ಕರ್ನಾಟಕ

karnataka

ETV Bharat / bharat

ಡಿಸೆಂಬರ್​ 11 ಯುನಿಸೆಫ್ ದಿನ.. ಇದು ಈ ಉದ್ದೇಶಕ್ಕಾಗಿ ರೂಪ ತಾಳಿತು..

ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ಕಾರ್ಯನಿರ್ವಹಿಸುವ, ವಿಶೇಷವಾಗಿ ಯುದ್ದ ಪೀಡಿತ ಪ್ರದೇಶಗಳ ಮಕ್ಕಳಿಗೆ ಆರೋಗ್ಯ, ಶಿಕ್ಷಣ ಸೇರಿದಂತೆ ಇತರೆ ಸೌಲಭ್ಯಗಳನ್ನು ಒದಗಿಸುವ ವಿಶ್ವ ಸಂಸ್ಥೆಯ ಅಂಗ ಸಂಸ್ಥೆ 'ಯುನಿಸೆಫ್' ರಚನೆಯಾಗಿ 11 ಡಿಸೆಂಬರ್ 2020 ಕ್ಕೆ 74 ವರ್ಷಗಳಾಯಿತು. ಯುನಿಸೆಫ್​ನ ಕಾರ್ಯ ಚಟುವಟಿಕೆಯ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.​

ಇಂಟರ್​ನ್ಯಾಷನಲ್​ ಚಿಲ್ಡ್ರನ್ಸ್ ಎಮರ್ಜೆನ್ಸಿ ಫಂಡ್
ಡಿಸೆಂಬರ್​ 11 ಯುನಿಸೆಫ್ ದಿನ

By

Published : Dec 11, 2020, 7:03 AM IST

ನವದೆಹಲಿ : ವಿಶ್ವ ಸಂಸ್ಥೆಯ ಸಾಮಾನ್ಯ ಸಭೆ 11 ಡಿಸೆಂಬರ್ 1946 ರಂದು ಅಂತಾರಾಷ್ಟ್ರೀಯ ಮಕ್ಕಳ ತುರ್ತು ನಿಧಿಯಾಗಿ ಯುನಿಸೆಫ್​ನ್ನು ರಚಿಸಿತು. 11 ಡಿಸೆಂಬರ್​ 2020 ರಂದು ಯುನಿಸೆಫ್ ರಚನೆಯಾಗಿ 74 ವರ್ಷಗಳು ಪೂರ್ತಿಯಾಗಲಿದೆ.

ಎರಡನೇ ಮಹಾಯುದ್ದ ಪೀಡಿತ ಮಕ್ಕಳಿಗೆ ಸಹಾಯ ಮಾಡಲು ವಿಶ್ವ ಸಂಸ್ಥೆಯ ರಿಲೀಫ್ ಆ್ಯಂಡ್​ ರಿಹ್ಯಾಬಿಲಿಟೇಶನ್ ಅಡ್ಮಿಸ್ಟ್ರೇಶನ್ , ಮೊದಲು ಅಂತಾರಾಷ್ಟ್ರೀಯ ಮಕ್ಕಳ ತುರ್ತು ನಿಧಿ (ಐಸಿಇಎಫ್) ನ್ನು ರಚಿಸಿತು. ಬಳಿಕ ಅದನ್ನು, ಯುನಿಸೆಫ್ ಆಗಿ ಬದಲಾಯಿಸಲು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆ ನಿರ್ಣಯ ಅಂಗೀಕರಿಸಿತು.

