ಶ್ರೀನಗರ (ಜಮ್ಮು-ಕಾಶ್ಮೀರ):ಶ್ರೀನಗರದ ಕರಣ್ ನಗರ ಪ್ರದೇಶದಲ್ಲಿ ಅಪರಿಚಿತ ಬಂದೂಕುಧಾರಿಗಳು ನಾಗರಿಕನೋರ್ವನ ಮೇಲೆ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತನನ್ನು ಚೇತಾಬಾಲ್ ನಿವಾಸಿ ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದೆ. ಈ ಬಗ್ಗೆ ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಇಂದು ಸಂಜೆ 5.30ರ ಸುಮಾರಿಗೆ ಕರಣ್ ನಗರದ ಮದೀನಾ ಕಾಂಪ್ಲೆಕ್ಸ್ ಬಳಿ ಬಂದೂಕುಧಾರಿಗಳು ಅಬ್ದುಲ್ ರೆಹಮಾನ್ ಮೇಲೆ ಗುಂಡು ಹಾರಿಸಿದ್ದಾರೆ.