ಹೈದರಾಬಾದ್:ಯುನೆಸ್ಕೋ (UNESCO )ವಿಶ್ವ ಪರಂಪರೆ ಸಮಿತಿಯ 44ನೇ ಅಧಿವೇಶನದಲ್ಲಿ ಭಾರತದ ಮತ್ತೊಂದು ದೇವಸ್ಥಾನಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಸಿಕ್ಕಿದೆ. ತೆಲಂಗಾಣದ ಐತಿಹಾಸಿಕ ರಾಮಪ್ಪ ದೇವಸ್ಥಾನವನ್ನು ಅಂತಾರಾಷ್ಟ್ರೀಯ ಮನ್ನಣೆ ನೀಡಿ ಗೌರವಿಸಲಾಗಿದೆ.
ಯುನೆಸ್ಕೋ ಇದನ್ನು ವಿಶ್ವ ಪರಂಪರೆಯ ತಾಣವೆಂದು ಗುರುತಿಸಿದೆ. ರಾಮಪ್ಪ ದೇವಾಲಯವು ಭಾರತದ ಅತ್ಯುತ್ತಮ ಶಿಲ್ಪಕಲೆಗಾಗಿ ಹೆಸರುವಾಸಿಯಾಗಿದೆ. ಚೀನಾದಲ್ಲಿ ನಡೆಸಿದ ವಿಶ್ವ ಪರಂಪರೆ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಯುನೆಸ್ಕೋ ಅಧಿವೇಶನದಲ್ಲಿ 12 ನೇ ಶತಮಾನದ ಕಾಕತಿಯನ್ರ ವಾಸ್ತುಶಿಲ್ಪದ ಅದ್ಭುತವನ್ನು ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರ್ಪಡೆಗೊಳಿಸುವುದಾಗಿ ಪ್ರಕಟಿಸಿದೆ. ಯುನೆಸ್ಕೋ ವಿಶ್ವ ಪರಂಪರೆ ಸಮಿತಿಯ 44 ನೇ ಸಭೆ ಚೀನಾದ ಫ್ಯೂಜ್‌ನಲ್ಲಿ ನಡೆಯಿತು. ಈ ಸಭೆ ಕಳೆದ ವರ್ಷ ಜೂನ್‌ನಲ್ಲಿ ನಡೆಸಬೇಕಾಗಿತ್ತು. ಆದರೆ ಕೊರೊನಾ ಸಾಂಕ್ರಾಮಿಕ ಕಾರಣ ಅದನ್ನು ಮುಂದೂಡಲಾಗಿತ್ತು.