ಎರಡನೆಯ ಮಹಾಯುದ್ಧ ಪೀಡಿತ ಮಕ್ಕಳ ಆರೋಗ್ಯ, ಪೋಷಣೆ, ಶಿಕ್ಷಣ ಮತ್ತು ಸಾಮಾನ್ಯ ಕಲ್ಯಾಣವನ್ನು ಸುಧಾರಿಸಲು ವಿಶ್ವ ಸಂಸ್ಥೆ ಈ ಕಾರ್ಯಕ್ರಮವನ್ನು ಪ್ರಾರಂಭಿಸಿತು. 1950 ರಲ್ಲಿ ಯುನಿಸೆಫ್‌ನ್ನು ವಿಸ್ತರಿಸಲು ತೀರ್ಮಾನಿಸಲಾಯಿತು ಮತ್ತು 1953 ರಲ್ಲಿ ಅದು ತನ್ನ ಧ್ಯೇಯವನ್ನು ವಿಸ್ತರಿಸಿತು ಮತ್ತು ವಿಶ್ವ ಸಂಸ್ಥೆಯ ಶಾಶ್ವತ ಭಾಗವಾಯಿತು.

ಯುನಿಸೆಫ್ ದಿನ : ಸಾರ್ವತ್ರಿಕ ಮಕ್ಕಳ ದಿನ

ಯುನೈಟೆಡ್ ನೇಷನ್ಸ್ ಇಂಟರ್​ನ್ಯಾಷನಲ್​ ಚಿಲ್ಡ್ರನ್ಸ್ ಎಮರ್ಜೆನ್ಸಿ ಫಂಡ್ ಯುನಿಸೆಫ್​ನ ಸಂಕ್ಷಿಪ್ತ ರೂಪವಾಗಿದೆ. ಇದನ್ನು 1946 ರಲ್ಲಿ ಸ್ಥಾಪಿಸಲಾಯಿತು, 1953 ರಲ್ಲಿ ಸಂಸ್ಥೆ ತನ್ನ ಹೆಸರನ್ನು ಯುನೈಟೆಡ್ ನೇಷನ್ಸ್ ಚಿಲ್ಡ್ರನ್ಸ್ ಫಂಡ್ ಎಂದು ಬದಲಾಯಿಸಿತು.

20 ನವೆಂಬರ್ 1959 ರಂದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆ ಮಕ್ಕಳ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು ಅಂಗೀಕರಿಸಿತು. 20 ನವೆಂಬರ್ 1989 ರಂದು ಮಕ್ಕಳ ಹಕ್ಕುಗಳ ಸಮಾವೇಶವನ್ನು ಅಂಗೀಕರಿಸಿತು. ಅಂದಿನಿಂದ ಸಾರ್ವತ್ರಿಕ ಮಕ್ಕಳ ದಿನವನ್ನು ನವೆಂಬರ್ 20 ರಂದು ಆಚರಿಸಲಾಗುತ್ತದೆ.

ಮಕ್ಕಳ ಹಕ್ಕುಗಳ ಸಾರ್ವತ್ರಿಕ ಘೋಷಣೆ, ವಿಶ್ವಸಂಸ್ಥೆಯ ಮಕ್ಕಳ ನಿಧಿ ವಿಶ್ವದಾದ್ಯಂತ ಮಕ್ಕಳಲ್ಲಿ ಅಂತಾರಾಷ್ಟ್ರೀಯ ಒಗ್ಗಟ್ಟು ಮತ್ತು ಜಾಗೃತಿಯನ್ನು ಉತ್ತೇಜಿಸುವ ಕಾರ್ಯದ ಒಂದು ಭಾಗವಾಗಿದೆ.

ಮೊದಲ ಯುನಿಸೆಫ್ ರಾಷ್ಟ್ರೀಯ ಸಮಿತಿಯನ್ನು ಯುಎಸ್​ನಲ್ಲಿ ಸ್ವತಂತ್ರ ದತ್ತಿ ಸಂಸ್ಥೆಗಳ ಬೆಂಬಲದಿಂದ ಸ್ಥಾಪಿಸಲಾಯಿತು. 1953 ರಲ್ಲಿ, ಇದು ವಿಶ್ವ ಸಂಸ್ಥೆಯ ಶಾಶ್ವತ ಏಜೆನ್ಸಿಯಾಯಿತು. ಬಳಿಕ 'ಇಂಟರ್​ನ್ಯಾಷನಲ್' ಮತ್ತು ‘ಎಮರ್ಜೆನ್ಸಿ’ ಪದಗಳನ್ನು ಅಧಿಕೃತ ಹೆಸರಿನಿಂದ ಕೈಬಿಡಲಾಯಿತು. ಆದರೂ ಕೂಡ ಯುನಿಸೆಫ್ ಎಂಬ ಸಂಕ್ಷಿಪ್ತ ರೂಪವನ್ನು ಉಳಿಸಿಕೊಳ್ಳಲಾಗಿದೆ.

