ಶೋಪಿಯಾನ್(ಜಮ್ಮು ಮತ್ತು ಕಾಶ್ಮೀರ): ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಅಪರಿಚಿತ ಬಂದೂಕುಧಾರಿಗಳು ನಾಗರಿಕರೊಬ್ಬರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ವರದಿಯಂತೆ ಅಪರಿಚಿತ ಬಂದೂಕುಧಾರಿಗಳು ಚದ್ರನ್ ಕೆಗಾಮ್ ನಿವಾಸಿಯನ್ನು ಮನೆಯ ಹೊರಗೆ ಕರೆದುಕೊಂಡು ಹೋಗಿ ಕಾಲಿಗೆ ಗುಂಡು ಹಾರಿಸಿ ಗಾಯ ಮಾಡಿದ್ದಾರೆ.
ಗಾಯಾಳುವನ್ನು ಗುಲಾಂ ನಬಿ ಅವರ ಮಗ ಫಾರೂಕ್ ಅಹ್ಮದ್ ಶೇಖ್ ಎಂದು ಗುರುತಿಸಲಾಗಿದೆ. ಅವರು ಅಹ್ಗಾಮ್ ಶೋಪಿಯಾನ್ನ ನಿವಾಸಿಯಾಗಿದ್ದರು ಎಂದು ತಿಳಿದು ಬಂದಿದೆ. ಕುಟುಂಬಸ್ಥರು ಸ್ಥಳೀಯರ ಸಹಾಯದಿಂದ ಪುಲ್ವಾಮಾ ಜಿಲ್ಲಾಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಅಪರಿಚಿತ ಬಂದೂಕುಧಾರಿಗಳು ಫಾರೂಕ್ ಅವರ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ.