022

By

Published : Feb 1, 2022, 3:53 PM IST

Updated : Feb 1, 2022, 4:02 PM IST

ನವದೆಹಲಿ:ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು 2022-23ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದು, ಪ್ರಮುಖವಾಗಿ ರಕ್ಷಣಾ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಇದೇ ಕಾರಣಕ್ಕಾಗಿ ದಾಖಲೆಯ 5,25,166.15 ಕೋಟಿ ರೂ. ಈ ಕ್ಷೇತ್ರಕ್ಕೆ ಘೋಷಣೆಯಾಗಿದೆ.

ಹಣಕಾಸು ಸಚಿವೆಯಾದ ಬಳಿಕ ನಿರ್ಮಲಾ ಸೀತಾರಾಮನ್ ಮಂಡಿಸಿರುವ 4ನೇ ಬಜೆಟ್​ ಇದಾಗಿದ್ದು, ಕೋವಿಡ್​ ಕಾಲದಲ್ಲಿ ಬಜೆಟ್ ಮಂಡನೆಯಾಗಿರುವ ಕಾರಣ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ದೂರದ ಆಲೋಚನೆ ಗಮನದಲ್ಲಿಟ್ಟುಕೊಂಡು ಈ ಬಜೆಟ್ ಮಂಡನೆ ಮಾಡಲಾಗಿದ್ದು, ಆದಾಯ ತೆರಿಗೆ ಪದ್ಧತಿಯಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿಲ್ಲ. ಪ್ರಮುಖವಾಗಿ ಕೆಲವೊಂದು ವಲಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ನಿರ್ಮಲಾ ಬಜೆಟ್​ನಲ್ಲಿ ಯಾವ ವಲಯಕ್ಕೆ ಎಷ್ಟು ಕೋಟಿ ಘೋಷಣೆ?2022-23ರ ಬಜೆಟ್​ನಲ್ಲಿ ಸರ್ಕಾರದ ವಿವಿಧ ಸಚಿವಾಲಯಗಳಿಗೆ ದಾಖಲೆಯ ಮಟ್ಟದಲ್ಲಿ ಮೊತ್ತ ಹಂಚಿಕೆ ಮಾಡಲಾಗಿದ್ದು, ರಕ್ಷಣಾ ಸಚಿವಾಲಯಕ್ಕೆ 5,52,166.15 ಕೋಟಿ ನೀಡಲಾಗಿದೆ. ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯಕ್ಕೆ 1,05,406.82 ಕೋಟಿ ರೂ. ಘೋಷಣೆಯಾಗಿದೆ.

ಪ್ರಮುಖ ವಲಯಗಳಿಗೆ ಘೋಷಣೆಯಾದ ಮೊತ್ತ ಇಂತಿದೆ..

ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯಕ್ಕೆ 10,7715.38 ಕೋಟಿ ರೂ ಘೋಷಣೆಯಾಗಿದ್ದು, ಇದರಲ್ಲಿ ಪ್ರಮುಖವಾಗಿ ಗಂಗಾ ನದಿಯ ಉದ್ದಕ್ಕೂ ಐದು ಕಿಲೋ ಮೀಟರ್​​​ ಕಾರಿಡಾರ್​​, ರೈತರ ಜಮೀನುಗಳಿಗೆ ನೀರು ಸೇರಿದಂತೆ ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿಗೆ ಉತ್ತೇಜನ.

  • ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯಕ್ಕೆ 13,25,513.62 ಕೋಟಿ ರೂ. ನೀಡಲಾಗಿದೆ. ರೈತರಿಗೆ ಡಿಜಿಟಲ್ ಮತ್ತು ಹೈಟೆಕ್ ಸೇವೆ ತಲುಪಿಸಲು ಕಿಸಾನ್ ಡ್ರೋನ್​​ ಬಳಕೆ, ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿಗೆ ಒತ್ತು.
  • ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ 1,38,203,63 ಕೋಟಿ ರೂ. ಘೋಷಣೆ
    ಪ್ರಮುಖ ವಲಯಗಳಿಗೆ ಘೋಷಣೆಯಾದ ಮೊತ್ತ ಇಂತಿದೆ..
  • ರೈಲ್ವೆ ಸಚಿವಾಲಯಕ್ಕೆ 1,40,367.13 ಕೋಟಿ ರೂ. ನೀಡಲಾಗಿದ್ದು, ಮುಂದಿನ ಮೂರು ವರ್ಷಗಳಲ್ಲಿ ವಂದೇ ಭಾರತ್ ರೈಲು ಅಭಿಯಾನದಡಿ 400 ಹೊಸ ರೈಲು ಪ್ರಾರಂಭಕ್ಕೆ ನಿರ್ಧಾರ.

ಇದನ್ನೂ ಓದಿರಿ:ಬಜೆಟ್​​ನಲ್ಲಿ ಹುಸಿಯಾದ ಮಧ್ಯಮ ವರ್ಗದ ನಿರೀಕ್ಷೆ: ಹಳೆಯ ತೆರಿಗೆ ಪದ್ಧತಿ ಮುಂದುವರೆಸಿದ್ದಕ್ಕಾಗಿ ವೈರಲ್​​ ಆದ ಮೀಮ್ಸ್​​!

  • ಗೃಹ ವ್ಯವಹಾರಗಳ ಸಚಿವಾಲಯಕ್ಕೆ 1,85,776.55 ಕೋಟಿ ರೂ. ಘೋಷಣೆ
  • ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ 1,99,107,71 ಕೋಟಿ ರೂ.ನೀಡಲಾಗಿದ್ದು, 2022-23ರಲ್ಲಿ 25 ಸಾವಿರ ಕಿಲೋ ಮೀಟರ್​ ರಾಷ್ಟ್ರೀಯ ಹೆದ್ದಾರಿ ವಿಸ್ತಾರ, ಮುಂದಿನ ಮೂರು ವರ್ಷಗಳಲ್ಲಿ 100 ಕಾರ್ಗೋ ಟರ್ಮಿನಲ್​ ಅಭಿವೃದ್ಧಿ.
  • ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯಕ್ಕೆ 2,17,684.46 ಕೋಟಿ ರೂ. ಘೋಷಣೆ
  • ರಕ್ಷಣಾ ಸಚಿವಾಲಯಕ್ಕೆ 5,25,166.15 ಕೋಟಿ ರೂ. ಘೋಷಣೆ: ರಕ್ಷಣಾ ಸಾಮಗ್ರಿಗಳ ಖರೀದಿಯಲ್ಲಿ ಬಜೆಟ್​ನ ಶೇ.68ರಷ್ಟು ದೇಶಿಯ ಉಪಕರಣಗಳಿಗೆ ಮೀಸಲು. ಶೇ. 25ರಷ್ಟು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಗೆ ವಿನಿಯೋಗಕ್ಕೆ ನಿರ್ಧಾರ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Feb 1, 2022, 4:02 PM IST

ABOUT THE AUTHOR

...view details