ಯುನಿಸೆಫ್ ದಿನ : ಇತಿಹಾಸ ಮತ್ತು ಮಹತ್ವ

ಮಕ್ಕಳ ಜೀವನವನ್ನು ರಕ್ಷಿಸಲು, ಅವರ ಹಕ್ಕುಗಳನ್ನು ರಕ್ಷಿಸಲು ಮತ್ತು ಬಾಲ್ಯದಿಂದಲೂ ಅವರ ಬೇಕು ಬೇಡಗಳನ್ನು ಪೂರೈಸಲು ಸಹಾಯ ಮಾಡುವ ಉದ್ದೇಶದಿಂದ ಯುನಿಸೆಫ್ 190 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ಮಕ್ಕಳ ಹಕ್ಕುಗಳ ಕುರಿತ ವಿಶ್ವಸಂಸ್ಥೆಯ ಸಮಾವೇಶವು ಯುನಿಸೆಫ್​ನ ಕೆಲಸಗಳಿಗೆ ಮೊದಲ ಆಧಾರವಾಗಿದೆ. ಸಮಾವೇಶವು 54 ಅರ್ಟಿಕಲ್​ಗಳನ್ನು ಹೊಂದಿದ್ದು ಅದು ಮಗುವಿನ ಜೀವನದ ಎಲ್ಲಾ ಅಂಶಗಳನ್ನು ಒಳಗೊಂಡಿದೆ ಮತ್ತು ಎಲ್ಲಾ ಮಕ್ಕಳಿಗೆ ಅರ್ಹವಾದ ನಾಗರಿಕ, ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳನ್ನು ನೀಡುತ್ತದೆ. ಎಲ್ಲಾ ಮಕ್ಕಳಿಗೆ ಅವರ ಹಕ್ಕುಗಳನ್ನು ನೀಡಲು ಸರ್ಕಾರಗಳು ಹೇಗೆ ಒಟ್ಟಾಗಿ ಕೆಲಸ ಮಾಡಬೇಕು ಎಂಬುವುದನ್ನು ಇದು ವಿವರಿಸುತ್ತದೆ.

ಹದಿ ಹರೆಯದವರ ಅಭಿವೃದ್ಧಿ, ಸಂವಹನ, ಲಿಂಗ ಸಮಾನತೆ, ಮಕ್ಕಳ ರಕ್ಷಣೆ, ಅಂಗವೈಕಲ್ಯ ಹೊಂದಿರುವ ಮಕ್ಕಳು, ಪರಿಸರ ಮತ್ತು ಹವಾಮಾನ ಬದಲಾವಣೆ ಮತ್ತು ದೀನದಲಿತ ಮಕ್ಕಳ ಅಭಿವೃದ್ದಿ ಕ್ಷೇತ್ರದಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತದೆ.

ಎರಡನೆಯ ಮಹಾಯುದ್ಧದ ನಂತರ ಮಕ್ಕಳನ್ನು ರಕ್ಷಿಸಲು 1946 ರಲ್ಲಿ ಸ್ಥಾಪನೆಯಾದ ಈ ಸಂಸ್ಥೆ, ಯುರೋಪ್, ಚೀನಾ ಮತ್ತು ಮಧ್ಯ ಪ್ರಾಚ್ಯದ ಯುದ್ಧ ಪೀಡಿತ ಪ್ರದೇಶಗಳಲ್ಲಿ ಹಸಿವಿನಿಂದ ಬಳಲುತ್ತಿರುವ ಮತ್ತು ಅನಾರೋಗ್ಯದಿಂದ ಕೂಡಿದ ಮಕ್ಕಳಿಗೆ ಸಹಾಯ ಮಾಡುತ್ತಿದೆ.

ಯುನಿಸೆಫ್‌ನ ಧ್ವಜವು ನೀಲಿ ಬಣ್ಣದಲ್ಲಿದೆ, ಇದರಲ್ಲಿ ವಿಶ್ವ ಸಂಸ್ಥೆಯ ಧ್ವಜದಲ್ಲಿರುವ ಗ್ಲೋಬ್ ಮತ್ತು ಆಲಿವ್ ಎಲೆಗಳು ಒಳಗೊಂಡಿದೆ. ಯುನಿಸೆಫ್​ ಧ್ವಜದ ಗ್ಲೋಬ್​ನಲ್ಲಿ ತಾಯಿ ಮತ್ತು ಮಗುವಿನ ಚಿತ್ರವಿದೆ.

ಯುನಿಸೆಫ್‌ನ ಮುಖ್ಯ ಗುರಿ ‘ಪ್ರತಿ ಮಗುವಿಗೆ ಆರೋಗ್ಯಕರ, ಸಂತೋಷ ಮತ್ತು ಸುರಕ್ಷಿತವಾಗಿ ಬೆಳೆಯಲು ಅವಕಾಶ ನೀಡುವುದು’.

ಈ ಸಂಸ್ಥೆ 1949 ರಲ್ಲಿ ಮೂರು ಸಿಬ್ಬಂದಿಯೊಂದಿಗೆ ಭಾರತದಲ್ಲಿ ತನ್ನ ಕೆಲಸವನ್ನು ಪ್ರಾರಂಭಿಸಿತು ಮತ್ತು ಮೂರು ವರ್ಷಗಳ ನಂತರ ದೆಹಲಿಯಲ್ಲಿ ಒಂದು ಕಚೇರಿಯನ್ನು ಸ್ಥಾಪಿಸಿತು. ಪ್ರಸ್ತುತ, ಇದು 16 ರಾಜ್ಯಗಳಲ್ಲಿ ಭಾರತದ ಮಕ್ಕಳ ಹಕ್ಕುಗಳಿಗಾಗಿ ಕೆಲಸ ಮಾಡುತ್ತಿದೆ.

2018 ರ ವರದಿಯ ಪ್ರಕಾರ, ಯುನಿಸೆಫ್ 27 ಮಿಲಿಯನ್ ಶಿಶುಗಳ ಜನನಕ್ಕೆ ಆರೋಗ್ಯ ಸೌಲಭ್ಯ ಒದಗಿಸಿದೆ. ಅಂದಾಜು 65.5 ಮಿಲಿಯನ್ ಮಕ್ಕಳಿಗೆ ಮೂರು ಡೋಸ್ ಪೆಂಟಾವಲೆಂಟ್ ಲಸಿಕೆ, 12 ಮಿಲಿಯನ್ ಮಕ್ಕಳಿಗೆ ಶಿಕ್ಷಣ ಮತ್ತು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ 4 ಮಿಲಿಯನ್ ಮಕ್ಕಳಿಗೆ ಚಿಕಿತ್ಸೆ ನೀಡಿದೆ.

ಯುನಿಸೆಫ್‌ನ ಸರಬರಾಜು ವಿಭಾಗವು ಡೆನ್ಮಾರ್ಕ್‌ನ ಕೋಪನ್ ಹ್ಯಾಗನ್​ನಲ್ಲಿದೆ. ಲಸಿಕೆಗಳು, ಎಚ್‌ಐವಿ ಪೀಡಿತ ಮಕ್ಕಳು ಮತ್ತು ತಾಯಂದಿರಿಗೆ ಆ್ಯಂಟಿರೆಟ್ರೋವೈರಲ್ ಔಷಧಿಗಳು, ಪೌಷ್ಠಿಕಾಂಶ ಆಹಾರ ಪೂರೈಕೆ, ತುರ್ತು ಆಶ್ರಯಗಳು, ಕುಟುಂಬದಿಂದ ಪ್ರತ್ಯೇಕವಾದ ಮಕ್ಕಳನ್ನು ಒಗ್ಗೂಡಿಸುವುದು ಮತ್ತು ಶೈಕ್ಷಣಿಕ ಸಾಮಗ್ರಿಗಳಂತಹ ಅಗತ್ಯ ವಸ್ತುಗಳ ವಿತರಣೆಯ ಪ್ರಾಥಮಿಕ ಹಂತವಾಗಿ ಇದು ಕಾರ್ಯನಿರ್ವಹಿಸುತ್ತದೆ.

ಯುನಿಸೆಫ್‌ನ ಸಾಧನೆಗಳು :

2019 ರಲ್ಲಿ ಮಕ್ಕಳ ಹಕ್ಕುಗಳ ಸಮಾವೇಶದ 30 ನೇ ವಾರ್ಷಿಕೋತ್ಸವ ಮಾಡಿದ ಯುನಿಸೆಫ್ ಮತ್ತು ಪಾಲುದಾರರು, ಹಲವಾರು ಮಕ್ಕಳನ್ನು ಪೂರ್ಣ ಸಾಮರ್ಥ್ಯವನ್ನು ತಲುಪದಂತೆ ತಡೆಯುವ ಅಡೆತಡೆಗಳನ್ನು ನಿವಾರಿಸಿದರು. 2019 ರ ಅಂತ್ಯದ ವೇಳೆಗೆ ಯುನಿಸೆಫ್​ ರೂಪಿಸಿದ 2018-2020 ರ ಕಾರ್ಯತಂತ್ರದ ಶೇ. 70 ರಷ್ಟು ಗುರಿಯನ್ನು ಸಾಧಿಸಿದೆ.

ಅಪೌಷ್ಟಿಕತೆಯನ್ನು ತಡೆಗಟ್ಟಲು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ 307 ಮಿಲಿಯನ್ ಮಕ್ಕಳಿಗೆ ಸಹಾಯ, ಶಾಲೆಯಿಂದ ಹೊರಗುಳಿದ 17 ಮಿಲಿಯನ್ ಮಕ್ಕಳ ಶಿಕ್ಷಣಕ್ಕಾಗಿ ಸಹಾಯ, ಇದು 2019 ರಲ್ಲಿ ಯುನಿಸೆಫ್​ ಮಾಡಿದ ದೊಡ್ಡ ಸಾಧನೆಯಾಗಿದೆ.

4 ಮಿಲಿಯನ್ ಕೌಶಲ್ಯ ಅಭಿವೃದ್ಧಿ ಹೊಂದಿರುವ ಮಕ್ಕಳು ಮತ್ತು ಯುವಕರು, ನೈರ್ಮಲ್ಯದೊಂದಿಗೆ ಸುರಕ್ಷಿತ ಕುಡಿಯುವ ನೀರಿನ ಸೌಲಭ್ಯ ಹೊಂದಿರುವ 18.3 ಮಿಲಿಯನ್ ಜನರು ಮತ್ತು 96 ದೇಶಗಳಲ್ಲಿ 281 ತುರ್ತು ಪರಿಸ್ಥಿತಿಗಳಲ್ಲಿ ಮಾನವೀಯ ನೆರವು. ಇದು ಯುನಿಸೆಫ್​ ಮತ್ತು ಪಾಲುದಾರರ ಸಾಧನೆಯಾಗಿದೆ.

2019 ರಲ್ಲಿ, ಅಂತರ್ ಸರ್ಕಾರಿ ಸಂಸ್ಥೆಗಳು ಮತ್ತು ಅಂತರ್-ಸಾಂಸ್ಥಿಕ ವ್ಯವಸ್ಥೆಗಳೊಂದಿಗೆ ಯುನಿಸೆಫ್‌ನ 137 ಸರ್ಕಾರಿ ಪಾಲುದಾರರು 4.7 ಬಿಲಿಯನ್ ಡಾಲರ್​ ಸಹಾಯಧನ ನೀಡಿವೆ.

ABOUT THE AUTHOR

...view details